ಯಾದಗಿರಿ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಿನ್ನೆ ತಾಲ್ಲೂಕಾ ದಂಡಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಜನರ ಹಿತ ಕಾಪಾಡಬೇಕಾದ ರಾಜ್ಯ ಸರ್ಕಾರ ಇಂದು ರೈತರಿಗೆ ಹಾಗೂ ಕೂಲಿಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲ ಸಕಾಲಕ್ಕೆ ಸರಿಯಾಗಿ ಮಳೆ ಬಾರದೇ ಅಲ್ಪಸ್ವಲ್ಪ ಮಳೆ ಬಂದಿದ್ದರಿಂದ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ ಸರಿಯಾಗಿ ಮಳೆ ಬಾರದೇ ಇರುವುದರಿಂದ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ.ರೈತರು ಸಾಲ ಮಾಡಿ ಬೆಳೆಗಳಿಗೆ ಎಣ್ಣೆ, ಗೊಬ್ಬರ ಮತ್ತು ಕೂಲಿ ಆಳುಗಳಿಗೆ ಸಾಕಷ್ಟು ಖರ್ಚು ಮಾಡಿಕೊಂಡಿರುತ್ತಾರೆ.
ಸರಿಯಾಗಿ ಮಳೆ ಬಾರದೇ ಇರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಈಗಾಗಲೇ ಮಾರ್ಕೆಟ್ ನಲ್ಲಿ ಶೇಂಗಾ,ಬೀಜ,ಗೊಬ್ಬರ ಕೀಟನಾಶಕಗಳ ದರ ಗಗನಕ್ಕೇರಿದೆ ಎಂದು ರೈತ ಮುಖಂಡರು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಬ್ಯಾಂಕ್ ಗಳಲ್ಲಿ ರೈತರಿಗೆ ಸಾಲ ಕೊಡುವುದಕ್ಕೂ ರಾಜ್ಯ ಸರ್ಕಾರ ಹಲವಾರು ತಾರತಮ್ಯ ಮಾಡುತ್ತಿದೆ.ಸಹಕಾರಿ ಬ್ಯಾಂಕ್ ಗಳಿಂದ ರೈತರಿಗೆ ಸಾಲ ಕೊಡಲು ತಾರತಮ್ಯ ಮಾಡುತ್ತಿದ್ದಾರೆ. ಬ್ಯಾಂಕಿನ ಸಿಬ್ಬಂದಿಯವರು ಒಂದೇ ಜಾಗದಲ್ಲಿ 10 ರಿಂದ 15 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಬ್ಯಾಂಕಿನ ಕಾರ್ಯದರ್ಶಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದರು.ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದೆ ಇಡೀ ರಾಜ್ಯದಲ್ಲಿ 161 ತಾಲೂಕುಗಳನ್ನು ಬರಗಾಲ ಪೀಡಿತ ಘೋಷಿಸಿದೆ. ಆದರೆ ಇದರಲ್ಲಿ ಅತಿ ಹೆಚ್ಚು ಬರಗಾಲದಿಂದ ತೊಂದರೆ ಅನುಭವಿಸಿದ ಜಿಲ್ಲೆ ಅದು ಯಾದಗಿರಿ ಆದಷ್ಟು ಬೇಗ ತಾಲೂಕ ದಂಡಾಧಿಕಾರಿ ರೈತರಿಗೆ ಸ್ಪಂದಿಸುವ ಕೆಲಸ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ಒತ್ತಾಯಿಸುತ್ತಿದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಯಾದಗಿರಿ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಜುಂಪಾ, ತಾಲೂಕ ಕಾರ್ಯದರ್ಶಿ ವೆಂಕಟೇಶಗೌಡ ಕುಪಗಲ್, ಖಜಾಂಚಿ ರಾಘು ಕುಪಗಲ್,ತಾಲೂಕ ಉಪಾಧ್ಯಕ್ಷ ಭೀಮನಗೌಡ ಕಾರ್ನಾಳ,ಗೌರವಾಧ್ಯಕ್ಷ ಮಲ್ಲಣ ಹಾಲಭಾವಿ,ಮಾನಪ್ಪ ಕೊಂಬಿನ್,ಹನಮಗೌಡ ನಾರಾಯಣಪುರ,ರತ್ನಪ್ಪ ಪೂಜಾರಿ,ಗೆದಪ್ಪ ನಾಗಬೇನಾಳ,ದೇವಪ್ಪ ತಿಪ್ಪನಟಿಗಿ,ಮರೆಪ್ಪ ನಗರಗುಂಡ,ತಿಪ್ಪಣ್ಣ ತಳವಾರ್,ದೇವಣ್ಣ ಎರಕೆಹಾಳ,ಲೋಹಿತಕುಮಾರ ಮಂಗಿಹಾಳ,ಪ್ರಭು ದೊರೆ,ಪರಮಣ್ಣ ಬಾಣಂತಿಹಾಳ,ನಾಗಪ್ಪ ಕುಪಗಲ್,ಶಿವು ಸೂಗುರ್,ಮರೆಪ್ಪ ಹಲವಾರು ರೈತ ಸದಸ್ಯರು ಭಾಗವಹಿಸಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ್
