ಶಿವಮೊಗ್ಗ ಸೊರಬ ತಾಲೂಕಿನ
ಆನವಟ್ಟಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಪೂರೈಸಿರುವ 2 ಜೊತೆ ಸಮವಸ್ತ್ರ ಬಟ್ಟೆಗಳು ಕಳಪೆ ಗುಣ ಮಟ್ಟದಿಂದ ಕೂಡಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಸರ್ಕಾರ ನೀಡುವ 1 ಸಮವಸ್ತ್ರದ ಜೊತೆಗೆ ಬೇರೆ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ವಿತರಿಸಲಾಗುತ್ತದೆ ಈ ಬಾರಿ ಸಮವಸ್ತ್ರದ ಗುತ್ತಿಗೆದಾರನು ಹೆಚ್ಚು ಹಣ ಪಡೆದು ಕನಿಷ್ಟ ಗುಣ ಮಟ್ಟದ ಬಟ್ಟೆ ನೀಡಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ 8ನೇ ತರಗತಿಯ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೂರೈಸಿರುವ ಬಟ್ಟೆಗಳ ಬೆಲೆ ಮಾರುಕಟ್ಟೆಯಲ್ಲಿ 350ರೂಪಾಯಿ ಅದರೆ ಪ್ರತಿ ಮಕ್ಕಳಿಂದ ಗುತ್ತಿಗೆದಾರ 850ರೂಪಾಯಿ ಪಡೆದಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.
ಪ್ರತಿ ವರ್ಷ ಪಾಲಕರ ಒಪ್ಪಿಗೆ ಪಡೆದು ಸಮವಸ್ತ್ರ ಪೂರೈಸಲಾಗುತ್ತಿತ್ತು ಶಿಕ್ಷಕರು ಮತ್ತು ಶಾಲಾ ಅಭವೃದ್ಧಿ ಸಮಿತಿಯವರು ಸ್ಥಳೀಯ ವ್ಯಾಪಾರಿಗಳ ಜೊತೆ ಪಾಲಕರಿಗೆ ಹೊರೆಯಾಗದಂತೆ
ಗುಣಮಟ್ಟದ ಸಮವಸ್ತ್ರ ಬಟ್ಟೆಯನ್ನು ಪೂರೈಸುವಂತೆ ಒಪ್ಪಂದ ಮಾಡಿಕೊಳ್ಳುತ್ತಿದ್ದರು.ಆದರೆ ಈ ವರ್ಷ ಕಾಲೇಜು ಅಭಿವೃದ್ಧಿ ಸಮಿತಿಗೆ ಹೊಸದಾಗಿ ನೇಮಕವಾಗಿರುವ ಸದಸ್ಯರು ಯಾರ ವಿಶ್ವಾಸ ಪಡೆಯದೆ ಸಮವಸ್ತ್ರ ಗುತ್ತಿಗೆ ನೀಡಿದ್ದಾರೆ ಎಂದು ಉಪ ಪ್ರಾಂಶುಪಾಲರು ಮಹದೇವಪ್ಪ ತಿಳಿಸಿದರು.
ಗುತ್ತಗೆದಾರರ ಸಂಗಮೇಶ್ ಗಾಳಪೂಜಿ ಕಡಿಮೆ ಬೆಲೆಗೆ ಗುಣ ಮಟ್ಟದ ಬಟ್ಟೆಗಳನ್ನು ವಿತರಿಸುವುದಾಗಿ ಭರವಸೆ ನೀಡಿದ್ದರು ಈಗ ಕಳಪೆ ಗುಣಮಟ್ಟದ ಸಮವಸ್ತ್ರ ವಿತರಿಸಿದ್ದು ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ ಆದ್ದರಿಂದ ಈ ವಿಷಯದ ಬಗ್ಗೆ ಕಾಲೇಜು ಅಭಿವೃದ್ಧಿ
ಅಧ್ಯಕ್ಷರಾಗಿರುವ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯ ನಾಗರಾಜ್ ಶುಂಠಿ ವಿವರಿಸಿದ್ದಾರೆ .
ಈ ಗುತ್ತಿಗೆದಾರನು ಹೆದರಿಸಿ ವಾಮಮಾರ್ಗದ ಹಾದಿಯಲ್ಲಿ ಗುತ್ತಿಗೆ ಪಡೆದು ಸಮವಸ್ತ್ರ ವಿತರಣೆಯಲ್ಲಿ ವಂಚನೆ ಮಾಡಿದ್ದು ಇವನು ಪಡೆದ ಎಲ್ಲಾ ಟೆಂಡರ್ ಗಳನ್ನು ಈ ಕೂಡಲೇ ರದ್ದು ಮಾಡಬೇಕು ಎಂದು ಇದಕ್ಕೆ ಸಂಬಂದಿಸಿದ ಅಧಿಕಾರಿಗಳಿಗೆ ಪೋಷಕರು ಮತ್ತು ಸಾರ್ವಜನಿಕ ರಿಂದ ಮನವಿ.
ವರದಿ-ಶರತ್ ಗೌಡರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.