ಸಿರುಗುಪ್ಪ ನಗರದ ಪೋಲಿಸ್ ಠಾಣೆಯ ಅಧಿಕಾರಿಗಳು ಕಳವು ಮಾಲುಗಳನ್ನು ಪತ್ತೆ ಕಾರ್ಯ ಮಾಡಿದ್ದಾರೆ
ಸಿರುಗುಪ್ಪ ನಗರದ 14ನೇ ವಿಭಾಗದ 52ವರ್ಷದ ಕೃಷಿಕ ರಾಮರಾವ್ ತಂದೆ ತಿಮ್ಮರಾಜು ಇವರು ಠಾಣೆಯಲ್ಲಿ ದೂರು ದಾಖಲಿಸಿದ್ದು ಕಳೆದ ತಿಂಗಳು 23 ಮತ್ತು 24ನೇ ತಾರೀಕಿನಂದು
ತಾವು ಕಳೆದ 20ವರ್ಷಗಳ ಹಿಂದೆ ಕೃಷಿ ಕೆಲಸಕ್ಕಾಗಿ ಹಸಿರು ಬಣ್ಣದ ಟ್ರ್ಯಾಕ್ಟರ್ ಟ್ರಾಲಿ ಕೆಎ 37 ಟಿ 1207 ಖರೀದಿ ಮಾಡಿದ್ದಾರೆ ದಿನಾಂಕ 23ರಂದು ರಾತ್ರಿ ಹತ್ತು ಗಂಟೆಗೆ ಸಿರುಗುಪ್ಪ ಪಟ್ಟಣದ ತಮ್ಮ ಮನೆ ಮುಂದೆ ಟ್ರ್ಯಾಕ್ಟರ್ ಮತ್ತು ಟ್ರಾಲಿಯನ್ನು ನಿಲ್ಲಿಸಿ ಮನೆಗಳಿಗೆ ಹೋಗಿ ಊಟ ಮಾಡಿ ಮಲಗಿದ್ದು ಮಾರನೇ ದಿನ ಬೆಳಿಗ್ಗೆ 7ಗಂಟೆ ಸುಮಾರಿಗೆ ಎದ್ದು ರ್ಯಾಲಿಯನ್ನು ನೋಡಲು ಕಾಣಲಿಲ್ಲ ಇದರಿಂದ ಗೆಳೆಯರೊಂದಿಗೆ ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ ಕಾರಣ ಅಂದಾಜು ಐವತ್ತು ಸಾವಿರ₹ಬೆಲೆಯುಳ್ಳ ಟ್ರಾಲಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ ಪ್ರಕರಣ ಪತ್ತೆ ಮಾಡಿಕೊಡುವಂತೆ ದೂರು ದಾಖಲಿಸಿದ್ದರು
ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಸಿರುಗುಪ್ಪ ಪೊಲೀಸ್ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿ ಉಪ್ಪಳ ಗ್ರಾಮ ಕೆಸರ ಕುಣಿ ಗ್ರಾಮ ಸೇರಿದಂತೆ ಇತರೆಡೆ 4ಜನ ಆರೋಪಿಗಳನ್ನು ಬಂಧಿಸಿದ್ದಾರೆ ಆರೋಪಿಗಳಿಂದ 1ಟ್ರ್ಯಾಕ್ಟರ್ ಎಂಜಿನ್ 1ಟ್ರಾಲಿ 1ಹಳೆಯ ಟ್ರಾಲಿ ಮತ್ತು ಕೃಷಿ ಉಪಕರಣಗಳು ಟಿಲ್ಲರ್ ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳರಿಂದ ವಶಕ್ಕೆ ಪಡೆದು ಕಾನೂನು ರೀತ್ಯ ಕ್ರಮ ಜರುಗಿಸುತ್ತಿದ್ದಾರೆ
ವಶಪಡಿಸಿಕೊಂಡ ವಾಹನ ಖಾಲಿ ಮತ್ತು ಇನ್ನಿತರ ವಸ್ತುಗಳೊಂದಿಗೆ ಫೋಟೋ ಸಹಿತವಾಗಿ ಪೊಲೀಸ್ ಅಧಿಕಾರಿಗಳು ವಿವರಣೆ ನೀಡಿದ್ದಾರೆ
ಈ ಸಂದರ್ಭದಲ್ಲಿ ಪಿಎಸ್ ಐ ರಂಗಯ್ಯ ಕೆ ಕ್ರೈಂ ಪಿಎಸ್ ಐ ಗಂಗಾಧರ್ ಮತ್ತು ಸಿಬ್ಬಂದಿಗಳಾದ ದ್ಯಾಮನಗೌಡ ಇದ್ದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ