ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಾಲ್ಮೀಕಿ ದೇಶದ ಆದಿಕವಿ:ಸಚಿವ ಸತೀಶ್ ಜಾರಕಿಹೊಳಿ.

ಗುಂಡ್ಲುಪೇಟೆ:ದೇಶದ ಇತಿಹಾಸದಲ್ಲಿ ಸಾವಿರಾರು ವರ್ಷಗಳ ಹಿಂದೆ ಗ್ರಂಥಗಳನ್ನು ರಚಿಸಿದ ವಾಲ್ಮೀಕಿ ದೇಶದ ಆದಿ ಕವಿಯಾಗಿದ್ದು ತಾವು ಬರೆದ ರಾಮಾಯಣದಲ್ಲಿ ಯಾವ ರೀತಿ ಬದುಕಬೇಕು, ನಮ್ಮ ವಿಚಾರಗಳು ಮತ್ತು ಕಲ್ಪನೆಗಳು ಹೇಗಿರಬೇಕು ಎಂಬುದಕ್ಕೆ ದಾರಿ ತೋರಿಸಿದ್ದಾರೆ ಹಾಗಾಗಿ ಅವರ ಹಾಕಿಕೊಟ್ಟ ವಿಚಾರ ಮೈಗೂಡಿಸಿಕೊಂಡು ಅವರ ತತ್ವ ಸಿದ್ದಾಂತದಲ್ಲಿ ನಡೆಯಬೇಕು ಎಂದು ಹೇಳಿದರು.
ಪಟ್ಟಣದ ಡಿ.ದೇವರಾಜು ಅರಸು ಕ್ರೀಡಾಂಗಣದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಜಯಂತಿ ಎಂದರೆ ವರ್ಷಕ್ಕೆ ಒಂದು ಬಾರಿ ಆಚರಿಸುವುದಲ್ಲ ಮತ್ತು ಮೆರವಣಿಗೆ ಮಾಡುವುದಲ್ಲ ಈ ವಾಲ್ಮೀಕಿ ಜಯಂತಿ ಆಚರಣೆಯಿಂದ ನಮ್ಮ ನಿಮ್ಮೆಲ್ಲರ ಮತ್ತು ಸಮಾಜದ ಬದಲಾವಣೆಗೆ ವೇದಿಕೆಯಾಗಬೇಕು ಎಂದರು.
ವಾಲ್ಮೀಕಿ ನಾಯಕ ಸಮಾಜ ಇತಿಹಾಸದಲ್ಲಿ ಸಾಕಷ್ಟು ಮಹನೀಯರನ್ನು ನಾಯಕರನ್ನು ದೇಶಕ್ಕೆ ಮತ್ತು ರಾಜ್ಯಕ್ಕೆ ಕೊಟ್ಟಿದೆ,ವಾಲ್ಮೀಕಿಯವರು ನಮಗೆ ಆದರ್ಶವಾಗಬೇಕು ಮತ್ತು ಅವರ ಗ್ರಂಥದಲ್ಲಿನ‌ ಮಾನವೀಯ ಮೌಲ್ಯಗಳ ವಿಚಾರಗಳನ್ನು ನೋಡಬೇಕಾಗಿದೆ,ರಾಮಾಯಣ ಗ್ರಂಥದಲ್ಲಿ ಮನುಷ್ಯರನ್ನ ಮನುಷ್ಯರಂತೆ ಕಾಣಬೇಕು ಮತ್ತು ‌ಅವರನ್ನು ಗೌರವಿಸಬೇಕು ಎಂದು ಗ್ರಂಥದಲ್ಲಿ ತಿಳಿಸಿದೆ ಎಂದು ಹೇಳಿದರು.
ನಮ್ಮ ಸಮಾಜ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದೆ ಬರಬೇಕು ಎನ್ನುವ ನಿಟ್ಟಿನಲ್ಲಿ ಹಲವರು ಸಾಕಷ್ಟು ಹೋರಾಟ ಮಾಡಿದ್ದಾರೆ,ನಮ್ಮ ಸರಕಾರ ಅಭಿವೃದ್ಧಿ ಗೆ ಸರ್ಕಾರ ಸಾಕಷ್ಟು ಸವಲತ್ತು ನೀಡಿದೆ, ಶೈಕ್ಷಣಿಕ ಉದ್ದೇಶಕ್ಕೆ ವಿದೇಶಕ್ಕೆ ಹೋಗಲು ಅವಕಾಶ ಕಲ್ಪಿಸಿದೆ ಎಂದರು.
ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ ಶಿಕ್ಷಣಕ್ಕರೆ ಹೆಚ್ಚಿನ ಒತ್ತುನೀಡಿದೆ,ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸಾಮಾನ್ಯ, ಹಿಂದುಳಿದ ಹಾಗೂ ಎಸ್ ಸಿ ಮತ್ತು ಎಸ್ ಟಿ‌ ಮಕ್ಕಳ ‌ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ರಾಜ್ಯಾದ್ಯಂತ ವಸತಿ ಶಾಲೆಗಳನ್ನು ತೆರೆಯಲಾಗಿದ್ದು ವಿದ್ಯಾವಂತ ಸಮಾಜ ನಿರ್ಮಾಣ ಮಾಡಲು ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.
ವಾಲ್ಮೀಕಿ ರಾಮಾಯಣದ ಬಗ್ಗೆ ಇನ್ನಷ್ಟು ಬೆಳಕು ಚಲ್ಲಬೇಕು ಮತ್ತಷ್ಟು ವಿಷಯಗಳು ಜನರಿಗೆ ತಿಳಿಯುವಂತೆ ಮಾಡಬೇಕು.ಗ್ರಂಥದಲ್ಲಿರುವ ಎಲ್ಲಾ ಸಂದೇಶ ಅನುಸರಿಸಿ ‌ಎಂದು ಸಲಹೆ ನೀಡಿದರು.
ದಿವಂಗತ ‌ಮಾಜಿ‌ ಸಚಿವ ಮಹದೇವಪ್ರಸಾದ್ ಉತ್ತಮ ರಾಜಕಾರಣಿಯಾಗಿದ್ದು ತಾಲ್ಲೂಕು ಮತ್ತು ಜಿಲ್ಲೆಯ ಅಭಿವೃದ್ಧಿಗೆ ಅವರ ಸೇವೆ ‌ಸ್ಮರಣಿಯವಾಗಿದ್ದು ಅವರಿಗೆ ನೀಡಿದ ರಾಜಕೀಯ ಬೆಂಬಲವನ್ನು ‌ಅವರ ಮಗ ಶಾಸಕ‌ ಗಣೇಶ ಪ್ರಸಾದ್ ಅವರಿಗೂ ನೀಡುವಂತೆ ‌ಹೇಳಿದರು.
ಯುವಜನಸೇವೆ ಹಾಗೂ ಕ್ರೀಡಾ ಇಲಾಖೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಸಚಿವ ನಾಗೇಂದ್ರ ಮಾತನಾಡಿ
ಸಮಾಜ ಬಹಳ ಶಕ್ತಿಯಾಗಿ ಈ ಭಾಗದಲ್ಲಿ ಬೆಳೆಯುತ್ತಿದೆ.ಸ್ವಾಮೀಜಿ ಹೋರಾಟದಿಂದ 7% ಮೀಸಲಾತಿ ಪಡೆದಿದ್ದೇವೆ ಪರಿಶಿಷ್ಟ ವರ್ಗಗಳ
ಸಚಿವಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ ಸಮಾಜವನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದಾರೆ ಶೈಕ್ಷಣಿಕ,ರಾಜಕೀಯ ವಾಗಿ ಬೆಳೆಸಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡುವುದಾಗಿ‌ ಹೇಳಿದ್ದಾರೆ ಎಂದು ತಿಳಿಸಿದರು.
ವಾಲ್ಮೀಕಿ ಭವನಕ್ಕೆ 50 ಲಕ್ಷ ಅನುದಾನ ಘೋಷಣೆ: ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಅರ್ದಕ್ಕೆ ನಿಂತಿರುವ ವಾಲ್ಮೀಕಿ ಭವನ 50ಲಕ್ಷ ಅನುದಾನ ಮತ್ತು ‌ದೇವರಾಜು ಅರಸು ಕ್ರೀಡಾಂಗಣಕ್ಕೆ25 ಲಕ್ಷ ಅನುದಾನ ಘೋಷಣೆ ಮಾಡಿದರು.
ರಾಜ್ಯದಲ್ಲಿ ಕಾಮಗಾರಿ ಸ್ಥಗಿತವಾಗಿರುವ ವಾಲ್ಮೀಕಿ ಭವನ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು ಕಾಮಗಾರಿ ಪೂರ್ಣವಾಗದ ಭವನಗಳಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.ಸಮಾಜದವರು ಆರ್ಥಿಕ ವಾಗಿ ಮುಂದೆ ಬೆಳೆಯಲು ಇಲಾಖೆಯಿಂದ ಅನೇಕ ಯೋಜನೆ ಜಾರಿಗೊಳಿಸಿದ್ದು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ ಎಲ್ಲಾ ಸಮುದಾಯದವರನ್ನು ಸಮಾನಾಗಿ‌ ಕಾಣಬೇಕು ಎನ್ನುವ ಬಸವಣ್ಣನವರ ತತ್ತ್ವಗಳನ್ನು ಅಳವಡಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಎಲ್ಲರಿಗೂ ಸಮಾನ ಅವಕಾಶ ನೀಡಿದೆ ಎಂದರು.
ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆವು ಹಿಂದಿನ ಸರ್ಕಾರದಲ್ಲಿ ಪಟ್ಟಣದ ವಾಲ್ಮೀಕಿ ಭವನಕ್ಕೆ ಒಂದು ಪೈಸೆ ನೀಡದೆ ಇರುವುದು ದುರದೃಷ್ಟಕರ,ನಮ್ಮ ತಂದೆ ಮಹದೇಪ್ರಸಾದ್ ಅವರನ್ನು ವಿವಿಧ ಚಿಹ್ನೆಗಳಿಂದ ಸತತವಾಗಿ ಆಯ್ಕೆಮಾಡಿರುವ ನಿಮಗೆ
ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸಗಳನ್ನು ಮಾಡುತ್ತೆನೆ ಹಾಗೂ ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯವನ್ನು ಸಮಾನವಾಗಿ ನೋಡಿದ್ದರಿಂದ 135 ಸ್ಥಾನಗಳಿಸಿ ಅಧಿಕಾರಕ್ಕೆ ಬಂದಿತು ಎಂದು ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದ ಕಾಮಗಾರಿ ಶೇಕಡಾ 80% ಪೂರ್ಣ ಗೊಂಡಿದ್ದು ಮುಂದಿನ ದಿನಗಳಲ್ಲಿ ವಾಲ್ಮೀಕಿ ಭವನ ಉದ್ಘಾಟನೆಯಾಗಿ ತಾಲ್ಲೂಕಿನ ಜನತೆಗೆ ಉಪಯೋಗವಾಗಲಿ ಎಂದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ,
ಸಂಪೂರ್ಣ ರಾಮಾಯಣ ಪಡೆದ ಶ್ರೇಷ್ಠ ಕವಿ ವಾಲ್ಮೀಕಿ.ರಾಮನ ಪರಿಚಯ ಮಾಡಿಕೊಟ್ಟವರು ವಾಲ್ಮೀಕಿ ಅವರ ಪುತ್ತಳಿಯನ್ನುಅಯೋಧ್ಯೆಯಲ್ಲಿ ನಿರ್ಮಾಣಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ಮುಖ್ಯ ಹೆದ್ದಾರಿಯಲ್ಲಿ ವಾಲ್ಮೀಕಿ ಪುತ್ಥಳಿಯನ್ನು ನಿರ್ಮಿಸಬೇಕು ಎಂದು ಶಾಸಕ ಗಣೇಶ ಪ್ರಸಾದ್ ಅವರಿಗೆ ಮನವಿ ಮಾಡಿಕೊಂಡರು ಹಾಗೂ ವಾಲ್ಮೀಕಿ ಭವನಕ್ಕೆ ಒಂದು ಕೋಟಿ ಅನುದಾನ ಬಿಡುಗಡ ಮಾಡುವಂತೆ ಸಚಿವ ನಾಗೇಂದ್ರ ಅವರನ್ನು ‌ಒತ್ತಾಯಿಸಿದರು.
ಮುಖ್ಯ ಭಾಷಣಕಾರರಾದ ಡಾ.ಅನುಸೂಯ ಎಸ್.ಕೆಂಪನಹಳ್ಳಿ ಮಾತನಾಡಿ ಅಂಬೇಡ್ಕರ್,ಗಾಂಧೀಜಿ ಹಾಗೂ ಕುವೆಂಪು ಸೇರಿದಂತೆ ಅನೇಕ ಮಹನೀಯರು ವಾಲ್ಮೀಕಿ ರಾಮಾಯಣ ಮೆಚ್ಚಿದ್ದಾರೆ.
ಅಹಿಂಸಾ ವಾದದ ಹಿನ್ನೆಲೆ ರಾಮಾಯಣ ರಚನೆಯಾಗಿದೆ.
ತಳ ಸಮುದಾಯ ವ್ಯಕ್ತಿ ಶಿಕ್ಷಣದಿಂದ ಮಾತ್ರ ಮುಂದೆ ಬರಲು ಸಾಧ್ಯ ಎನ್ನುವುದನ್ನು ಮಹರ್ಷಿ ವಾಲ್ಮೀಕಿ ನಿರೂಪಿಸಿದ್ದಾರೆ,ಸ್ತ್ರೀ ಪುರುಷರಲ್ಲಿ ಸಮಾನತೆ ತರುವುದು ವಾಲ್ಮೀಕಿ ಧ್ಯೇಯವಾಗಿತ್ತು ಮಹಿಳೆಯರಿಗೆ ಹೆಚ್ಚಿನ ಮನ್ನಣೆಯನ್ನು ರಾಮಾಯಣದಲ್ಲಿ ನೀಡಿದ್ದಾರೆ,
ಕಾಂಗ್ರೆಸ್ ಸರ್ಕಾರವೂ ಕೂಡಾ ಉಚಿತ ಭಾಗ್ಯಗಳ ಮೂಲಕ ಹಿಂದುಳಿದವರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರಾಧ್ಯಾಪಕ ನೀಲಕಂಠ ನಾಯಕ,ಸುಬ್ಬನಾಯಕ,ರಾಜೇಶ್ ನಾಯಕ ಸೇರಿದಂತೆ ಇನ್ನಿತರ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ‌ಶಾಸಕ ದರ್ಶನ್ ಧ್ರುವ ನಾರಯಣ್,ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ,ಮಾಜಿ ಶಾಸಕ ಕಳಲೆ ಕೇಶವಮೂರ್ತಿ,ಪುರಸಭೆ ಸದಸ್ಯ ಎನ್.ಕುಮಾರ್,ಶ್ರೀನಿವಾಸ್ ಕಣ್ಣಪ್ಪ,ಕಾರ್ಗಳ್ಳಿ ಸುರೇಶ್,ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್,ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ,ಮಾಜಿ ಸಂಸದ ಎ.ಸಿದ್ದರಾಜು, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್,ಜಿಪಂ ಮಾಜಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಬಿ.ಎಂ.ಮುನಿರಾಜು,ಕಬ್ಬಹಳ್ಳಿ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು,ಪುರಸಭಾ ಮಾಜಿ ಅಧ್ಯಕ್ಷ ವೆಂಕಟಾಚಾಲ,
ತಹಸೀಲ್ದಾರ್ ಟಿ.ರಮೇಶ್ ಬಾಬು,ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ,
ಶ್ರೀನಿವಾಸನಾಯಕ,ಸೈಕಲ್ ಶಾಪ್ ಶಿವು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ