ನೆಮ್ಮದಿಯ ನಾಳೆಗೆ
ಬೇಗುದಿಯ ದಿನಮಾನದಿ
ಸವೆಯುತಿರುವ ಬದುಕಿನ
ಇರುವಿಕೆಗಾಗಿ ಹುಡುಕಾಟ.
ಬರಸೆಳೆವ ಸವಾಲಲು
ಗರಬಡಿಸುವ ಮನದಲಿ
ಸಮರಸಕ್ಕಾಗಿ ಹಂಬಲದಿ
ಬೆಂಬಿಡದೆ ಹುಡುಕಾಟ.
ಇರದ ಇರುವಿಕೆಯಲಿ
ಭಾರದ ಹೃದಯದಿ
ಆರದ ಗಾಯದಲೂ
ತೀರದ ದಾಹಕೆ ಹುಡುಕಾಟ.
ಇದ್ದುದನು ದೂಡಿ
ಸಿಗದ ಸಂತಸಕೆ ಹಂಬಲದಿ
ಆಗುಂತಕರ ನಡೆಯಲೂ
ತಾರೆಗಾಗಿ ಹುಡುಕಾಟ.
ತಂಟೆ ತಗಾದೆಯಲಿ
ಗಿರಿಗಿಟ್ಟಲೆ ಜೀವನದಿ
ಗರಿ ಬಿಚ್ಚುವ ತವಕದಿ
ನನ್ನೊಳಗಿನ ಹುಡುಕಾಟ.
ಭಿನ್ನ ಮತದಲೂ
ಗುನ್ನ ನೀಡುವವರ ಎದರಲೂ
ತಿದ್ದಿ ತೀಡುವ ಭರದಿ
ಸಾಧನೆಯ ಸಿದ್ಧಿಗಾಗಿ ಹುಡುಕಾಟ. ಼
–ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು