ಪಾವಗಡ ದಲಿತ ಮುಖಂಡರಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಲಾಯಿತು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದಲಿತ ಮುಖಂಡರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ನವೆಂಬರ್ 26,1949 ರಂದು ಭಾರತ ದೇಶಕ್ಕೆ ವಿಶ್ವದಲ್ಲಿಯೇ ಬೃಹತ್ ಸಂವಿಧಾನವನ್ನು ರಚಿಸಿ ಭಾರತ ಸರ್ಕಾರಕ್ಕೆ ಸಮರ್ಪಿಸಿ ಭಾರತ ದೇಶದ ಪ್ರಜಾಪ್ರಭುತ್ವದ ಆಶೋತ್ತರಗಳನ್ನು ಈಡೇರಿಸುವ ದಿಕ್ಕಿನಲ್ಲಿ ಹೆಜ್ಜೆ ಇಡುವಂತೆ ಮತ್ತು ದೇಶದ ದೀನ ದಲಿತರ ಮತ್ತು ಬಡವರಿಗೆ ಮತ್ತು ದೇಶದಲ್ಲಿ ತುಳಿತಕ್ಕೆ ಒಳಾಗದವರಿಗೆ ನ್ಯಾಯವನ್ನು ದೋಕಿಸಿ ಕೊಡುವಂತ ಭಾರತದ ಗ್ರಂಥವೆಂದು ಪೂಜಿಸುವ ಸಂವಿಧಾನವನ್ನು ಸ್ವತಂತ್ರ ಭಾರತಕ್ಕೆ ಅರ್ಪಿಸಿದ ದಿನವನ್ನು ಪಾವಗಡ ತಾಲೂಕಿನ ದಲಿತ ಮುಖಂಡರು ಸಂವಿಧಾನದ ಪೀಠಿಕೆಯನ್ನು ಬೋಧಿಸುವ ಮೂಲಕ “ಸಂವಿಧಾನ ಸಮರ್ಪಣೆ ದಿನವನ್ನು ಆಚರಿಸಿದರು ಈ ಸಂಧರ್ಭದಲ್ಲಿ ದಲಿತ ಮುಖಂಡರುಗಾಳಾದ ಭೀಮನಕುಂಟೆ ರಾಮಾಂಜನಪ್ಪ,ಆಟೋಪಾತಣ್ಣ,HGಮಲ್ಲಿಕಾರ್ಜುನ,ಹೊನ್ನುರಸ್ವಾಮಿ,ರಾಮಕೃಷ್ಣ,Dಗೋಪಾಲಪ್ಪ,ರವಿ,ಹನುಮಂತರಾಯಪ್ಪ,ಮಾರಪ್ಪ,ಚನ್ನಕೇಶವ,
ನಾಗರಾಜು,ನಾರಾಯಣಪ್ಪ ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಿದರು.
ವರದಿಗಾರರು-ಪೃಥ್ವಿರಾಜ್.ಜಿ ವಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.