ಬೀದರ್: ಅಂಬೇಡ್ಕರ್ ಅವರು ಅಪ್ರತಿಮ ಜ್ಞಾನಿಯಾದ ಕಾರಣ ಭಾರತದ ಸಂವಿಧಾನ ರಚಿಸುವ ಹೊಣೆ ಅವರ ಮೇಲೆ ಬಂದಿತ್ತು ಅದನ್ನು ಸಮರ್ಥವಾಗಿ ನಿಭಾಹಿಸಿದಲ್ಲದೇ ಇಡೀ ಜಗತ್ತೇ ಹೊಗಳುವಂತಹ ಸಂವಿಧಾನವನ್ನು ರಚಿಸಿ ವಿಶ್ವಕ್ಕೆ ಮಾದರಿಯಾಗಿದ್ದಾರೆ.ಅವರ ಹೋರಾಟವೇ ಒಂದು ಇತಿಹಾಸವಾಗಿದ್ದು ಅದನ್ನು ಅರಿತುಕೊಂಡು ಸಾಗಿದರೆ ಜೀವನದಲ್ಲಿ ಎಂದು ಕೂಡಾ ನಾವು ಸೋಲುವುದಿಲ್ಲ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಸಿ.ಕನಕಟ್ಟೆ ಅವರು ತಿಳಿಸಿದರು. ಹೈ.ಕ.ಶಿ.ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ,ಬೀದರನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಹಾಗೂ ಸಂವಿಧಾನ ಪ್ರತಿಜ್ಞಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನದ ಕುರಿತು ಹೇಳಬೇಕಾದರೆ ಒಂದು ಗಂಟೆ,ಒಂದು ದಿನ ಓದಿದರೆ ಅಥವಾ ಹೇಳಿದರೆ ಪೂರ್ಣವಾಗದು ಇಡೀ ಜೀವನದ ಉದ್ದಕ್ಕೂ ಅವರ ತತ್ವಾದರ್ಶಗಳನ್ನು ತಿಳಿದುಕೊಂಡು ಸಾಗಬೇಕಾಗಿದೆ.ಅಂಬೇಡ್ಕರ್ ಅವರ ಸಾಧನೆ ಇಡೀ ದೇಶಕ್ಕೆ ಸಮರ್ಪಿತವಾಗಿದೆ. ನಾವು ಇಂದಿನ ದಿನಮಾನಗಳಲ್ಲಿ ಸಂವಿಧಾನದ ಬಗ್ಗೆ ಸರಿಯಾಗಿ ಅರಿತುಕೊಳ್ಳದಿರುವುದು ಅಂಬೇಡ್ಕರ್ ಅವರನ್ನು ಅರಿತುಕೊಳ್ಳದಂತಾಗಿದೆ ಮಹಾತ್ಮರ ತತ್ವಾದರ್ಶಗಳು ಕೇವಲ ಆಚರಣೆಗೆ ಸೀಮಿತವಾಗದೇ ಎಲ್ಲಾ ಯುವಜನತೆಯ ಮಾರ್ಗದರ್ಶಿಯಾಗಬೇಕು,ಅಂದಾಗ ಅವರು ಜೀವನದ ಉದ್ದಕ್ಕೂ ಪಟ್ಟ ಕಷ್ಟಗಳಿಗೆ ಅರ್ಥ ಬರುತ್ತದೆ ಅಂತಹ ಮಹಾತ್ಮರಲ್ಲಿ ಅಂಬೇಡ್ಕರ್ ಅವರು ಒಬ್ಬರಾಗಿದ್ದು ಅವರ ಹೋರಾಟದ ಹಾದಿ ಅವರನ್ನು ಕೇವಲ ಭಾರತದ ನಾಯಕನಾಗಿ ಮಾತ್ರವಲ್ಲದೇ ವಿಶ್ವನಾಯಕನಾಗಿ ಮತ್ತು ವಿಶ್ವ ಜ್ಞಾನಿಯಾಗಿ ಗುರುತಿಸುವಂತೆ ಮಾಡಿದೆ ಎಂದು ಹೇಳಿದರು.
ಉಪನ್ಯಾಸಕರಾದ ವೀಣಾ ಜಲಾದಿ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಪ್ರೊ. ಸಂತೋಷಕುಮಾರ ಸಜ್ಜನ,ಶಿಲ್ಪಾ ಹಿಪ್ಪರಗಿ,ವೀಣಾ ಜಲಾದಿ,ರಾಜಕುಮಾರ ಶಿಂಧೆ,ಪಾಂಡುರಂಗ ಕುಂಬಾರ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಬಿ.ಇಡಿ.ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ವರದಿ:ಸಾಗರ ಪಡಸಲೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.