ನವಜಾತ ಶಿಶು,ತಾಯಂದಿರ ಕಂಡು ಆಸ್ಪತ್ರೆಯಲ್ಲಿ ಸೂಕ್ತ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ
ಯಾದಗಿರಿ ಹಳೆ ಜಿಲ್ಲಾಸ್ಪತ್ರೆಗೆ ರಾಜ್ಯ ಮಕ್ಕಳ ಆಯೋಗದ ಸದಸ್ಯರಾದ ಶ್ರೀ ಶಶಿಧರ್ ಕೋಸುಂಬೆ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.
ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ತಿಂಗಳಿಗೆ 700-800 ಹೆರಿಗೆ ದಾಖಲಾಗುತ್ತಿದ್ದು, ನವಜಾತ ಶಿಶುವಿನ ತೀವ್ರ ನಿಗಾ ಘಟಕದಲ್ಲಿ ಕೇವಲ 4 ವಾರ್ಮರ್,2 ಫೋಟೋ ಥೆರಪಿ ವ್ಯವಸ್ಥೆ ಇದೆ. ಒಂದೇ ವಾರ್ಮರ್ ನಲ್ಲಿ ಎರಡು ಮಕ್ಕಳಿಗೆ ವೈದ್ಯಕೀಯ ಉಪಚಾರ ಮಾಡುವುದರಿಂದ ಮಕ್ಕಳಿಗೆ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಆಸ್ಪತ್ರೆಯ ವೈದ್ಯರಿಗೆ ತಿಳಿಸಿ ಸೂಕ್ತ ವ್ಯವಸ್ಥೆ ಒದಗಿಸಲು ಸೂಚಿಸಿದರು.
ಆಸ್ಪತ್ರೆಯಲ್ಲಿ ಶೌಚಾಲಯಗಳು ಸ್ವಚ್ಛವಿಲ್ಲ, ನವಜಾತ ಶಿಶುವಿನ ತೀವ್ರ ನಿಗಾ ಘಟಕದಲ್ಲಿ ಸಿಸಿ ಕ್ಯಾಮರಾವಿಲ್ಲ,ವೈದ್ಯರು ಮತ್ತು ಸಿಬ್ಬಂದಿಗಳು ಸರಿಯಾಗಿ ಹಾಜರಾಗುತ್ತಿಲ್ಲ,ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲ,ಪೌಷ್ಠಿಕ ಆಹಾರ ನೀಡುತ್ತಿಲ್ಲ, ಸರಿಯಾದ ದಾಖಲಾತಿಯಿಲ್ಲ,ಹಣ್ಣು ತರಕಾರಿ ಮತ್ತು ಧಾನ್ಯಗಳು ಇಲ್ಲದೆ ಸಮಸ್ಯೆಗಳಿಂದ ಕೂಡಿದೆ.ಕಾರಣ ಈ ಕುರಿತು ಸೂಕ್ತ ನಿಗಾ ಇಡಲು ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚಿಸಿದರು.
ಫೋಟೋ ಥೆರಪಿ ಹತ್ತಿರದ ವಿದ್ಯುತ್ ಸ್ವಿಚ್ ಹಾಳಾಗಿ ಶಾರ್ಟ್ ಸರ್ಕ್ಯೂಟ್ ಆಗುವ ಸಂಭವವಿದೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದ ಅವರು,ಮಕ್ಕಳಿಗೆ ಸಮಸ್ಯೆಗಳಾದರೆ ಹೊಣೆ ಯಾರು ಎಂದರು.
ವರದಿ:ಶಿವರಾಜ ಸಾಹುಕಾರ ವಡಗೇರಾ