ರಾಯಚೂರು ಜಿಲ್ಲೆಯ ಸಿಂಧನೂರು ಹೊಸಳ್ಳಿ (ಇ.ಜೆ.)ಕ್ರಾಸ್ ನಲ್ಲಿರುವ ಅಕ್ಯೂ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಕಾರುಣ್ಯ ನೆಲೆ ಆಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಂದ ಅಕ್ಕಿ ಬೇಳೆ ಮತ್ತು ಇನ್ನಿತರ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಆಶ್ರಮಕ್ಕೆ ಎಲ್ಲಾ ವಿದ್ಯಾರ್ಥಿಗಳು ಭೇಟಿ ನೀಡಿ ಎಲ್ಲಾ ವೃದ್ಧರ ಬುದ್ಧಿಮಾಂದ್ಯರ ಯೋಗ ಕ್ಷೇಮವನ್ನು ವಿಚಾರಿಸಿ ಆಹಾರ ಸಂಜೀವಿನಿ ಕಾರ್ಯಕ್ರಮವನ್ನು ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಾಚಾರ್ಯರಾದ ಬಸವರಾಜ ಅಮರಾಪುರ ಮಾತನಾಡಿ ನಮ್ಮ ಐಕ್ಯೂ ಇಂಟರ್ನ್ಯಾಷನಲ್ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಅಕ್ಕಿ ಬೇಳೆ ಸಂಗ್ರಹಿಸಿ ಕಾರುಣ್ಯ ಆಶ್ರಮಕ್ಕೆ ನಿರಂತರ ಸಹಾಯ ಸಹಕಾರ ನಮ್ಮಗಳ ಕುಟುಂಬದಿಂದ ದೊರೆಯುತ್ತದೆ ಎಂದು ಭರವಸೆ ನೀಡುವುದರ ಮೂಲಕ ಅನಾಥ ಜೀವಿಗಳ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ ನಮ್ಮ ಸಂಸ್ಥೆಯು ವಿವಿಧ ಸಮಾಜ ಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಆದರೆ ಈ ಆಹಾರ ಸಂಜೀವಿನಿ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ನಮ್ಮ ನಾಡಿನ ಹೆಮ್ಮೆಯ ಸಂಸ್ಥೆಯಾದ ಕಾರುಣ್ಯ ಆಶ್ರಮದ ಪ್ರತಿಯೊಬ್ಬರ ಜೀವನದ ಕಥೆಯನ್ನು ಎಲ್ಲಾ ವಿದ್ಯಾರ್ಥಿಗಳು ಅರಿತುಕೊಂಡು ಜಾಗೃತರಾಗಿದ್ದಾರೆ ಹಿರಿಯರನ್ನು ಗೌರವಿಸುವ ಬಗ್ಗೆ ಅರಿವು ಮೂಡಿಸಿರುವ ಕಾರುಣ್ಯ ಆಶ್ರಮದ ಸಿಬ್ಬಂದಿಗಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಎಂದು ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಆಶ್ರಮದ ವತಿಯಿಂದ ವಿದ್ಯಾರ್ಥಿಯೊಬ್ಬರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ಐಕ್ಯೂ ಇಂಟರ್ನ್ಯಾಷನಲ್ ಸ್ಕೂಲ್ ನ ಖಜಾಂಚಿಗಳಾದ ಸುಗುಣ ರಾಮಚಂದ್ರರಾವ್,ಪ್ರಾಚಾರ್ಯರಾದ ರಾಜಶೇಖರ,ಶಿಕ್ಷಕರುಗಳಾದ ಹೇಮಲತಾ,ನಳಿನಿ ಮತ್ತು ಆಶ್ರಮದ ಸಿಬ್ಬಂದಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ,ಸುಜಾತ ಹಿರೇಮಠ,ಗೀತಾ ಕುಲಕರ್ಣಿ,ಮರಿಯಪ್ಪ,ಬಸಯ್ಯಸ್ವಾಮಿ ಹಚ್ಚೋಳಿ ಭೀಮೇಶ,ಶರಣಮ್ಮ ಮತ್ತು ಐಕ್ಯೂ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.