ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಮಾಲಿ ಪಾಟೀಲ್ ಹೇಳಿದರು.
ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜನತಾದರ್ಶನ ಕಾರ್ಯ ಕ್ರಮದಲ್ಲಿ ಮನವಿ ಸಲ್ಲಿಸಿ ಮಾತನಾಡಿದರು,18 ಸಾವಿರ ಜನಸಂಖ್ಯೆ ವಾಸವಿರುವ ಬಹುದೊಡ್ಡ ಗ್ರಾಮವಾಗಿದೆ ಈ ಗ್ರಾಮದ ಸುತ್ತಲೂ ಹತ್ತಾರು ಹಳ್ಳಿಗಳಾದ ಶೆಟ್ಟಿಕೆರೆ,ಗಂಗನಾಳ,ದರಿಯಾಪುರ, ಮಹಲ್ ರೋಜಾ,ಯಕ್ಕಿಗಡ್ಡಿ,ಹೊಸಳ್ಳಿ,ಶಾರದಳ್ಳಿ, ವಿರುಪಾಪುರ,ತಿಮ್ಮಾಪುರ ಹೀಗೆ ಹತ್ತಾರು ಹಳ್ಳಿಗಳು ಬರುವುದರಿಂದ ಹೋಬಳಿ ಕೇಂದ್ರಕ್ಕೆ ಯೋಗ್ಯವಾಗಿದೆ ಎಂದು ಮನವಿ ಸಲ್ಲಿಸಿ ಮಾತನಾಡಿದರು.ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಮನವಿಯನ್ನು ಸ್ವೀಕರಿಸಿ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ,ಆದಷ್ಟು ಬೇಗನೆ ಸಗರ ಹೋಬಳಿ ಮತ್ತು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನಿಸುವೆ ಎಂದು ವಿಶ್ವಾಸ ನೀಡಿದರು.
ವರದಿ:ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.