ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡಿ-ಪ.ಪೂ.ಕಲ್ಲಯ್ಯಜ್ಜವರು
ಗದಗ:ಯಾವುದೇ ವೃತ್ತಿಯಾಗಲಿ ಸೇವಾ ಮನೋಭಾವ ಮುಖ್ಯ ನಾವು ಮಾಡುವ ಕಾರ್ಯಗಳಲ್ಲಿ ಪರೋಪಕಾರವಿರಬೇಕು
ಸೃಜನಾತ್ಮಕ ಕೆಲಸಗಳ ಮೂಲಕ ಶ್ರೇಷ್ಠವಾದ ವ್ಯಕ್ತಿತ್ವ ರೂಪಿಸಿಕೊಂಡು ಮುನ್ನಡೆಯಬೇಕು ಎಂದು ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದಲ್ಲಿ ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಅವರ ಧರ್ಮಪತ್ನಿ ಕವಯಿತ್ರಿ ಭಾಗ್ಯ ಶ್ರೀ ಯವರ ಸೀಮಂತ ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಂಡಿದ್ಧ ತುಲಾಭಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪ.ಪೂಜ್ಯ ಕಲ್ಲಯ್ಯಜ್ಜನವರು ತುಲಾಭಾರ ಹಾಗೂ ಗುರುವಂದನಾ ಸ್ವೀಕರಿಸಿ ಆಶೀರ್ವಚನ ನೀಡಿದರು.
ಮಕ್ಕಳಿಗೋಸ್ಕರ ಆಸ್ತಿ ಮಾಡುವದಕ್ಕಿಂತ ಉತ್ತಮ ಸಂಸ್ಕಾರದ ಶಿಕ್ಷಣ ನೀಡಿ ಮಕ್ಕಳನ್ನೆ ಸಮಾಜದ ಆಸ್ತಿಯನ್ನಾಗಿ ಮಾಡಬೇಕೆಂದು ಕರೆ ನೀಡಿದರಲ್ಲದೇ ನಮ್ಮ ಭಾರತೀಯ ಪರಂಪರೆಯ ಮಹತ್ವ ಸಾರಿದರು.
ಶ್ರೀ ಷ.ಬ್ರ.ಪಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಓಂಕಾರ ಮಠ ಕಳಸಾಪೂರ ಗದಗ,ಶ್ರೀ ಷ.ಬ್ರ ಸಿದ್ಧ ವೀರ ಶಿವಾಚಾರ್ಯ ಮಹಾಸ್ವಾಮಿಗಳು ಪುಣ್ಯಾರಣ್ಯ ಪತ್ರಿವಣಮಠ ನರಗುಂದ,ಶ್ರೀ ಷ.ಬ್ರ.ಗುರುಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಜೀಗೇರಿ,ಶ್ರೀ ಷ.ಬ್ರ ಅಭಿನವ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ರಾಜೂರು ಅಡ್ನೂರು,ಕೊತಬಾಳ ಅಂಕಲಗಿ ಅಡವಿಸಿದ್ಧೇಶ್ವರ ಮಠದ ಪ.ಪೂ.ಗಂಗಾಧರ ಮಹಾಸ್ವಾಮಿಗಳು,ಜಂತಲಿ ಶಿರೂರು ಗ್ರಾಮದ ವೆ.ಮೂ.ವೀರಭಧ್ರಯ್ಯ ಹಳ್ಳಿಕೇರಿಮಠ ಅಜ್ಜನವರು
ಆಶೀರ್ವಚನ ನೀಡಿದರು.
ಶ್ರೀ ಶಿವಲಿಂಗಯ್ಯ ಶಾಸ್ತ್ರಿಗಳು,ಬಾಗಲಕೋಟ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಶ್ರೀ ಸಿ.ಎಮ್ ಕಾಳನ್ನವರ್,ಬಳ್ಳಾರಿಯ ನಿಜಲಿಂಗಯ್ಯ ಚಿಕ್ಕಸಿಂದೋಗಿ ಹೀರೆಮಠ,ಶ್ರೀ ತಿಪ್ಪನಗೌಡರ್,ಜಿಗಳೂರಿನ ಸಂಗಯ್ಯ,ವೇದಿಕೆ ಮೇಲಿದ್ದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಗಾಯಕ ನೂರಂದಯ್ಯ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಜರುಗಿತು,ರಾಜ್ ಕರಣ್ ಹಾಗೂ ವೀರಯ್ಯ ಹೊಸಮಠ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು,ಇದೇ ಸಂಧರ್ಭದಲ್ಲಿ 2024 ರ ಹೊಸ ವರ್ಷದ ಕ್ಯಾಲೆಂಡರ್ ಲೋಕಾರ್ಪಣೆ ಮಾಡಲಾಯಿತು.
ಕವಿಗಳು ಕಲಾವಿದರು ಸೇರಿದಂತೆ ಜಂತಲಿ ಶಿರೂರು ಗ್ರಾಮಸ್ಥರು ಪಾಲ್ಗೊಂಡಿದ್ದರು.