ತಂದೆ ತಾಯಿಗೆ ಹುಟ್ಟಿದ ಮಕ್ಕಳು ಅವರ ಸೇವೆಯ ಮರೆತುಬಿಟ್ಟರು ಚಿಕ್ಕ ವಯಸ್ಸಿನ ಕಷ್ಟ ಪಾಡುಗಳು ಎಲ್ಲಿ ಹೋದವಣ್ಣ ಈಗ ಎಲ್ಲಿಗೋದವಣ್ಣ
ತಾಯಿ ಇಟ್ಟ ಮೊದಲನೇ ತುತ್ತು
ಅಪ್ಪ ಪಟ್ಟ ಕಷ್ಟಗಳೆಷ್ಟು
ಪ್ರೀತಿ ಪ್ರೇಮದ ಒಲಮೆಯ ತುಂಬಿ
ಸಮಾಜಕ ಕೋಟ್ಯಾರೋ ನಿನ್ನ ಸಮಾಜಕ ಕೊಟ್ಟಾರೋ
ಶಾಲೆಯೆಂಬ ಮಂದಿರದಲ್ಲಿ ಗುರು ಎಂಬ ದೇವರಕೊಟ್ಟು ಶಿಕ್ಷಣ ಕೊಡಿಸಿದರು ನಿನಗೆ ಶಿಕ್ಷಣ ಕೊಡಿಸ್ಯಾರೋ
ಒಳ್ಳೆ ಗೆಳೆಯರ ಸಹವಾಸ ಮಾಡದೆ ಕೆಟ್ಟ ಗೆಳೆಯರ ಸಹವಾಸ ಮಾಡಿ ಕೆಟ್ಟುಹೋದೆಯಲ್ಲೋ ನೀನು ಕೆಟ್ಟುಹೋದೆಯಲ್ಲೂ…
ನನ್ನ ಮಗನೇ ಸರ್ವಸ್ವ ಎಂದು ನಂಬಿಕೊಂಡ ತಂದೆ ತಾಯಿಗೆ ದ್ರೋಹ ಬಗೆದೆಯಲ್ಲೋ ನೀನು ದ್ರೋಹ ಬಗೆಯಲ್ಲೋ
ದ್ರೋಹ ಬಗೆದಿಯಲ್ಲೋ ನೀನು ದ್ರೋಹ ಬಗೆದೆಯಲ್ಲೋ!!೨!!
-ಚಂದ್ರಶೇಖರಚಾರಿ ಎಂ
ಕನ್ನಡ ಶಿಕ್ಷಕರು,
ವಿಶ್ವ ಮಾನವ ಶಾಲೆ ಸೀಬಾರ ಗುತ್ತಿ ನಾಡು,ಚಿತ್ರದುರ್ಗ