ರಾಯಚೂರು ಜಿಲ್ಲೆಯ ಸಿಂಧನೂರಿನ ಶಾಸಕರ ನಿವಾಸದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಸಿಂಧನೂರು ವಿಶ್ವಕರ್ಮ ಸಮಾಜದ ಬಂಧುಗಳು ಭೇಟಿ ಮಾಡಿ ನಗರದ ಬಡೇಬೇಸ್ ಕಾಲೋನಿಯ ವಾರ್ಡ ನಂಬರ್ 4 ರಲ್ಲಿರುವ ಶ್ರೀ ಕಾಳಿಕಾದೇವಿ ದೇವಸ್ಥಾನ ಅತ್ಯಂತ ಪುರಾತನವಾಗಿದ್ದು ದೇವಸ್ಥಾನದ ನವ ನಿರ್ಮಾಣ ಹಾಗೂ ಸಮುದಾಯ ಭವನ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಲಾಯಿತು.
ಸಿಂಧನೂರು ನಗರದ ಬಡೇಬೇಸ್ ಕಾಲೋನಿಯ ವಾರ್ಡ್ ನಂಬರ್ 4ರಲ್ಲಿರುವ ಶ್ರೀ ಕಾಳಿಕಾದೇವಿ ದೇವಸ್ಥಾನವು ಶಿಥಿಲಾವಸ್ಥೆಯಲ್ಲಿದೆ ತಾಲೂಕಿನ ಸಮಾಜದ ಬಂಧುಗಳು ಸಂಘಟಿತಾಗುವುದಕ್ಕೆ ಇದೊಂದೇ ದೇವಸ್ಥಾನ ಹೊಂದಿದೆ.ಇಲ್ಲಿ ಸ್ಥಳವಕಾಶ ಕೂಡ ಕಡಿಮೆ ಇರುವುದರಿಂದ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ನೂತನವಾಗಿ ಶ್ರೀ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕು ಮತ್ತು ಸಮಾಜದ ಬಂಧುಗಳನ್ನು ಸಂಘಟಿತಾಗುವಂತೆ ಮಾಡಲು ಸಮಾಜಕ್ಕೆ ಒಂದು ದೊಡ್ಡ ಸಮುದಾಯ ಭವನದ ಅವಶ್ಯಕತೆ ಇದೆ.ಇದಕ್ಕೆ ಅನುದಾನ ನೀಡುವಂತೆ ಸಮಾಜದ ಬಂಧುಗಳು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿ ಶಾಸಕ ಹಂಪನಗೌಡ ಬಾದರ್ಲಿ ಅವರು ಈ ದೇಶಕ್ಕೆ ಹೆಸರುವಾಸಿಯಾದಂತಹ ಬೇಲೂರು ಹಳೇಬೀಡು,ಹಂಪಿ,ಅಜಂತಾ ಎಲ್ಲೋರಗಳಂತಹ ಕಲಾಕೃತಿಗಳನ್ನು ವಿಶ್ವಕರ್ಮ ಸಮಾಜ ಕೊಡುಗೆ ನೀಡಿದೆ.ಇಂತಹ ಸಮುದಾಯಕ್ಕೆ ಸೇರಿದ ಸಿಂಧನೂರಿನ ಶ್ರೀ ಕಾಳಿಕಾದೇವಿ ದೇವಸ್ಥಾನ ಪುರಾತನ ಕಾಲದ್ದು ಇದನ್ನು ಜೀರ್ಣೋದ್ಧಾರ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಶ್ರೀ ಕಾಳಿಕಾದೇವಿ ದೇವಸ್ಥಾನದ ಜೀರ್ಣೋದ್ಧಾರ ಮಾಡಲು ಸದಾ ಸಿದ್ದನಿದ್ದೇನೆ ಹಾಗೂ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಮಾಜದ ಅದ್ಯಕ್ಷರಾದ ಮೌನೇಶ ತಿಡಿಗೋಳ,ಮುಖಂಡರಾದ ವೀರೇಶ ದೇವರಗುಡಿ,ವೀರಭದ್ರಪ್ಪ ಹಂಚಿನಾಳ,ತಿರುಮಲ ಆಚಾರಿ,ಡಾ.ವೀರೇಶ ತಿಡಿಗೋಳ,ಗಣೇಶ ಪತ್ತಾರ, ಬಸವರಾಜ ಪತ್ತಾರ,ಚನ್ನಪ್ಪ ಕೆ.ಹೊಸಹಳ್ಳಿ,ರವಿ ಪತ್ತಾರ,ಮುತ್ತಣ್ಣ ಪತ್ತಾರ,ರಾಜು ಪತ್ತಾರ, ದೇವರಾಜ ಪತ್ತಾರ,ಚಿದಾನಂದಪ್ಪ ಸುಕಲಪೇಟೆ,ಮೌನೇಶ ಕೆ.ಹೊಸಹಳ್ಳಿ,ವಿನಯ ಕುರುಕುಂದ ಇನ್ನಿತರರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.