ಮಹಾರಾಷ್ಟ್ರ/ಅಕ್ಕಲಕೋಟ:
ನಾಗಣಸೂರ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಅಂಬಿಕಾ ಮಾಯನಾಳೆ ಕಥಾಕಥನ,ಸೌಂದರ್ಯಾ ಮಾಂಗ ಭಾಷಣ,ಹಾಗೂ ಶೀಲವಂತಿ ಕೋಳಿ ಚಿತ್ರಕಲೆ ಸ್ಪರ್ಧೆಗೆ ತಾಲೂಕಾ ಮಟ್ಟಕ್ಕೆ ಆಯ್ಕೆ.
ಜಿಲ್ಲಾ ಪರಿಷದ ಶಿಕ್ಷಣ ವಿಭಾಗ ಸೊಲ್ಲಾಪುರ ಹಾಗೂ ಪಂಚಾಯತ ಸಮಿತಿ ಶಿಕ್ಷಣ ವಿಭಾಗ ಅಕ್ಕಲಕೋಟ ವತಿಯಿಂದ ಶೈಕ್ಷಣಿಕ ವರ್ಷ 2023-24 ವರ್ಷದ ವಿಧ್ಯಾರ್ಥಿ ವಿವಿಧ ವಿವಿಧ ಸ್ಪರ್ಧೆಗಳ ಮುಖೇನ ವಿಧ್ಯಾರ್ಥಿ ವ್ಯಕ್ತಿತ್ವ ವಿಕಾಸದ ಅಡಿಯಲ್ಲಿ ತೆಗೆದುಕೊಳ್ಳಲಾದ ಕೇಂದ್ರ ಮಟ್ಟದ ಕಥಾಕಥನ ಸ್ಪರ್ಧೆಯಲ್ಲಿ ಅಂಬಿಕಾ ಮಾಯನಾಳೆ ಪ್ರಥಮ ಕ್ರಮಾಂಕ,ಭಾಷಣ ಸ್ಪರ್ಧೆಯಲ್ಲಿ ಸೌಂದರ್ಯಾ ಮಾಂಗ ದ್ವಿತೀಯ ಕ್ರಮಾಂಕ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಶೀಲವಂತಿ ಕೋಳಿ ದ್ವಿತೀಯ ಕ್ರಮಾಂಕ ಪಡೆದು ತಾಲೂಕ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.
ಗ್ರಾಮೀಣ ಭಾಗದಲ್ಲಿಯ ಸರಕಾರಿ ಶಾಲೆಗಳಲ್ಲಿ ಪ್ರತಿಭೆಗಳಲ್ಲಿ ಇರುವ ಕಲಾಗುಣಗಳನ್ನೂ ಶೋಧಿಸಿ ವೇದಿಕೆ ಕೊಡುವ ನಿಟ್ಟಿನಲ್ಲಿ ಪ್ರತಿ ವರ್ಷ ವಿವಿಧ ಸ್ಪರ್ಧೆಗಳನ್ನು ಕೇಂದ್ರ,ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ತೆಗೆದುಕೊಳ್ಳಲಾಗುತ್ತದೆ ಈ ಶೈಕ್ಷಣಿಕ ವರ್ಷದಲ್ಲಿ ನಾಗಣಸೂರ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಿಧ್ಯಾರ್ಥಿನಿಯರು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವೈಯಕ್ತಿಕ ಮೂರು ಸ್ಪರ್ಧೆಗಳಲ್ಲಿ ತಾಲೂಕ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಹಾಗೆಯೇ ಚಿಕ್ಕ ಗುಂಪು ಮತ್ತು ದೊಡ್ಡ ಗುಂಪು ಸಮೂಹ ಗೀತ ಗಾಯನ ಮತ್ತು ಸಮೂಹ ನೃತ್ಯ ಸ್ಪರ್ಧೆಯಲ್ಲಿ ಕೂಡಾ ಉತ್ತಮ ಪ್ರದರ್ಶನ ನೀಡಿ ಕೇಂದ್ರ ಮಟ್ಟದಲ್ಲಿ ದ್ವಿತೀಯ ಕ್ರಮಾಂಕ ಪಡೆದಿದ್ದಾರೆ.ಯಶಸ್ವಿ ವಿದ್ಯಾರ್ಥಿನಿಯರಿಗೆ ಮುಖ್ಯ ಗುರುಗಳು ಮಲ್ಲಪ್ಪ ಕವಠೆ,ಸಾಂಸ್ಕೃತಿಕ ವಿಭಾಗ ಪ್ರಮುಖ ಶರಣಪ್ಪ ಫುಲಾರಿ,ರಾಜಶೇಖರ ಖಾನಾಪುರೆ,ಕಲ್ಲಯ್ಯ ಗಣಾಚಾರಿ,ಶಾಂತಾ ತೋಳನೂರೆ,ಲಕ್ಷ್ಮೀಬಾಯಿ ದೇಗಾಂವ,ರಾಜಶೇಖರ ಕುರ್ಲೆ,ಲಕ್ಷ್ಮೀಕಾಂತ ತಳವಾರ ಶಿಕ್ಷಕರ ಮಾರ್ಗದರ್ಶನ ಲಭಿಸಿದ್ದು ಯಶಸ್ವಿ ವಿಧ್ಯಾರ್ಥಿ ಹಾಗೂ ಶಿಕ್ಷಕರಿಗೆ ಬಿಇಓ ಪ್ರಶಾಂತ ಅರಬಾಳೆ,ಶಿಕ್ಷಣ ವಿಸ್ತಾರ ಅಧಿಕಾರಿ ಭೀಮಾಶಂಕರ ವಾಲೆ,ಕೇಂದ್ರ ಪ್ರಮುಖ ಗುರುನಾಥ ನರುಣೆ,ಶಾಲಾ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸದಾನಂದ ಮಠಪತಿ,ಉಪಾಧ್ಯಕ್ಷ ಗಜಾನಂದ ರೇವಿ,ಎಲ್ಲಾ ಸದಸ್ಯರು,ಗ್ರಾಮಪಂಚಾಯ್ತಿ ಅಧ್ಯಕ್ಷ ಸುನಿತಾ ಚವ್ಹಾಣ,ಉಪಾಧ್ಯಕ್ಷ ಧನರಾಜ ಧನಶೆಟ್ಟಿ ಎಲ್ಲಾ ಸದಸ್ಯರು,ಪಾಲಕರು ಗ್ರಾಮಸ್ಥರು ಅಭಿನಂದಿಸಿ ತಾಲೂಕ ಮಟ್ಟದ ಸ್ಪರ್ಧೆಗೆ ಶುಭ ಕೋರಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.