ಬೆಂಗಳೂರಿನ ಅರಮನೆಯಲ್ಲಿ ಡಿಸೆಂಬರ್ 23,24 ರಂದು ಜರಗುವ ವಿಶ್ವ ಯೋಗ ಸಮ್ಮೇಳನದ(ಗ್ಲೋಬಲ್ ಯೋಗಾ ಸಮ್ಮಿಟ್ 2023)ಬಗ್ಗೆ ಡಿಜಿಎಂ ಆರ್ಯುವೇದ ಕಾಲೇಜಿನ ಯೋಗ ಪ್ರಾಚಾರ್ಯರಾದ ಎಸ್.ಎಸ್.ಹಿರೇಮಠ ಅವರು ಜಾಗತಿಕ ಮಟ್ಟದಲ್ಲಿ ನಡೆಯುವ ವಿಶ್ವ ಯೋಗ ಸಮ್ಮೇಳನದ ಕುರಿತು ಮಾಹಿತಿ ನೀಡಿದರು ಈ ಸಮ್ಮೆಳನದಲ್ಲಿ 28 ಕ್ಕೂ ಹೆಚ್ಚಿನ ರಾಷ್ಟ್ರದ ಯೋಗ ಸಾಧಕರು ಹಾಗೂ 430 ಯೋಗಾ ವಿಭಾಗದ ವಿಶ್ವವಿದ್ಯಾನಿಲಯದ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಹಾಗೂ ಯೋಗದಲ್ಲಿ ಸಾಧನೆ ಗೈದು ಅದರ ಸಾಧಕಗಳ ಬಗ್ಗೆ ಉಪನ್ಯಾಸ ಹಾಗೂ ಯೋಗ ಅಭ್ಯಾಸಿಗರ ಪ್ರದರ್ಶನ ಹಾಗೂ ಯೋಗವನ್ನು ನಮ್ಮ ಜೀವನದಲ್ಲಿ ಎಷ್ಟೂ ಮಹತ್ವ ವಿದೆ ಎನ್ನುವುದರ ಬಗ್ಗೆ ಮಾಹಿತಿ ಸಾಧಕ ಸಾಧಕಿಯರ ಅನುಭವಗಳನ್ನು ಒಳಗೊಂಡ ಅದ್ಬುತ ಎರಡು ದಿನದ ಶಿಬಿರದಲ್ಲಿ ಭಾಗವಹಿಸುವ ಸುರ್ವವಕಾಶ ಇದಾಗಿದೆ ಎಂದರು.
ಇದರ ನೊಂದಣಿಯು ಇದೇ ತಿಂಗಳ 30 ನೇ ತಾರೀಖು ಕೊನೆ ದಿನಾಂಕವಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಲು ಸಂಪರ್ಕಿಸಿ
+91 99007 52844 ಮರಿಸ್ವಾಮಿ ಕೊಪ್ಪಳ ಜಿಲ್ಲಾ ಸಂಚಾಲಕರು
ಹಾಗೂ ಬಸವರಾಜ
+91 97431 11623,9945760286.
ಈ ವೇಳೆ ಗ್ಲೊಬಲ್ ಸಮಿಟ್ ನ ಜಿಲ್ಲಾ ಅದ್ಯಕ್ಷರಾದ ಶ್ರೀ ಶರಣಪ್ಪ ಭಾವಿ,ಯೋಗ ಸಾಧಕರಾದ ನಾಗಪ್ಪ ಕಂಪ್ಲಿ ಮತ್ತು ಸಿದ್ದಾಪುರದ ಯೋಗ ಸಾಧಕರಾದ ಬೀರಪ್ಪ,ಶಂಕರಗೌಡ,ಪಂಪನಗೌಡ ಬೊಮ್ಮನಾಳ, ನೀಲಕಂಠಪ್ಪ,ವಿಠಲ ಜಿರ್ಗಿಹಾಳ,ಪರಶುರಾಮ ರೆಡ್ಡಿ
ಕಾರ್ಯಕ್ರಮದ ನಿರೂಪಣೆಯನ್ನು ಯೋಗ ಶಿಕ್ಷಕರು ಕೊಪ್ಪಳ ಜಿಲ್ಲಾ ಗ್ಲೋಬಲ್ ಯೋಗ ಸಮಿಟ್ ನ ಸಂಚಾಲಕರಾದ ಮರಿಸ್ವಾಮಿ ಕೆ ಸಿದ್ದಾಪುರ ಅವರು ನಡೆಸಿಕೊಟ್ಟರು.ಗ್ಲೋಬಲ್ ಯೋಗ ಸಮಿಟ್ 2023 ಅದರ ಜಿಲ್ಲಾ ಸಂಚಾಲಕರಾದ ಮರಿಸ್ವಾಮಿ ಕೆ,ಬಸವರಾಜ್,ಎನ್.ಹನುಮೇಶ ಹಾಗೂ ಮಹಿಳಾ ಪ್ರತಿನಿಧಿಗಳಾದ ಜಯಶರಣಮ್ಮ ಪೂರ್ಣಿಮಾ ಜಯಶ್ರೀ,ಯೋಗ ಆಸಕ್ತರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.