ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿತ್ತು ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಶಿವಶರಣ ರೆಡ್ಡಿ ಕೆಂಚಗೋಳ ವಹಿಸಿದ್ದರು ಮುಖ್ಯ ಅಥಿತಿ ಯಾಗಿ ನೋಡಲ್ ಅಧಿಕಾರಿ ದಶರಥ ನಾಯಕ್ ವಹಿಸಿಕೊಂಡಿದ್ದರು.ಅತಿಥಿಗಳಾಗಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಾವಿತ್ರಿ ಶಿಕ್ಷಕರು ಹಾಗೂ ಎಂ.ಪಿ.ಎಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಹಾಗೂ ಎಂ.ಪಿ.ಎಸ್ ಖಾನಾಪುರ ಶಾಲೆಯ ಮುಖ್ಯೋಪಾಧ್ಯಾಯರಾದ ಪಟೇಲ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹಣಮಂತ ಬಡಿಗೇರ್ ಅಧ್ಯಕ್ಷತೆ ವಹಿಸಿದ್ದರು ಅದೇ ರೀತಿ ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ ಆಶಾ ಕಾರ್ಯ ಕರ್ತೆಯರು ಹಾಗೂ ಆರೋಗ್ಯ ಇಲಾಖೆ,ಸಾಕ್ಷರತಾ ಇಲಾಖೆ ಮತ್ತು ಪಂಚಾಯ್ತಿ ಕಾರ್ಯದರ್ಶಿಗಳಾದ ಮಹಿಬೂಬ ಪಟೇಲ್ ಹಾಗೂ ಪಂಚಾಯಿತಿ ಕರವಸಲಿಗಾರಾದ ಶರಣಪ್ಪ ಹವಾಲ್ದಾರ್,ಶಾಲೆಯ ಎಲ್ಲಾ ಮಕ್ಕಳುಹಾಜರಿದ್ದರು.
ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಶಿವ ಶರಣರೆಡ್ಡಿ ಕೆಂಚಾಗೋಳ ನೆರವೇರಿಸಿದರು ನಿರೂಪಣೆ ಹಾಗೂ ಸ್ವಾಗತವನ್ನು ಶ್ರೀ ನಜೀರ್ ಅಹ್ಮದ್.ಎ.ಟೇಲರ್ ಗ್ರಂಥಪಾಲಕರು ನಡೆಸಿಕೊಟ್ಟರು ಮಕ್ಕಳ ವಿಶೇಷತೆ ಅವರ ಹಕ್ಕುಗಳ ಬಗ್ಗೆ ಮುಖ್ಯ ನೋಡಲ್ ಅಧಿಕಾರಿಗಳಾದ ದಶರಥ ನಾಯಕ್ ವಿಸ್ತಾರವಾಗಿ ಮನ ಮುಟ್ಟುವ ಹಾಗೆ ಮಕ್ಕಳಿಗೆ ಹೇಳಿಕೊಟ್ಟರು ವಂದನಾರ್ಪಣೆಯನ್ನು ಮಾನಪ್ಪ ಬಡಿಗೇರ ಗ್ರಾ ಪಂ ಸಿಬ್ಬಂದಿ ನೇರವೇರಿಸಿದರು.
ವರದಿ:ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.