ಚಾಮರಾಜನಗರ/ಗುಂಡ್ಲುಪೇಟೆ:ಸಂತ ಶ್ರೇಷ್ಠ ಕನಕದಾಸರ ತತ್ವ ಮತ್ತು ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸುವಂತೆ ತಹಸೀಲ್ದಾರ್ ರಮೇಶ್ ಬಾಬು ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಕನಕದಾಸ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ
ತಿರುಪತಿ ತಿಮ್ಮಪ್ಪನ ದೈವಭಕ್ತ ದಂಡನಾಯಕ ಬೀರಪ್ಪನವರ ಮಗನಾಗಿ ಬಾಡ ಗ್ರಾಮದಲ್ಲಿ 1509ರಲ್ಲಿ ಜನಿಸಿದ ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ ಹದಿನೈದು-ಹದಿನಾರನೇ ಶತಮಾನ ಕನಕದಾಸರ ಜೀವಿತಾವಧಿಯ ಕಾಲಘಟ್ಟ.ಆ ಕಾಲದ ಹರಿದಾಸರ ಪೈಕಿ ದಾಸ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಕೊಟ್ಟವರು ಅವರು ಕನ್ನಡ ಭಾಷೆಯ ಕೀರ್ತನೆಕಾರರು ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದವರು ಎಂದು ಹೇಳಿದರು.
ಸಹಜ ಬದುಕು ಬಾಳಿದ ಕನಕದಾಸರು, ಕೀರ್ತನರಾರರಾಗಿ,ತತ್ತ್ವಜ್ಞಾನಿಯಾಗಿ,ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರು ದಂಡನಾಯಕರಾಗಿದ್ದು,ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತ ದಾಸರಾದರು ಎಂಬ ಐತಿಹ್ಯವಿದೆ.ವ್ಯಾಸರಾಯರು ಇವರನ್ನು ಕನಕದಾಸ ಎಂದು ಕರೆಯುವ ಮೂಲಕ ದಾಸ ಪಂಕ್ತಿಗೆ ಸೇರಿಸಿದರು ಎಂದರು.
ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್,ಕುರುಬ ಸಮುದಾಯ ತಾಲೂಕು ಅಧ್ಯಕ್ಷ ಜಿ.ಎಲ್.ರಾಜು,ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು,ತಾಪಂ ಇಓ ರಾಮಲಿಂಗಯ್ಯ,ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್,
ಪೊಲೀಸ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ,
ಪುರಸಭೆ ಮುಖ್ಯಾಧಿಕಾರಿ ವಸಂತ ಕುಮಾರಿ,ಶಿಶು ಅಭಿವೃದ್ಧಿ ಅಧಿಕಾರಿ ಹೇಮಾವತಿ,
ಶಿರಸ್ತೇದಾರ್ ಮಹೇಶ್,ಜವರೇಗೌಡ,ಮಾಜಿ ಪುರಸಭೆ ಸದಸ್ಯ ಬಸವರಾಜು,ಸೋಮಣ್ಣ,ಕರವೇ ಮೋಹನ್ ಸೇರಿದಂತೆ ಇತರರು ಹಾಜರಿದ್ದರು.
ವರದಿ-ಕುಮಾರ್ ಗುಂಡ್ಲುಪೇಟೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.