ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟ ಕಡೆಯ ಗ್ರಾಮ ಜೇರಟಗಿಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಹಾಗೂ ಚನ್ನಬಸವೇಶ್ವರ ನೆಲೆಸಿರುವ ಈ ಪುಣ್ಯಭೂಮಿ ಮರಿ ಕಲ್ಯಾಣವೆಂದೆ ಖ್ಯಾತಿಯಾಗಿದೆ ಈ ಗ್ರಾಮದ ಇತಿಹಾಸ ಬಸವಾಧೀಶ ಶರಣರ ಸಮಕಾಲಿನದು ಕಲ್ಯಾಣದ ಕ್ರಾಂತಿಯ ನಂತರ ಮಹಾಜ್ಞಾನಿ ಚೆನ್ನಬಸವೇಶ್ವರ ಅವರ ನೇತೃತ್ವದಲ್ಲಿ ಒಂದು ತಂಡ ಉಳಿವಿಯ ಕಡೆಗೆ ಪ್ರಯಾಣ ಬೆಳೆಸಿದರೆ ಅಕ್ಕಮಹಾದೇವಿಯವರ ನೇತೃತ್ವದ ತಂಡ ಶ್ರೀಶೈಲದ ಕಡೆಗೆ ಹೊರಡುತ್ತದೆ ಬಸವಾದಿ ಪ್ರಮುಖರು ತಮ್ಮ ಉಳಿವಿಯ ಪ್ರಯಾಣದಲ್ಲಿ ಸುಕ್ಷೇತ್ರ ಜೇರಟಗಿಯಲ್ಲಿ ಕೆಲವೊಂದಿಷ್ಟು ದಿನ ತಂಗಿದ್ದರು ಎನ್ನುವುದಕ್ಕೆ ಪುರಾವೆ ಸಾಕಷ್ಟು ಈ ಗ್ರಾಮದಲ್ಲಿ ಸಿಗುತ್ತವೆ ಅದಕ್ಕೆ ಪುಷ್ಟಿ ನೀಡುವಂತೆ ಗ್ರಾಮದಲ್ಲಿ ಬಸವೇಶ್ವರ ಚನ್ನಬಸವೇಶ್ವರ ಸಿದ್ದರಾಮ ಮಡಿವಾಳ ಮಾಚಿದೇವರು ರೇವಣಸಿದ್ದೇಶ್ವರ ಇನ್ನೂ ಮುಂತಾದ ಶರಣರ ಗುಡಿಗಳು ಈ ಗ್ರಾಮದಲ್ಲಿ ಕಂಡುಬರುತ್ತವೆ ಆ ಪುಣ್ಯ ಪುರುಷರ ಕಾಲ್ಗುಣದಿಂದ ಇವತ್ತಿಗೂ ಕೂಡಾ ಊರು ದಾಸೋಹಕ್ಕೆ ಬಹಳ ಪ್ರಸಿದ್ದಿಯಾದದ್ದು ಬಸವಣ್ಣನವರ ಇಚ್ಛೆಯಂತೆ ಇವತ್ತಿಗೂ ಕೂಡಾ ಜಂಗಮ ಗಣರಾಧನೆಗೆ ಬಹಳ ಪ್ರಾಶಸ್ತ್ಯ ಕೊಡುತ್ತಾರೆ ಜೊತೆಗೆ ಈ ಊರಿಗೆ ಬರುವ ಯಾರೊಬ್ಬರೂ ಕೂಡಾ ಉಪವಾಸದಿಂದ ತೆರಳುವುದಿಲ್ಲ ಅಷ್ಟು ದಾಸೋಹಕ್ಕೆ ಪ್ರಾಮುಖ್ಯತೆ ಕೊಡುವ ಊರು ಜೇರಟಗಿ ಜಾತಿ ಭೇದ ಮತಗಳನ್ನು ಮೀರಿದ ಗ್ರಾಮ ಇವತ್ತಿಗೂ ಕೂಡಾ ಗ್ರಾಮದ ಮುಸ್ಲಿಂ ಬಾಂಧವರು ಗ್ರಾಮದ ದೇವರಿಗೆ ಭಕ್ತಿ ಪೂರ್ವಕವಾಗಿ ನಡೆದುಕೊಳ್ಳುತ್ತಾರೆ ಸೋಮವಾರ ಯಾವುದೇ ಮಾಂಸ ಪದಾರ್ಥಗಳನ್ನು ಮುಟ್ಟುವುದಿಲ್ಲ ಕೆಲವೊಂದಿಷ್ಟು ಮುಸ್ಲಿಂ ಹಿರಿಯರು ಸೋಮವಾರ ದಿನ ಉಪವಾಸ ವ್ರತ ಕೂಡಾ ಮಾಡುತ್ತಾರೆ ಅದರಂತೆ ಹಿಂದೂ ಜನಾಂಗದವರು ಕೂಡ ಮುಸ್ಲಿಂ ದೇವರಿಗೆ ನಡೆದುಕೊಳ್ಳುತ್ತಾರೆ ದಾಸೋಹದ ಜೊತೆಗೆ ಭಾವೈಕ್ಯತೆ ಕೂಡ ಈ ಗ್ರಾಮದಲ್ಲಿ ಕಂಡು ಬರುತ್ತದೆ ಇಂತಹ ಒಂದು ಪವಿತ್ರ ಗ್ರಾಮ ಕಲ್ಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಜಾತ್ರೆಯು ಇದೇ ದಿನಾಂಕ 3/ 12 /2023 ರ ಭಾನುವಾರ ಅತಿ ವೈಭವದಿಂದ ರಥೋತ್ಸವ ಜರುಗಲಿದ್ದು ಸುಮಾರು ಲಕ್ಷಾಂತರ ಜನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಗ್ರಾಮಸ್ಥರಾದ ಚನ್ನಯ್ಯ ವಸ್ತ್ರದ ಮಾಹಿತಿ ಹಕ್ಕು ಮತ್ತು ಸಾಮಾಜಿಕ ವೇದಿಕೆಯ ಕಾರ್ಯಕರ್ತರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.