ನರಗುಂದ:ಮಾರಕ ಏಡ್ಸ್ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಗದಗ ಜಿಲ್ಲೆ ನರಗುಂದದ ಶ್ರೀ ಯಡಿಯೂರ ಸಿದ್ದಲಿಂಗೇಶ್ವರ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ನರಗುಂದದ ಎನ್ಎಸ್ಎಸ್ ಘಟಕ ಹಾಗೂ ತಾಲೂಕು ಆರೋಗ್ಯ ಇಲಾಖೆ ಮತ್ತು ಆಸ್ಪತ್ರೆ ನರಗುಂದ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ಜನಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮವನ್ನು ಉದ್ಘಾಟಿಸಿದ ನರಗುಂದ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ||ಆರ್ ಸಿ ಕೊರವರ್ ಮಾತನಾಡಿ ಮಹಾಮಾರಿ ಏಡ್ಸ್ ರೋಗದ ತಡೆಗೆ ಎಲ್ಲರೂ ಮುಂದಾಗಿ,ಏಡ್ಸ್ ಅನ್ನು ಸೊನ್ನೆಗೆ ತರೋಣ ಎಂಬ ಸಂದೇಶವನ್ನು ನೀಡಿದರು ಕಾಲೇಜು ಆವರಣದಿಂದ ಆರಂಭವಾದ ಜಾಥಾಕ್ಕೆ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಆರ್ ಬಿ ಪಾಟೀಲ್ ಹಸಿರು ನಿಶಾನೆ ತೋರಿದರು ನಂತರ ಮಾತನಾಡಿದ ಅವರು ಏಡ್ಸ್ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅನೇಕ ತಪ್ಪು ಕಲ್ಪನೆಗಳಿದ್ದು ಅದನ್ನು ಹೋಗಲಾಡಿಸಲು ನಿರಂತರವಾದ ಅರಿವು ಮೂಡಿಸುವ ಅಗತ್ಯವಿದೆ ಎಂದರು .
ಕಾರ್ಯಕ್ರಮದಲ್ಲಿ ನರಗುಂದ ತಾಲೂಕು ಆಸ್ಪತ್ರೆಯ ಆಪ್ತಸಮಾಲೋಚಕರಾದ ಶ್ರೀ ಎನ್ ಎಲ್ ಮಡಿವಾಳಕರ್ ಮಾತನಾಡಿ ಏಡ್ಸ್ ರೋಗಕ್ಕೆ ತುತ್ತಾದ ವ್ಯಕ್ತಿಯನ್ನು ಗುಣಪಡಿಸಲು ಧೈರ್ಯ ತುಂಬಲು ಆಪ್ತ ಸಮಾಲೋಚನಾ ಕೇಂದ್ರವಿದೆ ಹೊರಗಿನಿಂದ ಬಂದು ಚಿಕಿತ್ಸೆ ಪಡೆಯುವವರಿಗೆ ಸರಕಾರ ಸಾರಿಗೆ ವೆಚ್ಚ ಕೊಡುತ್ತದೆ ಪ್ರಪಂಚದಲ್ಲಿ ಪ್ರತಿವರ್ಷ 23 ಲಕ್ಷ ಜನರು ಹೊಸದಾಗಿ ಹೆಚ್ಐವಿ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಕಾಲೇಜು ಆವರಣದಿಂದ ಹೊರಟ ಮೆರವಣಿಗೆಯು ನರಗುಂದದ ಟಿಪ್ಪು ಸುಲ್ತಾನ್ ವೃತ್ತ,ಅಂಬಾಭವಾನಿ ಗುಡಿಯ ಆವರಣ ಬಳಸಿಕೊಂಡು ಪುರಸಭೆ ಹಾಗೂ ಪುರಸಭೆಯ ಮುಖ್ಯರಸ್ತೆ ಮೂಲಕ ಮರಳಿ ತಲುಪಿತು.ದಾರಿಯುದ್ದಕ್ಕೂ ಕಾಲೇಜಿನ ವಿದ್ಯಾರ್ಥಿಗಳು ಏಡ್ಸ್ ರೋಗದ ಕುರಿತು ಬೋಧಿಸುವ ಫಲಕಗಳನ್ನು ಹಿಡಿದು ಸಾರ್ವಜನಿಕರ ಗಮನ ಸೆಳೆದರು ಕಾರ್ಯಕ್ರಮದಲ್ಲಿ ನರಗುಂದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಜೀ ವಿ ಕೊಣ್ಣುರ್,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀ ಸಿ ಎಫ್ ಕುಂಬಾರ , ಕಾಲೇಜಿನ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ಎಂ ಪಿ ಕ್ಯಾತನಗೌಡ್ರು ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ವರದಿ:ನಾಗರಾಜ ಪ್ರಚಂಡಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.