ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಾಸಕರ ನಡೆಗೆ ರೈತಪರ ಹೋರಾಟಗಾರರ ವಿರೋಧ

ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕಿನ ಶಾಸಕರಾದ ಶ್ರೀ ಚಂದ್ರು ಲಮಾಣಿಯವರು ಮತ್ತು ರೈತ ಹೋರಾಟಗಾರರದ ಶ್ರೀ ಮಹೇಶ ಹೊಗೆಸೊಪ್ಪಿನ, ಹೋರಾಟಗಾರ ನಡುವೆ ತೀವ್ರವಾದ ಕಾನೂನು ಹೋರಾಟದ ಮುನ್ಸೂಚನೆ ಕಂಡುಬಂದಿತ್ತು. ನಗರದಲ್ಲಿ ನಿನ್ನೆ ರೈತಪರ ಹೋರಾಟಗಾರರು, ವಿವಿಧ ಸಮಾಜ ಮುಖ್ಯಸ್ಥರುಗಳಿಂದ ಪತ್ರಿಕಾ ಗೋಷ್ಠಿ ಕರೆಯಲಾಗಿತ್ತು.ಕ್ಷೇತ್ರದ ಶಾಸಕರಾದ ಚಂದ್ರು ಲಮಾಣಿಯವರು ಹೋರಾಟಗಾರರ ಮೇಲೆ ವೈಯಕ್ತಿಕವಾಗಿ ತಮ್ಮ ಅಧೀನ ಅಧಿಕಾರಿಗಳ ಮೂಲಕ ಕೇಸು ದಾಖಲಿಸುವದನ್ನು ಮಾಡುತಿದ್ದಾರೆ ಹಾಗೂ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಹಾಗೆ ಬಾಕಿ ಉಳಿದಿವೆ ಇದರ ಕಡೆ ಗಮನ ನೀಡದೆ ಕೇವಲ ಹೋರಾಟಗಾರರ ಮೇಲೆ ತಮ್ಮ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ ಮತ್ತು ಜನಪತ್ರತಿನಿಧಿ ಎಂದ ಕೂಡಲೇ ಪರ -ವಿರೋಧ ಜನಗಳು ಇದ್ದೇ ಇರುತ್ತಾರೆ ಮತ್ತು ಟೀಕಿಸುವುದು,ತರಾಟೆಗೆ ತಗೆದುಕೊಳ್ಳುವುದು ಸಾಮಾನ್ಯ ಇದನ್ನೇ ಮುಂದೆ ಇಟ್ಟುಕೊಂಡು ಮಾನ್ಯ ಶಾಸಕರು ನನಗೆ ಕಿರುಕುಳ ಕೊಡುತ್ತಾರೆ, ಜಾತಿನಿಂದನೆ ಮಾಡಿದ್ದಾರೆ ಎಂದು ತಪ್ಪು ಆರೋಪ ಮಾಡುವುದರೊಂದಿಗೆ ತಮ್ಮ ರಾಜಕೀಯ ಜೀವನಕ್ಕೆ ತನು-ಮನ-ಧನ ಸಹಾಯದೊಂದಿಗೆ ತಮ್ಮೊಂದಿಗೆ ಹಗಲಿರುಳು ಶ್ರಮವಹಿಸಿ ಜಯ ತಂದು ಕೊಟ್ಟ ಕಾರ್ಯಕರ್ತರ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸೇರಿದ ಗಣ್ಯರು ಹೇಳಿದರು.ಮನುಷ್ಯನಾದ ಮೇಲೆ ತಪ್ಪು ಮಾಡುವುದು ಸಹಜ ಆ ತಪ್ಪನ್ನು ತಿದ್ದಿ ಸರಿಪಡಿಸಬೇಕಾಗಿರುವುದು ಹಿರಿಯರ ಕರ್ತವ್ಯ ಹಾಗೂ ಈ ತರಹದ ಕಾನೂನಾತ್ಮಕ ಕೇಸು ದಾಖಲಿಸಿರಿರುವುದು ಶಿರಹಟ್ಟಿ ಮತ ಕ್ಷೇತ್ರದಲ್ಲಿ ಇದೆ ಮೊದಲು,ನಮ್ಮಲ್ಲಿ ಅನುಭವಿ ಮಾಜಿ ಶಾಸಕರುಗಳಾದ ಶ್ರೀ ಗಂಗಣ್ಣ ಮಹಾಂತಾಶೆಟ್ಟರ, ಶ್ರೀ ಜಿ ಎಸ್ ಗಡ್ಡೆದೇವರಮಠ,ಶ್ರೀ ಶಂಕರಗೌಡ ಪಾಟೀಲ,ಶ್ರೀ ರಾಮಪ್ಪ ಲಮಾಣಿಯವರಂತ ಶಾಸಕರನ್ನು ಕಂಡ ಈ ಕ್ಷೇತ್ರದ ಜನತಗೆ ಹಾಲಿ ಶಾಸಕರ ನಡೆಯುವ ತುಂಬಾ ನೋವುಂಟು ಮಾಡಿದೆ ಮತ್ತು ಈ ಕೂಡಲೇ ಎಲ್ಲ ಸಮಾಜದ ಹಿರಿಯರು,ಮಾಜಿ ಶಾಸಕರು,ಈ ವಿಷಯದ ಕುರಿತು ಚರ್ಚಿಸಿ ಸೂಕ್ತ ಕ್ರಮ ತಗೆದುಕೊಳ್ಳಬೇಕು ತಪ್ಪು ಯಾರದ್ದೇ ಇರಲಿ ತಿಳಿಹೇಳ ಬೇಕು ಇಲ್ಲವಾದಲ್ಲಿ ಮಹೇಶ ಹೊಗೆಸೊಪ್ಪಿನ ಹಾಗೂ ಇನ್ನಿತರರ ಮೇಲೆ ದಾಖಲಾದ ಕೇಸನ್ನು ದಾಖಲು ಮಾಡಿರುವುದು ಖಂಡಿಸಿ ತಾಲೂಕನಲ್ಲಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಮತ್ತು ಸೂಕ್ತವಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ಲೋಕ ಸಭಾ ಚುನಾವಣೆಯಲ್ಲಿ ನಮ್ಮ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು ಇವತ್ತು ನಾವು ಒಂದೇ ಪಕ್ಷ,ಸಂಘಟನೆಯ,ಒಂದೇ ಸಮಾಜದ ಜನರು ಸೇರಿಲ್ಲ ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಶಾಸಕ ರಾಜಕೀಯ ವಿಷಯದ ಬಗ್ಗೆ ಮಾತ್ರ ನಮ್ಮ ವಿರೋಧವಿದೆ ತಾವು ಇನ್ನೊಮ್ಮೆ ವಿಚಾರಮಾಡಿ ತಮ್ಮ ನಿರ್ಧಾರ ತಿಳಿಸಬೇಕು ಇಲ್ಲವಾದಲ್ಲಿ ಕೇವಲ ನೀವು 6-7 ಜನರ ಮೇಲೆ ಕೇಸು ದಾಖಲು ಮಾಡಿಸಿದ್ದೀರಿ ನಿಮ್ಮ ನಿರ್ಧಾರ ಬದಲಾಯಿಸದೆ ಇದ್ದಲ್ಲಿ ಅಖಂಡ ಕ್ಷೇತ್ರದ ಜನರೆಲ್ಲಾ ಸೇರಿ ಪ್ರತಿಭಟನೆ ಮಾಡುತ್ತೇವೆ ಎಷ್ಟು ಜನರ ಮೇಲೆ ಕಾನೂನು ಕ್ರಮ ತಗೆದುಕೊಳ್ಳುತ್ತಿರಿ ನಾವು ನೋಡುತ್ತೇವೆ ಎಂದು ಶ್ರೀ ಸುರೇಶ ನಂದೇನ್ನವರ ತಿಳಿಸಿದರು.ಗಣ್ಯರಾದ
ಶ್ರೀ ಶಂಬಣ್ಣ ಬಾಳಿಕಾಯಿ,ಶ್ರೀ ಮಂಜುನಾಥ ಮಾಗಡಿ,ಶ್ರೀ ಸುರೇಶ ನಂದೇಣ್ಣವರ,ಶ್ರೀ ಚನ್ನಪ್ಪ ಬಳಿಗಾರ,ಶ್ರೀ ದೇವಣ್ಣ ಬಳಿಗಾರ,ಶ್ರೀ ಗಂಗಣ್ಣ ಮೆಣಸಿನಕಾಯಿ,ಶ್ರೀ ಸಿದ್ದನಗೌಡ B,ಶ್ರೀ ಮಹೇಶ್ ಮೇಟಿ,ಶ್ರೀ ಸುರೇಶ ರಾಜನಾಯಕರ,ಸುತ್ತಲಿನ ಹಳ್ಳಿ ಜನಗಳು,ಸಂಘಟನೆ ಮುಖ್ಯಸ್ಥರು,ವ್ಯಾಪಾರಸ್ಥರು ಮುಂತಾದವರು ಹಾಜರಿದ್ದರು.
ವರದಿ-ಸದಾಶಿವ ಭೀ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ