ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಆತ್ಮಹತ್ಯೆಗೀಡಾದ ವಿದ್ಯಾರ್ಥಿ ತಂದೆಯ ಆರ್ತನಾದ..!

ಹನೂರು:ಅಂಕವನ್ನೇ ಅಳತೆಗೋಲಾಗಿಸಿಕೊಂಡು ಕಡಿಮೆ ಅಂಕವನ್ನು ಪಡೆದೆವೆಂದು ಅಧೈರ್ಯಗೊಂಡು ಆತ್ಮಹತ್ಯೆಯ ಹಾದಿ ಹಿಡಿಯದೆ ಧೈರ್ಯದಿಂದ ಮುನ್ನುಗ್ಗಿ ಮತ್ತೊಮ್ಮೆ ಪರೀಕ್ಷೆ ಬರೆದು ಸರಿಪಡಿಸಿಕೊಳ್ಳಿ ಎಂದು ಭದ್ರಯ್ಯನಹಳ್ಳಿ ಗ್ರಾಮದ ಕನ್ನಡ ಸಂಘಟನೆಯ ಸದಸ್ಯ ಮೌರ್ಯರವರ ಅನುಪಸ್ಥಿತಿಯಲ್ಲಿ ಅವರ ಬುದ್ದಿವಾದವನ್ನು ಶಾಲೆಯ ಶಿಕ್ಷಕರು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.ಕುರಟ್ಟಿ ಹೊಸೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕನಕದಾಸ ಜಯಂತಿ ಹಾಗೂ ಗಡಿನಾಡ ನುಡಿಸಿರಿ ಉತ್ಸವ ಸಮಾರಂಭದಲ್ಲಿ ವಿವಿಧ ಕನ್ನಡ ಸ್ಫರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ, ಎಸ್‌ಎಸ್‌ಎಲ್‌ಸಿಯಲ್ಲಿ ೪೮೩ ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣವಾಗಿದ್ದರೂ ಕೂಡಾ ತಮ್ಮ ಸ್ನೇಹಿತರಿಗಿಂತ ಕಡಿಮೆ ಅಂಕ ಪಡೆದೆನೆಂಬ ಖಿನ್ನತೆಗೊಳಗಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದ ಇದೇ ಶಾಲೆಯ ದಿವ್ಯಶ್ರೀಯ ತಂದೆ ಮೌರ್ಯ ಅವರು ತಮ್ಮ ಮಗಳ ನೆನಪಾರ್ಥವಾಗಿ ನೆನಪಿನ ಫಲಕಗಳನ್ನು ನೀಡಿ ಇನ್ನು ಮುಂದೆ ಯಾವ ವಿದ್ಯಾರ್ಥಿಯು ಸಹ ಇಂತಹ ದುಡುಕು ನಿರ್ಧಾರಕ್ಕೆ ಕೈ ಹಾಕಿ ಪೋಷಕರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಬಾರದೆಂಬ ಸಂದೇಶವನ್ನು ಸಾರಿದರು.ವಿದ್ಯಾರ್ಥಿಗಳು ಛದ್ಮವೇಷ,ಕಂಸಾಳೆ, ವೀರಗಾಸೆ ವಿವಿಧ ಪ್ರಕಾರಗಳ ದೇಶೀಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಕುರಟ್ಟಿ ಹೊಸೂರು ಹಾಗೂ ಶೆಟ್ಟಳ್ಳಿ ಗ್ರಾಮದವರೆಗೆ ಜಾಥಾ ಏರ್ಪಡಿಸಲಾಗಿತ್ತು.ಎಸ್.ಡಿ.ಎಂ.ಸಿ ಅಧ್ಯಕ್ಷ ನಟರಾಜು ಮುಖ್ಯ ಮಂತ್ರಿ ಪದಕ ಪುರಸ್ಕೃತ ಚೆನ್ನಪ್ಪ,ಮುಖ್ಯ ಶಿಕ್ಷಕ ಶಿವಶಂಕರ ನಾಯಕ ಮತ್ತು ಪೋಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮೃತ ವಿದ್ಯಾರ್ಥಿನಿ ದಿವ್ಯಶ್ರೀ ಸ್ಮರಣಾರ್ಥ ಮೌನಾಚರಣೆಯನ್ನು ಆಚರಿಸಲಾಯಿತು.ಜೀವ ದೊಡ್ಡದೋ ಹೊರತು ಜೀವನವಲ್ಲ ತನ್ನಿಚ್ಚೆಯಂತೆ ಸಾಧನೆ ಮಾಡಲಾಗಲಿಲ್ಲ ಎಂದು ಹತಾಶಗೊಂಡು ಜೀವಕ್ಕೆ ಕುತ್ತು ತಂದುಕೊಳ್ಳುವುದು ತರವಲ್ಲ. ಸಾಧಿಸಲು ಬೇಕಾದಷ್ಟು ಅವಕಾಶಗಳು ದಾರಿಗಳು ಇದ್ದು ಮನಸ್ಸನ್ನು ದೃಢವಾಗಿಟ್ಟುಕೊಂಡು ಇವತ್ತಿನ ಸೋಲು ನಾಳಿನ ಗೆಲುವಾದ್ದರಿಂದ ಮೂರು ಸಾರಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು ರಿಪೀಟರ್ಸ್ ಎಂದು ಕರೆಯುವುದಿಲ್ಲ ಯಾರ ಸಾಮರ್ಥ್ಯವನ್ನು ಅಂಕದಿಂದ ಅಳೆಯೊಲ್ಲವಾದ್ದರಿಂದ ವಿಕಲಚೇತನರು ಕೂಡಾ ಅನೇಕ ರಂಗದಲ್ಲಿ ಸಾಧನೆ ಮಾಡಿರುವುದರಿಂದ ಜೀವ ಹಾನಿಗೆ ಮುಂದಾಗದಂತೆ ಮುಖ್ಯ ಶಿಕ್ಷಕರು ಬುದ್ದಿವಾದ ಹೇಳಿದರು.
ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ