ಯಾದಗಿರಿ:ಶಹಾಪುರ ತಾಲೂಕಿನ ಗೊರಸೇನಾ ತಾಲೂಕ ಸಮಿತಿ ನ್ಯಾ ಎ.ಜೆ ಸದಾಶಿವ ಆಯೋಗದ ವರದಿ ಮರುಜೀವ ನೀಡದಂತೆ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶರಣಬಸಪ್ಪ ಗೌಡ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಸ್ಥಿತಿಗತಿ,ಸರ್ಕಾರದ ಸೌಲಭ್ಯಗಳು ಹಂಚಿಕೆಯಲ್ಲಿ ತಾರತಮ್ಯ ಕುರಿತು ಅಧ್ಯಯನ 2005 ರಲ್ಲಿ ರಾಜ್ಯ ಸರ್ಕಾರ ಏಕ ಸದಸ್ಯ ಆಯೋಗ ರಚನೆ ಮಾಡಿತ್ತು. ನ್ಯಾ ಎನ್.ವೈ ಹನುಮಂತಪ್ಪ,ನ್ಯಾ ಬಾಲಕೃಷ್ಣ ಅವರ ನಂತರದಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡ ನ್ಯಾ ಎಂ.ಜೆ ಸದಾಶಿವ ಅವರು 2012 ರಲ್ಲಿ ತಮ್ಮ ಅಂತಿಮ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು.
ಈ ವರದಿಯ ಶಿಫಾರಸುಗಳನ್ನು ಗಮನಿಸಿದಾಗ ಆಯೋಗದ ವರದಿ ವಿರುದ್ಧವಾಗಿ ಎಂದು ತಿಳಿದು ಬಂದಿದೆ ಪರಿಶಿಷ್ಟ ಕೆಲ ಸಮುದಾಯಗಳಿಗೆ ಓಲೈಸುವುದು ಮತ್ತೆ ಕೆಲ ಸಮುದಾಯಗಳಿಗೆ ಅಪಮಾನ ಮಾಡಿರುವ ಅಂಶಗಳು ಈ ವರದಿಯಲ್ಲಿ ಕಂಡು ಬಂದಿರುತ್ತದೆ ಈ ವರದಿ ಒಳಗೊಂಡಂತೆ ರಾಜ್ಯದ ಬಂಜಾರ,ಭೋವಿ, ಕೊರಚ,ಕೊರಮ,ಅಲೆಮಾರಿ,ಸಮುದಾಯಗಳಿಗೆ ಸಾಂವಿಧಾನಿಕ ಮೀಸಲಾತಿ ಹಕ್ಕನ್ನು ಅಭದ್ರಗೊಳಿಸುವ ಹುನ್ನಾರ ಹಾಗೂ ಇದರ ಹಿಂದೆ ದೊಡ್ಡ ದೊಡ್ಡ ರಾಜಕಾರಿಣಿಗಳ ಕೈವಾಡವಿದ್ದಂತೆ ಕಂಡುಬರುತ್ತಿದೆ ಈ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು ಎಂದು ಬಂಜಾರ,ಭೋವಿ, ಕೊರಮ,ಕೊರಚ,ಚಲವಾದಿ,ಅಲೆಮಾರಿ ಸೇರಿದಂತೆ ಬಹುಸಂಖ್ಯಾತ ಪರಿಶಿಷ್ಟ ಜಾತಿಯ ಸಮುದಾಯಗಳು ಹೋರಾಟ ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು.ನಮ್ಮ ನೆರೆಯ ಆಂಧ್ರಪ್ರದೇಶ ಸರ್ಕಾರ 2005 ರಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಮಾಡುತ್ತಾ ಇ.ವಿ ಚಿನ್ಮಯ್ಯ ವಿರುದ್ಧ ಆಂಧ್ರಪ್ರದೇಶ ಸರ್ಕಾರ ಎಂಬ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸಲು ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲಾ ಎಂದು ಆದೇಶಿಸಿ ಆಂದ್ರಪ್ರದೇಶ ಸರ್ಕಾರದ ಕಾಯಿದೆಯನ್ನು ಅಸಂವಿಧಾನಿಕ ಎಂದು ರದ್ದು ಮಾಡಿತು.
ಮುಕ್ತಾಯಗೊಂಡಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಗೆ ಮರುಜೀವ ನೀಡದಂತೆ ಗೊರಸೇನಾ ರಾಷ್ಟ್ರೀಯ ಸಂಘಟನೆ ತಾಲೂಕ ಘಟಕ ಶಹಾಪುರ ವತಿಯಿಂದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ಗೌಡ ದರ್ಶನಾಪುರ ಅವರಿಗೆ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ತೆರುವಂತೆ ಗೊರಸೇನಾ ರಾಷ್ಟ್ರೀಯ ಸಂಘಟನೆ ತಾಲೂಕ ಘಟಕ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಗೊರಸೇನಾ ರಾಷ್ಟ್ರೀಯ ಸಂಘಟನೆಯ ಜಿಲ್ಲಾಧ್ಯಕ್ಷರಾದ ರಾಮು ರಾಠೋಡ, ತಾಲೂಕ ಖಂಜಾಂಚಿಯಾದ ಶಿವರಾಜ್ ರಾಠೋಡ, ಸಹ ಕಾರ್ಯದರ್ಶಿ ಶಶಿಕಾಂತ ಚೌವ್ಹಾಣ್, ಸಂಘಟನಾ ಕಾರ್ಯದರ್ಶಿ ಚನ್ನು ಜಾದವ್, ತಾಲೂಕ ಉಪಾಧ್ಯಕ್ಷ ಅವಿನಾಶ್ ಚಿನ್ನಾ ರಾಠೋಡ ಭಾಗವಹಿಸಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.