ಕಲಬುರಗಿ:ರಾಜಸ್ತಾನ,ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ರಾಷ್ಟ್ರೀಯ ಪಕ್ಷವಾದ ಬಿಜೆಪಿಯು ಈ ಬಾರಿ ಬಹು ಮತದಿಂದ ಗೆಲುವು ಸಾದಿಸಿದ್ದು ಮೂರು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಬಂದಿದೆ ಎಂದರೆ,ಮೋದಿ ನಾಯಕತ್ವ ಹಾಗೂ ಆಡಳಿತ ಮೆಚ್ಚಿ ಜನ ಮತ ನೀಡಿದ್ದಾರೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಹರ್ಷ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಈ ರಾಜ್ಯಗಳಲ್ಲಿ ಜನರು ಡಬಲ್ ಸರ್ಕಾರ ಬೇಕೆನ್ನುವ ಆಶಾ ದೃಷ್ಟಿಯಿಂದ ತಮ್ಮ ರಾಜ್ಯಗಳಲ್ಲಿ ಬಿಜೆಪಿ ಮತ ನೀಡಿರುವುದು ಕಂಡುಬರುತ್ತದೆ.ಕರ್ನಾಟಕದಲ್ಲಿಯೂ ಕೂಡಾ ಬಿಜೆಪಿ ಮುನ್ನಡೆ ಸಾಧಿಸುವಲ್ಲಿ ವಿಫಲ ಕಂಡಿರಬಹುದು.ಆದರೆ ಕೇಂದ್ರ ನಾಯಕರ ನಿಯಮಾವಳಿಗಳಿಂದ ಬಿಜೆಪಿ ಹಿನ್ನಡೆ ಸಾಧಿಸಲು ಸಾಧ್ಯವಾಗಿದೆ ಆದರೆ ಈ ಚುನಾವಣೆಗಳಲ್ಲಿ ಕರ್ನಾಟಕದ ಚುನಾವಣೆಯಲ್ಲಿ ಅಳವಡಿಸಿದ ನಿಯಮಾವಳಿಗಳನ್ನ ಮಧ್ಯಪ್ರದೇಶ, ಛತ್ತೀಸ್ಗಡ,ರಾಜಸ್ತಾನ ಅಳವಡಿಸಲಿಲ್ಲ ಈ ಹಿನ್ನಲೆಯಲ್ಲಿ ಬಾರಿ ಬಹುಮತದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು.ಕಾಂಗ್ರೆಸ್ ನ ಸುಳ್ಳು ಗ್ಯಾರಂಟಿಗಳು ಈ ರಾಜ್ಯಗಳಲ್ಲಿ ಪ್ರತಿಫಲದಾಯಕವಾಗಲಿಲ್ಲ.ಡಬಲ್ ಸರಕಾರದ ಆಡಳಿತಕ್ಕೆ ಅನುವು ಮಾಡಿಕೊಟ್ಟ ಈ ಮೂರು ರಾಜ್ಯದ ಮತದಾರರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.