ಕೈಯ ತುತ್ತು ಇಟ್ಟು ಮುದ್ದಿನಿಂದ ಸಾಕಿದೆ ನೀನು
ನಿನ್ನ ಮಾಡಿಲ್ಲ ಮಡಿಲಲ್ಲಿ ಬೆಳೆದ ನಾನು
ನಿನ್ನ ಕಷ್ಟಗಳು ಎಷ್ಟೇ ಇದ್ದರೂ ಕಲಿಕೆಗಿಂತ ನಮಗಾಗಿ ಶ್ರಮಿಸುತ್ತಿರುವೆ ಪ್ರತಿನಿತ್ಯವೂ ನೀನು
ಮನೆಯ ಮೊದಲ ಗುರುವಾಗಿ
ಕಲಿಕೆಗಂತ ಅಕ್ಷರ ಕಲಿಸಿ
ಕರುಣೆ ಪ್ರೀತಿ ವಾತ್ಸಲ್ಯ ಎಂಬ ಜ್ಞಾನ ತುಂಬಿ
ಜಗಕ್ಕೆ ಪರಿಚಯಿಸಿದೆ ನೀನು
ಮಗುವ ನಗುವಿನಲ್ಲಿ ನಗುವ ಕಂಡೆ
ಅವರೇ ನಮ್ಮ ಜೀವನಕ್ಕೆ ಆಸರೆ ಎಂದೆ
ಅವರ ಶಿಕ್ಷಣಕ್ಕಾಗಿ ಪರಿ ತಪ್ಪಿಸಿದೆ ನೀನು
ಸಂಸಾರ ಎಂಬ ನೇಗಿಲ ಹಿಡಿದೆ ನೀನು
-ಚಂದ್ರಶೇಖರಚಾರಿ ಎಂ.ಶಿಕ್ಷಕರು,ಚಿತ್ರದುರ್ಗ