ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಕಾರ್ತಿಕೋತ್ಸವ ಜರುಗಿತು.ಶ್ರೀ ಉದ್ಭವ ಮೂರ್ತಿ ಬಸವೇಶ್ವರ ದೇವರ ಕಾರ್ತೀಕ ಉತ್ಸವ ಅದ್ದೂರಿಯಾಗಿ ಜರುಗಿತು.13/12/2023 ರಂದು ಕಾರ್ತೀಕ ಇಳಿಯಿತು ನಂತರ ನರೇಗಲ್ ಪುರುವಂತವರಿಂದ ಶ್ರೀ ಬಸವೇಶ್ವರ ದೇವರ,
ಶ್ರೀ ವೀರಭದ್ರೇಶ್ವರ ದೇವರ ವಡಪುಗಳನ್ನು ಹೇಳುತ್ತಾ,ಭಕ್ತರಿಗೆ ಶಸ್ತ್ರ ಹಾಕುವ ಶಾಸ್ತ್ರ ನೆರವೇರಿದ ನಂತರ ನಂದಿ ಕೋಲನ್ನು ಹೊತ್ತುಕೊಂಡು ಕುಣಿಯುವುದನ್ನು ನೋಡಲು ಎರಡು ಕಣ್ಣು ಸಾಲದುಡೊಳ್ಳಿನ ಕುಣಿತ ಅಂತೂ ಅದ್ಬುತವಾಗಿತ್ತು ಬೆಳಿಗ್ಗೆ 9=00 ಗಂಟೆಯಿಂದ ಮೆರವಣಿಗೆಗೆ ಹೊರಟಾಗ ಮುಂದೆ ಡೊಳ್ಳಿನ ಕುಣಿತದವರು ಅದರ ಹಿಂದೆ ಪಲ್ಲಕ್ಕಿ ಹೊತ್ತವರು ಮತ್ತೆ ಕೋಲಿನವರು ಶ್ರೀ ಬಸವೇಶ್ವರ ದೇವರ ಮೆರವಣಿಗೆ ಮಾಡುತ್ತಾ ಮತ್ತೆ ತನ್ನ ಜಾಗಕ್ಕೆ ಬರಬೇಕು ಅಂದ್ರೆ ಸಂಜೆ 4 ಗಂಟೆ ಆಗಿರುತ್ತದೆ.
ವರದಿ:ಮಲ್ಲಪ್ಪ.ಗೂ.ಸೊಂಟಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.