ಸಿಂಧನೂರು ತಾಲೂಕಿನ ತಿಮ್ಮಾಪೂರ ಗ್ರಾಮದ ಪರಿಸರ ಪ್ರೇಮಿ ವೀರಭದ್ರಯ್ಯಸ್ವಾಮಿ ಅವರ ಮಗನ ಮೊದಲನೆಯ ವರ್ಷದ ಹುಟ್ಟು ಹಬ್ಬವನ್ನು ಬಿಲ್ವಪತ್ರೆ ಸಸಿನೆಟ್ಟು 51ಸಸಿಗಳನ್ನು ವಿತರಣೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ನಾವು ಮಾಡುವ ಪರಿಸರ ಸಂರಕ್ಷಣೆಯ ಕೆಲಸ ಇತರರಿಗೆ ಮಾದರಿಯಾಗಬೇಕು ಇವತ್ತು ವನಸಿರಿ ಫೌಂಡೇಶನ್ ಸದಸ್ಯರು,ಪರಿಸರ ಪ್ರೇಮಿಗಳು ಹಾಗೂ ಆತ್ಮೀಯರಾದ ತಿಮ್ಮಾಪೂರ ಗ್ರಾಮದ ವೀರಭದ್ರಯ್ಯಸ್ವಾಮಿ ಅವರು ವನಸಿರಿ ಫೌಂಡೇಶನ್ ಜೊತೆಗೆ ಕೈಜೋಡಿಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ ಇಂದು ತಮ್ಮ ಮಗುವಿನ ಹುಟ್ಟು ಹಬ್ಬದ ಅಂಗವಾಗಿ 51ಸಸಿಗಳನ್ನು ವಿತರಣೆ ಮಾಡಿ ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು ಇವರ ಸೇವೆ ಹೀಗೆ ನಿರಂತರವಾಗಿರಲಿ ವನಸಿರಿ ತಂಡದ ಜೊತೆಗೆ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಕಾರ್ಯ ನಿರ್ವಹಿಸಲಿ ಎಂದು ಆಶಿಸಿದರು.
ಈ ಸಂದರ್ಬದಲ್ಲಿ ವೇ.ಮೂ ಮರಿಸ್ವಾಮಿ,ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ,ರಾಜ್ಯ ಕಾರ್ಯದರ್ಶಿ ಶರಣೇಗೌಡ ಹೆಡಗಿನಾಳ,ಗಿರಿಸ್ವಾಮಿ ಹೆಡಗಿನಾಳ,ಮಸ್ಕಿ ತಾಲೂಕ ಅದ್ಯಕ್ಷರಾದ ರಾಜು ಬಳಗಾನೂರ ಗ್ರಾಮದವರಾದ ವೀರಭದ್ರಯ್ಯ ಸ್ವಾಮಿ ಶಿಕ್ಷಕರು,ಸಿದ್ದಯ್ಯ ಸ್ವಾಮಿ,ಅಮರಯ್ಯ ಸ್ವಾಮಿ,ಪುತ್ರಪ್ಪ,ಶರಣಯ್ಯ ಹೊಸ್ಸಳ್ಳಿ,ದೇವಪ್ಪ,ದ್ಯಾವಣ್ಣ ಹುಲಿರಾಜ ಹಸಿರು ಸೇನೆ ಅಧ್ಯಕ್ಷರು,ಮಂಜಮ್ಮ ಪೊಲೀಸ್ ಪಾಟೀಲ್ ಗ್ರಾಂ ಪಂಚಾಯಿತಿ ಸದಸ್ಯರು,ಶಿವಯ್ಯ,ಡಾ.ನಾಗಯ್ಯ ಸ್ವಾಮಿ ನವಲಕಲ್ ತಿಮ್ಮಾಪುರ ಗ್ರಾಮದವರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.