ಧಾರವಾಡ:ಜಯ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ಧಾರವಾಡದ ಶ್ರೀನಗರ ವೃತ್ತದಿಂದ ಕರ್ನಾಟಕ ವಿಶ್ವವಿದ್ಯಾಲಯದ ಉದ್ಯೋಗಸ್ತ ಮಹಿಳಾ ವಸತಿ ನಿಲಯದವರೆಗೆ ರೈಲ್ವೆ ಅಂಡರ್ ಗ್ರೌಂಡ್ ಮಾರ್ಗದ ರಸ್ತೆಯ ಕಾಮಗಾರಿ ಪ್ರಾರಂಭವಾಗಿರುವುದರಿಂದ ಇಲ್ಲಿ ಯಾವುದೇ ರೀತಿಯ ಬೀದಿ ದೀಪದ ವ್ಯವಸ್ಥೆ ಇಲ್ಲದಂತಾಗಿದೆ, ಸದರಿ ಎರಡೂ ಭಾಗಗಳಲ್ಲಿ ಯಾವುದೇ ಕಟ್ಟಡಗಳುವಿಲ್ಲದೇ ನಿರ್ಜನ ಪ್ರದೇಶವಿದ್ದು ಇಲ್ಲಿ ಸಂಚರಿಸುವ ಮಹಿಳೆಯರು,ವಿದ್ಯಾರ್ಥಿನಿಯರಿಗೆ, ಓಡಾಡಲು ಭಯದ ವಾತಾವರಣ ಉಂಟಾಗಿದೆ ಹಾಗೂ ಯಾವುದೇ ರೀತಿ ಭದ್ರತೆ ಇಲ್ಲದಂತಾಗಿದೆ ಆದಕಾರಣ,ಈ ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ಸೂಕ್ತ ಭದ್ರತೆಗಾಗಿ ರಸ್ತೆ ಕಾಮಗಾರಿ ಮುಕ್ತಾಯಗೊಳ್ಳುವವರಿಗೆ ಬೀದಿ ದೀಪದ ವ್ಯವಸ್ಥೆ ಮತ್ತು ಸಂಜೆ 6 ಗಂಟೆಯಿಂದ ರಾತ್ರಿಯ 10: ಗಂಟೆಗೆಯವರೆಗೂ ಕನಿಷ್ಠ ಒಬ್ಬ ಪೊಲೀಸ್ ಪೇದೆಯನ್ನು ನೇಮಿಸುವ ಮೂಲಕ ಭದ್ರತೆ ಒದಗಿಸಿಕೊಡಬೇಕೆಂದು ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ,ನೇತೃತ್ವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ ಶ್ರೀ ಕುಲಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾದವ,ಮಲ್ಲಿಕಾರ್ಜುನ ಅಸುಂಡಿ, ಜ್ಯೋತಿಬಾ ಪಾಟೀಲ,ಉಮೇಶ ಶಿಂಧೆ,ಜಿ,ಕೆ, ಕಾಂಬ್ಳೆ,ಪ್ರಕಾಶ ಪಾಟೀಲ,ಸುರೇಶ ಚೌಹಾಣ, ಸಂತೋಷ ಪಾಟೀಲ,ಗಿರೀಶ ಗೋಕಾಕ,ಪ್ರಮೋದ ಶೆಟ್ಟಿ,ರವಿ ಯಲ್ಲನ್ನವರ ಮುಂತಾದವರು ಉಪಸ್ಥಿತರಿದ್ದರು.
ವರದಿ-ಸದಾಶಿವ ಭೀ ಮುಡೆಮ್ಮನವರ