ಕೊಟ್ಟೂರು:2023-24ನೇ ಸಾಲಿನಲ್ಲಿ ಕೊಟ್ಟೂರು ಬರಪೀಡಿತ ತಾಲೂಕು ಎಂದು ಘೋಷಣೆಯಾಗಿರುತ್ತದೆ ಮುಂಬರುವ ದಿನಗಳಲ್ಲಿ ಅಂತರ್ಜಲ ಇಲ್ಲದೇ ಇರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾದಲ್ಲಿ ಮಾತ್ರ ಶುದ್ದ ಕುಡಿಯುವ ನೀರನ್ನು ಟ್ಯಾಂಕರ್ ಗಳ ಮೂಲಕ ಸರಬರಾಜು ಮಾಡಲು ಅವಕಾಶವಿರುತ್ತದೆ.ಈ ಕಾರ್ಯ ಚಟುವಟಿಕೆಯನ್ನು Bhoomi Monitoring ಅಭಿವೃದ್ದಿಪಡಿಸಿರುವ Cell Tanker Utilisation App ಬಳಸಿ ದತ್ತಾಂಶವನ್ನು ಸಂಗ್ರಹಿಸಲಾಗುವುದು ಆದ್ದರಿಂದ ಕೊಟ್ಟೂರು ತಾಲೂಕಿನ ಆಸಕ್ತ ಜಿ.ಪಿ.ಎಸ್.ಅಳವಡಿಸಿದ ಟ್ಯಾಂಕರ್ ಗಳು ಮಾಲಿಕರು ತಮ್ಮ ದರಪಟ್ಟಿಯನ್ನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕೂಡ್ಲಿಗಿ ಅಥವಾ ತಹಶೀಲ್ದಾರರು ತಾಲೂಕು ಕಛೇರಿ ಕೊಟ್ಟೂರು ರವರಿಗೆ 15 ದಿನಗಳ ಒಳಗಾಗಿ ಸಲ್ಲಿಸಲು ತಹಶೀಲ್ದಾರರು ಜಿ.ಕೆ ಅಮರೇಶ್ ರವರು ಹಾಗೂ ಕೊಟ್ಟೂರು ತಾಲೂಕು ಬರಗಾಲ ಟಾಸ್ಕ್ ಪೋರ್ಸ್ ಸಮಿತಿ ಕಾರ್ಯದರ್ಶಿಗಳು,ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.