ಕಲ್ಬುರ್ಗಿ:ಪತ್ರಿಕಾ ರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯವೇ ಸ್ಪಷ್ಟವಾಗಿ ಹೇಳಿದೆ ಹಾಗೂ ನಮ್ಮ ರಾಜ್ಯದಲ್ಲಿ ಸುಮಾರು ಹದಿನಾರು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಒಂದಿಲ್ಲ ಒಂದು ಸುದ್ದಿ ಮಾಧ್ಯಮಗಳಲ್ಲಿ ತಮ್ಮ ಹರಿತವಾದ ಲೇಖನಿಯ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವುದರೊಂದಿಗೆ ಸರ್ಕಾರಕ್ಕೆ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದಾರೆ ಅದೇ ರೀತಿಯಾಗಿ ಜೀವದ ಹಂಗು ತೊರೆದು ಸಮಾಜದ ಒಳಿತಿಗಾಗಿ ಶ್ರಮಿಸುವ ಪತ್ರಕರ್ತರಿಗೆ ಸರಕಾರದಿಂದ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಸಿಗದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಮೆಹಬೂಬ್ ಕೆ ಸಿ ವಕೀಲರು ಸರ್ಕಾರಕ್ಕೆ ಚಾಟಿ ಬಿಸಿದ್ದಾರೆ ಹಾಗೂ ನಮ್ಮ ದೇಶದಲ್ಲಿ ಆಗಲಿ ಅಥವಾ ರಾಜ್ಯದಲ್ಲಿ ಆಗಲಿ ಯಾವುದೇ ಸರ್ಕಾರ ಬಂದರೂ 145 ಕೋಟಿ ಜನಸಂಖ್ಯೆಗೆ ಸುಗಮವಾದ ಆಡಳಿತ ನೀಡಬೇಕಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗದ ಪತ್ರಕರ್ತರ ಪಾತ್ರ ಮಹತ್ವದ್ದು ಎಂದು ಇಂದಿನ ರಾಜಕಾರಣಿಗಳು ಹಾಗೂ ರಾಜ್ಯದ ನಮ್ಮನ್ನು ಆಳುವ ಸರಕಾರಗಳು ಗಮನಿಸಬೇಕಾಗಿದೆ ಶೀಘ್ರದಲ್ಲಿ ಪತ್ರಕರ್ತರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳು ಸರ್ಕಾರದ ವತಿಯಿಂದ ದೊರೆತರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಟ್ಟ ಪತ್ರಿಕಾ ಮಾಧ್ಯಮಕ್ಕೆ ಹಾಗೂ ಸಂವಿಧಾನಾತ್ಮಕ ಕಾನೂನಿನ ಚೌಕಟ್ಟಿಗೆ ಗೌರವ ಸಲ್ಲಿಸಿದಂತೆ ಎಂದು ಯಡ್ರಾಮಿ ತಾಲೂಕಿನ ಮಹೆಬೂಬ್ ಕೆ ಸಿ ವಕೀಲರು ಬಿಳವಾರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.