ವಡಗೇರಾ:ಗೊಂಡ ಪರ್ಯಾಯ ಪದ ಕುರುಬ ಎಸ್‍ಟಿಗೆ ಸೇರಿಸಬೇಕು ಇದಕ್ಕಾಗಿ ಜ.2ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ವಡಗೇರಾ ಪಟ್ಟಣದ ಹೊನ್ನಯ್ಯ ತಾತ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಹಸಿಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಯಲಿದೆ ಎಂದು ಕುರುಬ ಸಮಾಜದ ಹಿರಿಯ ಮುಖಂಡರಾದ ಸಿದ್ದಣ್ಣಗೌಡ ಕಾಡಂನೋರ ತಿಳಿಸಿದರು.
ವಡಗೇರಾ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ತೆರಳಿ, ಸಮಾಜದ ಮುಖಂಡರ ಜೊತೆ ಹೋರಾಟದ ಪೂರ್ವಭಾವಿ ಸಭೆಯನ್ನು ನಡೆಸಿ ಅವರು ಮಾತನಾಡಿದರು,ನಮ್ಮ ನ್ಯಾಯಯುತವಾದ ಬೇಡಿಕೆ ಈಡೇರಿಕೆಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸುವ ಮೂಲಕ ನಮ್ಮ ಹಕ್ಕನ್ನು ಪಡೆಯಬೇಕಾಗಿದೆ,ನಾವುಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ ಆದಕಾರಣ ಸಮಾಜದ ಎಲ್ಲಾ ಮುಖಂಡರುಗಳು ಹಾಗೂ ಮಹಿಳೆಯರು ಸಮಾಜದ ವಿವಿಧ ಸಂಘಟನೆಯ ಪದಾಧಿಕಾರಿಗಳು ಸದಸ್ಯರು ಈ ಹೋರಾಟದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಅವರು ಹೇಳಿದರು.
ಕುರುಬ ಸಮಾಜದ ಜಿಲ್ಲಾಧ್ಯಕ್ಷರಾದ ಮಲ್ಲಣ್ಣ ಐಕೂರ ಮಾತನಾಡಿ ಈಗಾಗಲೇ ಬೀದರ್ ಕಲಬುರ್ಗಿ ಯಾದಗಿರಿ ಜಿಲ್ಲೆಗಳ ಕುಲುಶಾಸ್ತ್ರ ಅಧ್ಯಯನ ವರದಿ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿ ಸುಮಾರು ವರ್ಷಗಳು ಕಳೆದರೂ ಕೂಡಾ ಕೇಂದ್ರ ಸರ್ಕಾರ ನಮ್ಮ ಸಮಾಜವನ್ನು ಎಸ್ ಟಿ ಗೆ ಸೇರಿಸುವಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ ಕೇಂದ್ರ ಸರ್ಕಾರ ನಮ್ಮ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುವವರೆಗೂ ನಾವುಗಳು ನಿರಂತರ ಹೋರಾಟ ಮಾಡೋಣ ಎಲ್ಲರ ಸಹಕಾರ ಅವಶ್ಯಕವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕರಿಕಳ್ಳಿ,ಕುರುಬ ಸಂಘದ ಜಿಲ್ಲಾ ನಿರ್ದೇಶಕರಗಳಾದ ಮರೆಪ್ಪ ಬಿಳ್ಹಾರ, ಮರೆಪ್ಪ ಜಡಿ,ದೇವಪ್ಪ ಕಡೆಚೂರ,ಹಣುಮಂತ್ರಾಯಗೌಡ ತೇಕರಾಳ,ಯುವ ಮುಖಂಡರಾದ ಮಲ್ಲಯ್ಯ ಕಸಿಬಿ ಯಾದಗಿರಿ, ಮರಿಲಿಂಗಪ್ಪ ಕುಮನೂರ,ಶಿವಕುಮಾರ ಕೊಂಕಲ್, ಹೊನ್ನಪ್ಪ ಕಡೆಚೂರ ಹಾಗೂ ಪದಾಧಿಕಾರಿಗಳು ವಿವಿಧ ಗ್ರಾಮದ ಸಮಾಜದ ಮುಖಂಡರುಗಳು ಯುವಕರು ಉಪಸ್ಥಿತರಿದ್ದರು.
ವರದಿ:ಶಿವರಾಜ ಸಾಹುಕಾರ್ ವಡಗೇರಾ