ಬಲ್ಲವರು ಬಲ್ಲಂಗ ಮಾತನಾಡುವರು
ಬರುವುದು ಭೂಮಿಗೆ ಒಳ್ಳೆಯದಕೆ
ಕಳೆದುಹೋಗುವುದು ಮೋಸದ ಮಾತು
ಜಯದ ದಾರಿವು ನಮ್ಮದು ತಿಳಿದವರು ಹೇಳುವರು
ಚಾಡಿ ಮಾತಿಗೆ ಇಲ್ಲಿ ಕೊನೆ ಇಲ್ಲ ದಿನಗಳು//
ಒಳ್ಳೆಯವರ ಮಾತಿನ್ಯಾಗ ಅರ್ಥವಿದ್ದರು
ಮಾತಿಗೆ ಅಗೌರವ ಸಲ್ಲಿಸುವರು ಮೋಸಗಾರರು
ಜನರ ಪ್ರೀತಿ ವಿಶ್ವಾಸದ ಬದುಕು ಕಾಣದವರು
ಇನ್ನೆಷ್ಟು ಮೋಸದ ನರನಾಡಿಗಳು ಅಡಗಿರುವ
ಮೋಸಕ್ಕೆ ಜಯವೇ ಜಯಕಾರ ಹಾಕುವುದು//
ನನ್ನವರೆಲ್ಲ ನನ್ನತನ ಬಿಡಲಿಲ್ಲ ಜಗದಲ್ಲಿ
ಮೋಸ ಮಾಡಿ ಸುಮ್ಮನಿರುವರು ಮಾಟಗಾರರು
ನಡಿವ ದಾರಿಯಲ್ಲೂ ತುಳಿಯುವರು ಕುತಂತ್ರದವರು
ಬಂದವಳು ಹಚ್ಚುವಳು ಮೋಸದ ಕಿಚ್ಚು
ಮೋಸದ ಮಾತಿಗೆ ಬಲೆಯಾದಳು ನನ್ನಮ್ಮ//
ಮಾನವನಿಗೂ ನಿಸರ್ಗಕ್ಕೂ ಹತ್ತಿತು ಕಿಚ್ಚು
ಸೋತರು ಬಿಡಲಿಲ್ಲ ನರ ಮಾನವ ದುರಂಕಾರ
ಪಾಪವ ತುಂಬಿರುವ ಸಮಯದಲ್ಲಿ ಜಯವೇಕಾಣದು
ಭಾವನೆ ಭಾವನಾತ್ಮಕವಾಗಿರಲ್ಲಿ ಮೋಸ ಮಾಡದಿರು
ಬಂದಿರುವುದು ಉಚಿತ ಹೋಗುವದು ಖಚಿತ ಇರುವುದು//
ಮಹಾಂತೇಶ ಖೈನೂರ