ಶಿವಮೊಗ್ಗ:ಬೈಲಹೊಂಗಲ ಹರಳಯ್ಯ ಕಾಲನಿಯಲ್ಲಿ 50 ವರ್ಷಗಳಿಂದ ವಾಸಿಸುತ್ತಿರುವ,40 ಕೊಳಗೇರಿ ಕುಟುಂಬ ನಿವಾಸಿಗಳಿಗೆ ಈ ಕೂಡಲೇ ನಿವೇಶನದ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಕರ್ನಾಟಕ ತ್ರಿಮತಸ್ಥ ಶ್ರೀಗುರು ರವಿದಾಸ್ ಪರಿಷತ್,(ರಿ.) ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಅಹಿಂದ ವರ್ಗಕ್ಕೆ ಸೇರಿದ ಕೊಳೆಗೇರಿ ನಿವಾಸಿಗಳಾದ,40 ಬಡ ಕುಟುಂಬಗಳು ಕಳೆದ 50 ವರ್ಷಗಳಿಂದ ಕೊಳೆಗೇರಿಯಲ್ಲಿ,ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದು ಸಂಬಂಧಪಟ್ಟ ಜನಪ್ರತಿನಿಧಿಗಳಿಗೂ, ಇಲಾಖೆಗಳಿಗೂ,ಹಕ್ಕುಪತ್ರಕ್ಕಾಗಿ ಹಲವಾರು ಬಾರಿ ಮನವಿ ನೀಡುತ್ತ ಬಂದಿದ್ದಾರೆ ಆದರೆ ಇದುವರೆಗೂ ಕೊಳಚೆ ನಿಗಮ ಮಂಡಳಿಯಿಂದ ಹಕ್ಕುಪತ್ರ ನೀಡಿರುವುದಿಲ್ಲ ಅರ್ಧ ಶತಮಾನವೇ ಕಳೆದರೂ ಮನವಿಗಳಿಗೆ ಯಾವುದೇ ಪ್ರತಿಫಲ, ಪ್ರಯೋಜನಗಳನ್ನು ಕಾಣದ ಕೊಳಗೇರಿ ನಿವಾಸಿಗಳು ದಿನಾಂಕ 04/12/2023ರಿಂದ ಹಕ್ಕುಪತ್ರಕ್ಕಾಗಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಾ ಬಯಲಲ್ಲಿ ಕುಳಿತಿದ್ದಾರೆ.
ಸರ್ಕಾರವು ಧರಣಿ ಕುಳಿತ ಈ ಕೊಳೆಗೇರಿ ನಿವಾಸಿಗಳಿಗೆ ತಕ್ಷಣವೇ ಹಕ್ಕುಪತ್ರ ನೀಡಬೇಕೆಂದು ಕರ್ನಾಟಕ ತ್ರಿಮತಸ್ಥ ಶ್ರೀ ಗುರು ರವಿದಾಸ್ ಪರಿಷತ್ ಗೌರವಪೂರ್ವಕವಾಗಿ ಒತ್ತಾಯಿಸುತ್ತದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಕರ್ನಾಟಕ ತ್ರಿಮತಸ್ಥ ಶ್ರೀಗುರು ರವಿದಾಸ್ ಪರಿಷತ್(ರಿ.) ಜಿಲ್ಲಾ ಸಂಚಾಲಕ ಚನ್ನವೀರಪ್ಪ ಗಾಮನಗಟ್ಟಿ,ಸಮಗಾರ ಸಮಾಜದ ಜಿಲ್ಲಾ ಅಧ್ಯಕ್ಷ ವೆಂಕಟರಮಣ,ಉಪಾಧ್ಯಕ್ಷ
ಗೋವಿಂದನಾಯ್ಕ್,ಶಿವಾನಂದ,ಕಲ್ಲೇಶ್,ಗೋಪಾಲ, ಮಂಜುನಾಥ್,ನಾಗೇಶ್,ಲೋಕೇಶ್,ಚೇತನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ:ಕೆ ಆರ್ ಶಂಕರ್,ಭದ್ರಾವತಿ