ಹನೂರು:ತಾಲ್ಲೂಕು ಸುತ್ತಮುತ್ತಲಿನಲ್ಲಿ ಗ್ರಾಮಗಳಲ್ಲಿ ವಾಸಿಸುವ ಜನರಲ್ಲಿ ಅದೇ ಗ್ರಾಮಗಳಿಂದ ನಾವು ಸರ್ವೆ ಮಾಡಿದಾಗ ೧೯೬೨ ರಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ ಆದರೆ ಇವರಿಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ,ಇವರ ಕಡೆ ಗಮನಹರಿಸಿಲ್ಲವೆಂದು ನಿರುದ್ಯೋಗಿಗಳ ರಾಜ್ಯ ಸಂಘದ ಅಧ್ಯಕ್ಷರಾದ ಕೂಡ್ಲೂರು ಶ್ರೀ ಧರ ಮೂರ್ತಿ ತಿಳಿಸಿದರು.ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂಲಭೂತ ಸೌಕರ್ಯಗಳಾದ ನೀರು,ವಿದ್ಯುತ್,ರಸ್ತೆಗಳ ಬಗ್ಗೆ ಸರ್ಕಾರ ಗಮನಹರಿಸಿಲ್ಲ ಈ ಸಂಬಂಧವಾಗಿ ಎಲ್ಲಾ ಅಧಿಕಾರಿಗಳಿಗೂ ಹಾಗೂ ಜನಪ್ರತಿನಿಧಿಗಳಿಗೂ ಎಲ್ಲಾರಿಗೂ ವಿಷಯ ತಿಳಿಸಿದರು,ಯಾವುದೇ ಪ್ರಯೋಜನವಾಗಿಲ್ಲ ರಾಮಪುರ ಹೋಬಳಿಯ ಎಲ್ ಪಿ ಎಸ್ ಕ್ಯಾಂಪಿನ ಫಲಾನುಭವಿಗಳಿಗೆ ಬರಿ ಹಕ್ಕು ಪತ್ರ ನೀಡಿ ಅತ್ತ ಮಾರಲು ಹಾಗದೆ ಇತ್ತ ಸರ್ಕಾರಿ ಸೌಲಭ್ಯ ಪಡೆಯಲು ಆಗದೆ ತೊಂದರೆಯಾಗಿದೆ.
ಅದೇ ರೀತಿಯಲ್ಲಿ ದಂಟಳ್ಳಿ ಗ್ರಾಮದಲ್ಲಿರುವ ಜಮಿನುಗಳಿಗೆ ಕೊಯಮತ್ತೂರು ಜಿಲ್ಲೆಯಿದ್ದಾಗ ಐನೂರು ಎಕ್ರೆ ದಾಖಲೆಯಿರುವ ಕಂದಾಯ ಭೂಮಿಯಿದೆ ಆದರೂ ಅರಣ್ಯ ಇಲಾಖೆಯವರು ತೊಂದರೆ ನೀಡುತ್ತಾರೆ,ಈಗಾಗಲೇ 194 ಜನ ರೈತರ ಮೇಲೆ ಕೇಸ್ ಹಾಕಿದ್ದಾರೆ 1902ರಲ್ಲಿ ಅಂದಿನ ಸರ್ಕಾರವು ಅರಣ್ಯ ಇಲಾಖೆಗೆ ಪತ್ರ ಬರೆದು ರೈತರು ಜೀವನ ಮಾಡಲು ತೊಂದರೆ ಮಾಡಬೇಡಿ ಎಂದು ತಿಳಿಸಿದರು.ಡಿ ಲೈನ್ ಮಾಡಲಾಗಿದೆ ಇನ್ನು ಅರಣ್ಯ ಇಲಾಖೆ ೧೯೭೧ ರ ಪ್ರಕಾರ ಯಾವುದೇ ಜಮೀನು ಅತಿಕ್ರಮಿಸಲು ಗೆಜೆಟ್ ನೋಟಿಫಿಕೆಷನ್ ಮುಖಾಂತರ ಆಕ್ರಮಿಸಿಕೊಳ್ಳಬೇಕು ಆಗ ಮಾತ್ರ ಸಾಧ್ಯ ಸರ್ಕಾರ ಈ ಕೂಡಲೆ ಸಾಗುವಳಿ ಮಾಡುವವರಿಗೆ ಪಟ್ಟಾ ನೀಡಬೇಕು.ಇದೇ ತಿಂಗಳು
೨೨ ರಂದು ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ, ಚಾಮರಾಜನಗರ ಜಿಲ್ಲೆಯು ಇಪ್ಪತ್ತೇಳು ವರ್ಷ ಕಳೆದಿದೆ ಆದರೂ ಭೂ ದಾಖಲೆಯನ್ನು ಕೊಯಂಬತ್ತೂರಿನಲ್ಲಿರಿಸಲಾಗಿದೆ ಈ ಕೂಡಲೇ ದಾಖಲೆಯನ್ನು ತರಿಸಿಕೊಳ್ಳಲು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡುತ್ತೆವೆ ಎಂದರು ಇದೇ ಸಂದರ್ಭದಲ್ಲಿ ಪುಟ್ಟಮಾದಯ್ಯ,ಮರಿಯ ಲೂಯಿಸ್,ಕ್ರಿಷ್ಣಪ್ಪ,ರಂಜಿತ್ ಕುಮಾರ್,ಆಂತೋಣಿ, ಇನ್ನಿತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್