ಕಾರವಾರ:ಪ್ರಧಾನಿ ನರೇಂದ್ರ ಮೋದಿಯವರು ೨೦೪೭ ರವರೆಗೆ ದೇಶವನ್ನು ವಿಶ್ವದಲ್ಲೆ ಒಂದನೇ ಸ್ಥಾನಕ್ಕೇರಿಸುವದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಬಡಜನರ ಬದುಕಿಗೆ ಆಸರೆ ನೀಡಲು ಅನೇಕ ಜನಪರ ಯೋಜನೆಗಳನ್ನು ನೀಡಿದ್ದಾರೆ.೨೭೮ ಜನಪರ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಂತಾಗಲು ಬಿಜೆಪಿ ಪಕ್ಷ ವಿಕಸಿತ ಭಾರತ’ ಯೋಜನೆಯಡಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ಆದರೆ ಕೆಟ್ಟ ರಾಜಕೀಯ ಕಾರಣಕ್ಕೆ ರಾಜ್ಯದ ಸಿದ್ದರಾಮಯ್ಯ ಸರಕಾರ ಕೇಂದ್ರದ ಯೋಜನೆಗಳಿಗೆ ಸಹಕಾರ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿರುವುದು ಬಡವರಿಗೆ ಮಾಡುತ್ತಿರುವ ಅನ್ಯಾಯ ಎಂದು ವಿಧಾನ ಪರಿಷತ್ ಪ್ರತಿಪಕ್ಷ ದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನರಿಗೆ ಗ್ಯಾರಂಟಿಗಳ ಹೆಸರಿನಲ್ಲಿ ವಂಚಿಸುತ್ತಿದೆ.ಎಲ್ಲಾ ಮಹಿಳೆಯರಿಗೂ
ಗೃಹಲಕ್ಷ್ಮಿ’ ಯೋಜನೆಯಡಿ ಆರ್ಥಿಕ ಸಹಾಯ ನೀಡುತ್ತೆವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ ಆದರೆ ಇನ್ನೂ ತನಕ ರಾಜ್ಯದ ಸುಮಾರು ೯ ಲಕ್ಷ ೨೫ ಸಾವಿರ ಅರ್ಹ ಫಲಾನುಭವಿಗಳಿಗೆ ಯೋಜನೆಯ ಮೊದಲ ಕಂತು ಸಹ ಮುಟ್ಟಿಲ್ಲ. `ಯುವನಿಧಿ’ ಹೆಸರಿನಲ್ಲಿ ನಿರುದ್ಯೋಗಿಗಳಿಗೆ ಗೌರವಧನ ನೀಡುತ್ತೇವೆ ಎಂದು ಸಹ ಮೋಸ ಮಾಡಿದ್ದಾರೆ ಯೋಜನೆಗೆ ಸುಮಾರು ೧೦ ಸಾವಿರ ಕೋಟಿ ರು.ಖರ್ಚು ಬರುವುದನ್ನು ನೋಡಿ,ಅದನ್ನು ಅನೇಕ ನಿರ್ಭಂದನೆಗಳನ್ನು ಹೇರಿ ಕೇವಲ ೧೦೦ ಕೋಟಿ ರೂ.ಗೆ ಇಳಿಸುವ ಕುತಂತ್ರ ನಡೆಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಗೂ ವಿರೋಧಿಸಿ,ಬಡವರ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ ಕಾಂಗ್ರೆಸ್ ಮುಖಂಡರೇ ನಡೆಸುವ ಅನೇಕ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಸರಿಸಲಾಗುತ್ತಿದೆ ಆದರೆ ಬಡವರ ಮಕ್ಕಳು ಓದುವ ಸರ್ಕಾರಿ ಶಾಲೆಗಳಲ್ಲಿ ರಾಷ್ಟಿಯ ಶಿಕ್ಷಣ ನೀತಿಯನ್ನು ಕೈಬಿಡಲಾಗಿದೆ ಯಾಕೆ ಬಡವರ ಮಕ್ಕಳು ಓದಿ ಮುಂದೆ ಬರಬಾರದೇ? ಎಂದು ಖಾರವಾಗಿ ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ,ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ,ಜಿಲ್ಲಾ ವಕ್ತಾರ ನಾಗರಾಜ ನಾಯಕ,ಮುಖಂಡರಾದ ಎನ್.ಎಸ್.ಹೆಗಡೆ,ಬಿಜೆಪಿ ರಾಜ್ಯ ಒಬಿಸಿ ಸದಸ್ಯ ರಾಜೇಂದ್ರ ನಾಯ್ಕ,ನಗರ ಮೋರ್ಚಾ ಅಧ್ಯಕ್ಷ ನಾಗೇಶ ಕುರ್ಡೇಕರ,ಗ್ರಾಮೀಣ ಮೋರ್ಚಾ ಅಧ್ಯಕ್ಷ ಸುಭಾಷ ಗುನಗಿ ಉಪಸ್ಥಿತರಿದ್ದರು.
ವರದಿ:ಎಸ್ ಆರ್ ಭೋವಿ