ಮಾಡ್ಬೇಕಾದ್ದು ಇಷ್ಟೇ…ಬೆಂಗಳೂರಿನ ಪಾರ್ಕು, ಹೋಟೆಲ್ ಸೇರಿದಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ಬೆಳಿಗ್ಗೆ ಆರೂವರೆಯಿಂದ ಹತ್ತೂವರೆ ತನಕ ಪುಸ್ತಕದ ಸ್ಟಾಂಡ್ ಇಟ್ಟು ಕನ್ನಡ ಪುಸ್ತಕ ಮಾರಬೇಕು.ಪ್ರತಿ ಭಾನುವಾರ ಸುಮಾರು ನೂರು ಕಡೆ ಈ ತರ ಕನ್ನಡ ಪುಸ್ತಕ ಓದು ಅಭಿಯಾನ ಆರಂಭಿಸುವ ಯೋಚನೆ ನಮ್ಮದು ಲಾಭ ಇದರ ಉದ್ದೇಶವಲ್ಲ!ಯಾವುದು ಕಣ್ಣಿಗೆ ಕಾಣುವುದೋ ಅದೇ ಚಾಲ್ತಿಯಲ್ಲಿರುವುದು ಎಂಬುದು ನಮ್ಮ ಉದ್ದೇಶ.ಮೂರೂವರೆಯಿಂದ ನಾಲ್ಕುಗಂಟೆಯ ಕೆಲಸಕ್ಕಾಗಿ ಪ್ರಯಾಣದ ವೆಚ್ಚಗಳನ್ನು ಕಳೆದು ತಲಾ ರೂ.750/- ಪಾಕೆಟ್ ಮನಿ ಕೂಡಾ ಸಿಗುತ್ತೆ.
ಇದು ಅವಮಾನದ ಕೆಲಸವೇನಲ್ಲ,ಅಭಿಮಾನದ ಕೆಲಸ ಜೊತೆಗೆ ಆದಾಯದ ಕೆಲಸವೂ ಹೌದು. ಆದ್ದರಿಂದ ಯಾರಿಗಾದ್ರೂ ಅನುಕೂಲವಾಗಬಹುದು ಮುಖ್ಯವಾಗಿ ವಿದ್ಯಾರ್ಥಿಗಳಿಗೆ! ನಿಮಗೆ ಗೊತ್ತಿರುವವರಿಗೆ ವಿಷಯ ತಿಳಿಸಿ ಪ್ಲೀಸ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.