ಹಳೇ ಬಿಡು ಹೊಯ್ಸಳೇಶ್ವರ ದೇವಾಲಯವನ್ನು ಬಿಟ್ರೆ ಇಟಗಿ ದೇವಾಲಯ ವಾಸ್ತು ಶಿಲ್ಪ ಶ್ರೇಷ್ಠ ಎಂದು ಇತಿಹಾಸಕಾರರು ಬಣ್ಣಿಸಿದ್ದಾರೆ.
ಇಟಗಿ ದೇವಾಲಯವು ಕೊಪ್ಪಳ ಜಿಲ್ಲೆಯ ಕುಕನೂರು ಸಮೀಪದ ಇಟಗಿ ಎಂಬ ಗ್ರಾಮದಲ್ಲಿ ಇದೆ.ಈ ಇಟಗಿ ದೇವಾಲಯವನ್ನು ದೇವಾಲಯಗಳ ಚಕ್ರವರ್ತಿ ಕರೆಯುತ್ತಾರೆ ಈ ರೀತಿ ಕರೆಸಿಕೊಳ್ಳುವ ಏಕೈಕ ದೇವಾಲಯ ಅದು ನಮ್ಮ ಇಟಗಿಯಲ್ಲಿ ಇರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ.
ಇಟಗಿ ದೇವಾಲಯವನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಕ್ರಿಶ 1112 ಕಲ್ಯಾಣ ಚಾಲುಕ್ಯರ ದೊರೆ ವಿಕ್ರಮಾದಿತ್ಯನನ ಮಹಾಮಂತ್ರಿಯಾದ ಮಹಾದೇವ ದಂಡನಾಯಕ ಈ ದೇವಾಲಯವನ್ನು ನಿರ್ಮಿಸಿದನು.
ನಕ್ಷತ್ರ ಆಕಾರದ ಜಗುಲಿಯ ಮೇಲೆ ನಿರ್ಮಾಣ ಮಾಡಲಾದ ಈ ದೇವಾಲಯವು ಸುಮಾರು ೩೫ ಮೀಟರ್ ಉದ್ದ ಮತ್ತು ೧೧ಮಿಟರ್ ಅಗಲವಾಗಿ ಈ ಕ್ಷೇತ್ರದಲ್ಲಿ ನಿಂತಿದೆ.
ದೇವಾಸ್ಥಾನದ ಬಳಿ ಸುಂದರವಾದ ಬಾವಿ ಇದ್ದು ಇದ್ದು ಕೊನೆ ಹಂತದವರೆಗೆ ಮೆಟ್ಟಿಲುಗಳನ್ನು ಮಾಡಲಾಗಿದೆ ಈ ಬಾವಿಯು ತಿರುವಿಟ್ಟ ಮಹಾದೇವ ದೇವಾಲಯದಂತೆ ಇದೆ.
ಮಹಾದೇವ ದೇವಾಲಯ ಮೂರ್ತಿ ನಾರಾಯಣ ದೇವಾಲಯ ಚಂದಲೇಶ್ವರ ದೇವಾಲಯ ಇವುಗಳ ಸೂರ್ಯೋದಯ ಅಭಿಮುಖವಾಗಿವೆ ಸೂರ್ಯೋದಯ ಕಿರಣಗಳು ದೇವಾಲಯದ ಗರ್ಭಗುಡಿಗೆ ಬೀಳುವುದು ಒಂದು ವಿಶೇಷವಾಗಿದೆ. ಗರ್ಭಗೃಹವು ಒಳಭಾಗದವು ಆಯುತಾಕಾರದಲ್ಲಿದ್ದು ಸುಂದರವಾಗಿದೆ ಇದರ ಒಳಭಾಗ ಉತ್ತರ ಪಶ್ಚಿಮ ಮತ್ತು ದಕ್ಷಿಣ ಗೋಡೆಗಳಲ್ಲಿ ಛತ್ತಿನವರೆಗೆ ಹಬ್ಬಿರುವ ಗೂಡುಗಳು ಆಯುತಾಕಾರದಲ್ಲಿವೆ ಗರ್ಭಗೃಹ ಮೇಲ್ಬಾಗದಲ್ಲಿ ಮೇಲಿರುವ ಕೆಲವು ದ್ರಾವಿಡ ಶೈಲಿಯಲ್ಲಿವೆ ಇನ್ನೂ ಕೆಲವು ನಾಗರ ಶೈಲಿಯಿಂದ ಹಾಗೂ ಕಾಳಿಂಗ ಶೈಲಿಯಲ್ಲಿವೆ.
ಪ್ರಾಂಗಣದಲ್ಲಿ 24 ಸ್ಥಂಭಗಳಿದ್ದು ಎಲ್ಲಾ ಸ್ಥಂಬಗಳನ್ನು ಮೇರು ಸೂಕ್ಷ್ಮವಾದ ಕೆತ್ತನೆಗಳನ್ನು ಮಾಡಲಾಗಿದೆ ಈ ದೇವಸ್ಥಾನದಲ್ಲಿ ಪ್ರವಾಸಿಗರು ಹೆಚ್ಚಾಗಿ ಗಮನ ಸೆಳೆಯುವುದು ಮಕರ ತೋರಣ ಎಂಬ ಕಲಾಕೃತಿ 9 ಅಡಿ ಅಗಲ 4 ಅಡಿ ಎತ್ತರ ಇರುವ ಈ ಪ್ರದೇಶದ ಮೇಲೆ ಬ್ರಹ್ಮ,ವಿಷ್ಣು,ಮಹೇಶ್ವರ,ಮೂರ್ತಿಯನ್ನು ಕೆತ್ತಲಾಗಿದೆ.ದೇವರ ಪಕ್ಕದಲ್ಲಿ ಮಕರ ಎಂಬ ಪ್ರಾಣಿಯನ್ನು ಕೆತ್ತಲಾಗಿದೆ ಈ ಪ್ರಾಣಿಯೂ ತಲೆ ಮೊಸಳೆದು ಯಾಗಿದ್ದು ಸೊಂಡಿಲು ಆನೆಯದು,ಬಾಲ ನವಿಲುನದ್ದಾಗಿದೆ ಈ ಪ್ರಾಣಿ ಒಂದೊಂದು ಅಂಗವೂ ಬೇರೆ ಬೇರೆ ಪ್ರಾಣಿಗಳ ದೇಹದ ಅದ್ಬುತ ಕಲ್ಪನೆಯಾಗಿದೆ.
ಕಲ್ಯಾಣ ಚಾಲುಕ್ಯರ ಕಾಲದಲ್ಲಿ ತೆರದ ಮತ್ತು ವಿಶಾಲವಾದ ಮಂಟಪ ಮುಖ ಮಂಟಪವು ಆಯುತಾಕಾರದ್ಲಲಿ ಮುಖ್ಯ ಮಂಟಪವು ಚತುರಾಕ್ರದಲ್ಲಿದೆ ಯುಗಾದಿ ಪಾಡ್ಯದ ಅರುಣೋದಯ ಸಮಯದಲ್ಲಿ ಕೆಲ ಕ್ಷಣಗಳು ಮಾತ್ರ ಅರುಣನ ಕಿರಣಗಳು ನೇರವಾಗಿ ಚಲಿಸುವುದನ್ನು ಅಂದಿನ ಶಿಲ್ಪಿಗಳು ಅರಿತಿದ್ದಾರೆ.
ಈ ದೇವಾಲಯದ ನವರಂಗದ ಮಧ್ಯದ ಚತುಷ್ಕದ ಮೇಲಿನ ನಾಲ್ಕು ಬ್ರಹ್ಮ ಕಾಂತ ಕಂಬಗಳು ಭುವನೇಶ್ವರಿಯನ್ನು ಹೊತ್ತು ನಿಂತಿವೆ
ಮಹಾದೇವನ್ನು ಬಿಟ್ಟು ಉಳಿದೆಲ್ಲ ದೇವಾಲಯಗಳ ಗರ್ಭ ಗೃಹಗಳಲ್ಲಿ ಈಗ ವಿಗ್ರಹಗಳು ಇಲ್ಲ ಮಹಾದೇವ ದೇವಾಲಯವು ತೆರದ ಮಂಟಪವಿದ್ದು ಸಾಕಷ್ಟು ವಿಶಾಲವಾಗಿದೆ ಪಾರ್ಶ್ವಮಂಟಪ ಹಾಗೂ ಮುಖಮಂಟಪವು ಆಯುಕಾರದಲ್ಲಿದೆ ಮಹಾದೇವ ದಂಡನಾಯಕ ಮೂಲತಃ ಇಟಗಿ ಗ್ರಾಮದವರು ತನ್ನ ತಂದೆ ಮೂರ್ತಿ ನಾರಾಯಣ ನೆನಪಿಗಾಗಿ ಉತ್ತರಕಿದ್ದು ಪೂರ್ವಾಭಿಮುಖವಾಗಿದೆ ಈ ದೇವಾಲಯವದಲ್ಲಿ ಗರ್ಭಗುಡಿಯಲ್ಲಿ ಮೂರ್ತಿ ಇಲ್ಲ ಹಾಗೂ ತಾಯಿ ಚಂದಲೇಶ್ವರ ದೇವಾಲಯ ತಾಯಿ ನೆನಪಿಗಾಗಿ ದೇವಾಲಯವನ್ನು ಕಟ್ಟಿಸಿದ್ದಾರೆ.
ಇತ್ತೀಚೆಗೆ ಈ ದೇವಾಲಯಕ್ಕೆ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣವಾಗಿದೆ.
-ನಿಮ್ಮ ಜಿಕೆ (ಕೊಪ್ಪಳ)