ಹನೂರು:ಮನುಷ್ಯನ ಜೀವನದಲ್ಲಿ ಕ್ರೀಡೆಯು ಅತಿಮುಖ್ಯ ನಮ್ಮ ದೇಹವು ಸದಾ ಆರೋಗ್ಯವಂತರಾಗಿಲು ದೇಹದ ಅಂಗಾಂಗಗಳು ಸಕ್ರಿಯವಾದ ಪಾತ್ರ ವಹಿಸಬೇಕು ಹಾಗೆಯೇ ನಮ್ಮ ಹನೂರು ಭಾಗದ ಯುವಕರು ಕ್ರೀಡೆಯನ್ನು ಆಯೋಜನೆ ಮಾಡಿ ಪ್ರತಿಭೆಯನ್ನು ಹೊರ ತರುವುದು ಹೆಮ್ಮೆಯ ವಿಷಯ ಎಂದು ಆಯೋಜಕರಿಗೆ ಕಿವಿ ಮಾತನ್ನು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾ ಅಧ್ಯಕ್ಷರಾದ ಎಲ್ ನಾಗೇಂದ್ರ ತಿಳಿಸಿದರು .
ಹನೂರು ಪಟ್ಟಣದ ಬೆಟ್ಟಳ್ಳಿ ಮಾರಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆದ ನೇತಾಜಿ ಕ್ರಿಕೆಟರ್ಸ್ ಹಾಗೂ ಶಾಸಕರಾದ ಎಂ ಆರ್ ಮಂಜುನಾಥ್ ರ ಸಹಯೋಗದೊಂದಿಗೆ ನಡೆಸುವ ಹರಾಜು ಪ್ರಕ್ರಿಯೆಯ ಉದ್ಘಾಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ಪತ್ರಕರ್ತರ ಸಂಘ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ ಮಾತನಾಡಿ ವ್ಯಕ್ತಿಯ ಪ್ರತಿಭೆಯನ್ನು ಖರೀದಿ ಮಾಡಲು ಯಾರಿಂದಲೂ ಸಾದ್ಯವಿಲ್ಲ ಆದರೆ ಅವರ ಸಾಮರ್ಥ್ಯವನ್ನು ಅರಿಯಬಹುದು ಕ್ರೀಡೆಯು ಮನುಷ್ಯ ಬೆಳಿಗ್ಗೆ ಎದ್ದ ನಂತರ ವ್ಯಾಯಮ ಮಾಡುವ ಮುಖಾಂತರ ಪ್ರಾರಂಭವಾಗಿ ದಿನದ ಎಲ್ಲಾ ಚಟುವಟಿಕೆಗಳಿಗೂ ಅನ್ವಯಮಾಡಬಹುದು ನಮ್ಮ ಯುವಕರು ಸ್ವಾತಂತ್ರ್ಯ ಸೇನಾನಿ ನೇತಾಜಿಯವರ ಹೆಸರಿನಲ್ಲಿ ಕ್ರೀಡೆ ಅಯೋಜನೆ ಮಾಡುವುದು ಬಹಳ ಸಂತೋಷದ ವಿಷಯ ಇಂತಹ ಕಾರ್ಯಕ್ರಮದಿಂದ ಹೆಚ್ಚು ಗ್ರಾಮೀಣ ಪ್ರತಿಭೆಗಳು ಹೊರ ಹೊಮ್ಮಲಿ ಇಂತಹ ಆಯೋಜಕರಿಗೆ ಸ್ಥಳೀಯ ಶಾಸಕರು ಸಹಕಾರ ನೀಡುತ್ತಿರುವುದು ಸಂತೋಷಕರವಾದ ವಿಷಯ ಎಂದರು ಇದೇ ಸಂದರ್ಭದಲ್ಲಿ ಸದ್ಭಾವ ಸೇವಾ ಸಮಿತಿಯ ಅಧ್ಯಕ್ಷರಾದ ಗಂಗರಾಜು,ಕೆಇಬಿ ಗುತ್ತಿಗೆದಾರರಾದ ರವಿ,ಆಯೋಜಕರಾದ ಶಶಿ ಕುಮಾರ್,ಚೇತನ್ ಕುಮಾರ್,ಸಂತೋಷ್, ಶಾರುಖ್,ರೈತ ಮುಖಂಡರಾದ ಬಸವರಾಜು ಕಾಂಚಳ್ಳಿ ಸೇರಿದಂತೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ ತಂಡಗಳಾದ ಎಮ್ ಸಿ ಸಿ ಬೆಟ್ಟ,ಎವಿಎಮ್ ಟೈಟನ್ಸ್ ಥಾಡೊ ವಾರಿಯರ್ಸ್,ಬಿ ಎಸ್ ಎಫ್ ಟೈಗರ್ಸ್, ರೈಸಿಂಗ್ ಸ್ಟಾರ್ ,ಪವರ್ ವಾರಿಯರ್ಸ್ . ಮಾನಸ ಸ್ಟಾರ್ ಬಾಯ್ಸ್,ಗೋಕುಲ ಕ್ರೀಕೆಟರ್ಸ್ ಸೇರಿದಂತೆ ಇನ್ನಿತರರು ಭಾಗವಹಿಸಿದರು ಅತೀ ಹೆಚ್ಚು ಹರಾಜಿನಲ್ಲಿ ಲುಕ್ಮಾನ್ -2750 ರೂಗಳಿಗೆ ಪವರ್ ವಾರಿಯರ್ಸ್ ಪಾಲಾದರು.ಕಾರ್ತಿಕ್ 1500 ರೂಗಳಿಗೆ ಎಮ್ ಸಿ ಸಿ ಬೆಟ್ಟದ ಪಾಲಾದರು.1450 ರೂಗಳಿಗೆ ಅಪ್ಪು ಮಾನಸ ಸ್ಟಾರ್ ಬಾಯ್ಸ್ ಪಾಲಾದರು .
ವರದಿ ಉಸ್ಮಾನ್ ಖಾನ್