ವಿಜಯನಗರ:ಕೆಲವೊಂದು ಇಲಾಖೆಗಳು ಆಚರಣೆ ಮಾತ್ರ ಸೀಮಿತವಾಗಿವೆ ಮತ್ತು ರಾಷ್ಟ್ರೀಯ ಹಬ್ಬಗಳನ್ನು ಹಾಗೂ ಜಯಂತಿಗಳನ್ನು ಆಚರಣೆ ಮಾಡುವುದು ಸಹಜವಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಹಳ್ಳಿಗಳಲ್ಲಿ ಗಣರಾಜ್ಯೋತ್ಸವ ಅಂದರೆ ತುಂಬಾ ಅದ್ದೂರಿಯಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ತದನಂತರ ಧ್ವಜಾರೋಹಣ ಮಾಡಿ ಅಲ್ಲಿ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಿಂದ ಕೆಲ ಶಾಲೆ ಗ್ರಾಮ ಪಂಚಾಯಿತಿ ಇತರೆ ಇಲಾಖೆಗಳಲ್ಲಿ ವಿದ್ಯುತ್ ಬಲ್ಪ್ ಹಾಗೂ ಪೇಪರ್ ಕಟಿಂಗ್ ಮೂಲಕ ಬಣ್ಣ ಹಚ್ಚಿ ಅಲಂಕಾರ ಗೊಳಿಸಿ ಶುದ್ಧವಾದ ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಿ ದೇಶಭಕ್ತಿ ಗೀತೆಗಳಿಗೆ ಕುಣಿದು ಕುಪ್ಪಳಿಸಿ ಅಲ್ಲಿನ ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮ ಮೆರೆದು ದೇಶಭಕ್ತಿಯನ್ನು ಹೆಚ್ಚಿಸುವುದರಲ್ಲಿ ಕೆಲವರ ಪಾತ್ರ ಬಹುದೊಡ್ಡದು.
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಬಿಸಿಎಂ ಮೆಟ್ರಿಕ್ ಪೂರ್ವ ಹಾಸ್ಟಲ್ ವತಿಯಿಂದ 75ನೇ ಗಣರಾಜ್ಯೋತ್ಸವ ಆಚರಣೆ ಸಂದರ್ಭ ಬಿಸಿಎಂ ಮೆಟ್ರಿಕ್ ಪೂರ್ವ ನಿಲಯ ಪಾಲಕರಾದ ಬಸವರಾಜ್ ಧ್ವಜಾರೋಹಣವನ್ನು ನೆರವೇರಿಸಿದರು.
ಇಲ್ಲಿನ ವಿದ್ಯಾರ್ಥಿಗಳು ಹಾಸ್ಟೆಲನ್ನು ಅದ್ದೂರಿಯಾಗಿ ಅಲಂಕಾರ ಮಾಡಿ ಭಾರತ ನಕಾಶೆ ರಂಗೋಲಿ ಮೂಲಕ ಬರೆದು ಬಣ್ಣವನ್ನು ನೀಡಿ ಮಾವಿನ ತೋರಣ ಮತ್ತು ಬಣ್ಣದ ಹಾಳೆಗಳನ್ನು ಅಂಟಿಸಿ ರಾಷ್ಟ್ರ ಪ್ರೇಮ ಮೆರೆದರು ಈ ಸಂದರ್ಭದಲ್ಲಿ ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಸೇರಿದ್ದರು.
ವರದಿ-ವೈ.ಮಹೇಶ್ ಕುಮಾರ್,ಕೊಟ್ಟೂರು