ಚಿತ್ರದುರ್ಗ:ಕುರಿ ಕಾಯುವವ ಮಗ ಮುಖ್ಯಮಂತ್ರಿ ಆಗಿಬಿಟ್ಟ ಎನ್ನುವ ಕಾರಣಕ್ಕಾಗಿ ಪಟ್ಟ ಭದ್ರರು ನನ್ನನ್ನು ವಿರೋಧಿಸುತ್ತಾರೆ,
ಬಡವರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು ನಾನು ಎಂದಿಗೂ ಎದೆಗುಂದದೆ ನಿಮ್ಮ ಪರವಾಗಿರುತ್ತೇನೆ ಹಾಗೂ ಇದೆ ಸಂದರ್ಭದಲ್ಲೇ ಆರ್ ಎಸ್ ಎಸ್ ಮತ್ತು ಬಿಜೆಪಿ ಸಂವಿಧಾನ ವಿರೋಧಿ ಎಂಬುದಾಗಿ ವಾಗ್ದಾಳಿ ನಡೆಸಿದರು.
ಲೋಕಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ ಸಿದ್ದರಾಮಯ್ಯರ ಕೈ ಬಲಪಡಿಸಬೇಕು ನೀವು ನಾವು ನಾಯಕರ ಪರವಾಗಿ ಇರಬೇಕಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ.ರಾಮಚಂದ್ರಪ್ಪ ಪಟ್ಟಿಯಲ್ಲಿ ಇತರರ ಜಾತಿಗಳನ್ನು ಗುರುತಿಸುವ ಕೆಲಸ ಕಾಂತರಾಜ್ ಆಯೋಗ ಮಾಡಿದೆ ಯಾವುದೇ ಒತ್ತಡಕ್ಕೆ ಮಣಿಯದೆ ವರದಿಯನ್ನು ಬಿಡುಗಡೆ ಮಾಡಬೇಕು ನಿಮ್ಮ ಜೊತೆ ನಾವಿರುತ್ತೇವೆ ವಿರೋಧ ಮಾಡುವರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತೇವೆ ಎಂದು ಹೇಳಿದರು.
ಸಮಾವೇಶದಲ್ಲಿ ನೂರಾರು ಸಂಖ್ಯೆಯ ವಾಹನಗಳು ಸಾಲುಗಟ್ಟಿ ನಿಂತಿದ್ದವು ಸಮಾವೇಶಕ್ಕೆ 2 ಲಕ್ಷಕ್ಕೂ ಅಧಿಕ ಸಂಖ್ಯೆ ಜನ ಸೇರಿದದ್ದರು.
ಸಮಾವೇಶ ನೋಡಲು 23 ಎಲ್ಇಡಿ ವ್ಯವಸ್ಥೆ ಕೂಡಾ ಮಾಡಲಾಗಿತ್ತು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದವರಿಗೆ ಸಸ್ಯಹಾರ ಮತ್ತು ಮಾಂಸಹಾರ ಊಟದ ವ್ಯವಸ್ಥೆ ಮಾಡಲಾಗಿತ್ತು ಚಿಕನ್ ಬಿರಿಯಾನಿ, ಟಮಟೋಬಾತ್,ಮೊಸರು,ಅನ್ನ ಹಾಗೂ ಬೀದರ್ ಜಿಲ್ಲೆಯಿಂದ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಅಬ್ದುಲ್ ಮುಲಾಲ್ ಸೇಠ 20 ಕ್ವಿಂಟಲ್ ಲಾಡು ವ್ಯವಸ್ಥೆ ಕೂಡಾ ಮಾಡಿಸಿದ್ದರು.
ಕಾರ್ಯಕ್ರಮದಲ್ಲಿ ಎಚ್ ಮಹಾದೇವಪ್ಪ,ಬೈರತಿ ಸುರೇಶ್,ಡಿಕೆ ಶಿವಕುಮಾರ್,ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್,ಕೆಎಚ್ ಮುನಿಯಪ್ಪ, ಮಧು ಬಂಗಾರಪ್ಪ,ಸಂತೋಷ್ ಲಾಡ್,ಜಮೀರ್ ಅಹ್ಮದ್ , ಎಚ್ ಆಂಜನೇಯ,ಡಿ ಸುಧಾಕರ್,ಚಿತ್ರದುರ್ಗದ ಶಾಸಕರಾದ ಕೆಸಿ ವೀರೇಂದ್ರ ಪಪ್ಪಿ,ಶಾಸಕ ರಘುಮೂರ್ತಿ ಹಾಗೂ ಇತರೆ ಶಾಸಕರು,ಸ್ಥಳೀಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.