ದೇಶದ ಪಿತ ಗಾಂಧಿ
ಗೋಡ್ಸೆ ಗುಂಡಿಗೆ ಬಲಿ,
ಸ್ವಾತಂತ್ರ್ಯ ತಂದುಕೊಟ್ಟ
ಶಾಂತಿ ದೂತ,ಸತ್ತು ಹೋಗಿ
ಎಪ್ಪತ್ತಾರು ವಸಂತಗಳು,
ಕಳೆದಿವೆ,
ಗಾಂಧಿಯ ಹೆಸರಿನಲ್ಲಿ,ನಡೆಯಬಾರದ
ಎಲ್ಲ ಕೃತ್ಯಗಳೂ ಎಗ್ಗಿಲ್ಲದೆ
ನಡೆದಿವೆ,
ಇಂದು
ಹುತಾತ್ಮ ದಿನ ಆಚರಿಸುತ್ತೇವೆ,!
ಗಾಂಧೀ,ನೀ ಕಂಡ ರಾಮರಾಜ್ಯವಿನ್ನೂ
ಕನಸಾಗಿಯೇ ಉಳಿದಿದೆ,
ನನಸಾಗುವ ಕಾಲ
ದೂರ ಹೋಗಿದೆ,
ಗಾಂಧೀ,ನೀ ನೀಡಿದ
“ಸತ್ಯ,ಅಹಿಂಸೆ,ಶಾಂತಿ”
ಅಸ್ತ್ರ ಗಳು ವಿರುದ್ಧ ಪದಗಳಾಗಿ
ಮಾರ್ಪಟ್ಟಿವೆ,
ನಾವಿಂದು ಹುತಾತ್ಮ ದಿನ ಆಚರಿಸುತ್ತೇವೆ,
ಕ್ಷಮಿಸಿಬಿಡು ಗಾಂಧೀ ಎನ್ನಲಿಕ್ಕೆ
ನಮಗೆ ಅರ್ಹತೆಯೇ ಇಲ್ಲ….
ಆದರೂ ನಾಚಿಕೆ ಬಿಟ್ಟು
ಕೇಳುತ್ತಿದ್ದೇವೆ..ಕ್ಷಮಿಸಿ ಬಿಡಿ ನಮ್ಮನ್ನು….
ನಾವಿಂದು ಹುತಾತ್ಮ ದಿನ
ಆಚರಿಸುತ್ತೇವೆ,ಮುಂದೆಯೂ
ಆಚರಿಸುತ್ತಲೇ ಇರುತ್ತೇವೆ.!…
-ಶಿವಪ್ರಸಾದ್ ಹಾದಿಮನಿ,ಕೊಪ್ಪಳ.