ಹನೂರು:ಫೆ.1ರಂದು ಬೆಳಗ್ಗೆ 10ಗಂಟೆಗೆ ಸರ್ಕಾರ ಆದೇಶದಂತೆ ಮಡಿವಾಳ ಮಾಚಿದೇವರ ಜಯಂತಿಯನ್ನು ಕಚೇರಿಯಲ್ಲಿ ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮುಖಂಡರ ಜೊತೆ ಚರ್ಚಿಸಿ ಬಳಿಕ ಅವರು ಮಾತನಾಡಿ,ಸರಳವಾದರೂ ಸರಿ ಅದ್ದೂರಿಯಾದರು ಸರಿ ಮಾಡಲು ಸಿದ್ಧವಿದ್ದೇವೆ.ಸಭೆ,ಕಾರ್ಯಕ್ರಮಕ್ಕೆ ಜಾಗ ಅಗತ್ಯ ಇದೆ ಹೀಗಾಗಿ ಸಮುದಾಯಭವನ ನಿರ್ಮಾಣ ಕುರಿತು ಚಿಂತನೆ ನೆಡೆಸಲಾಗುತ್ತಿದೆ ಮುಂದಿನ ದಿನಗಳಲ್ಲಿ ಹೇಳಲ್ಲ ಮಾಡೋಣ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ವೀರ ಮಡಿವಾಳ ಸಂಘದ ಅಧ್ಯಕ್ಷರಾದ ವಿಜಯ್ ಕುಮಾರ್ ಮಾತನಾಡಿ ನಮ್ಮ ಮಡಿವಾಳ ಸಮುದಾಯಕ್ಕೆ ಒಂದು ಸಮುದಾಯ ಭವನ ಮಾಡಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡರು ನಂತರ ಮಾತನಾಡಿದವರು ನಮ್ಮ ನೂರು ಕ್ಷೇತ್ರದ ಶಾಸಕರಾದ ಎಮ್ ಆರ್ ಮಂಜುನಾಥ್ ರವರು ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ ಹಾಗೆಯೇ ಸಣ್ಣ ಸಣ್ಣ ಸಮುದಾಯಗಳನ್ನು ಮೇಲಕ್ಕೆ ತಯಾರು ತರುವಲ್ಲಿ ಪ್ರಯತ್ನ ಮಾಡುವಂತ ಕಾರ್ಯಗಳನ್ನು ಮಾಡುತ್ತಿರುವುದು ನಮ್ಮ ಕ್ಷೇತ್ರಕ್ಕೆ ಹೆಮ್ಮೆಯ ವಿಚಾರ ಎಂದರು.
ತಹಶೀಲ್ದಾರ್ ಗುರುಪ್ರಸಾದ್,ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ವಿಜಯ್, ಕಾರ್ಯದರ್ಶಿ ಕೃಷ್ಣ,ಮುಖಂಡರಾದ ಮೋಹನ್, ನಂದೀಶ್,ಶಾಂತರಾಜು,ಮಾದೇಶ,ಡಿ.ಆರ್. ಮಾದೇಶ, ಸುರೇಶ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್