ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹಿರೇಬನ್ನಿಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಲಬುರ್ತಿ ಗ್ರಾಮದ 4 ಜನ ಗ್ರಾಮ ಪಂಚಾಯತಿ ಸದ್ಯಸರಿಗೆ ಹಾಗೂ ಅಧ್ಯಕ್ಷರಿಗೆ ಊರಿನ ಸಾರ್ವಜನಿಕರು ದೂರು ನೀಡಿದ್ದರೂ ಕೂಡಾ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಸಾರ್ವಜನಿಕರು ಬೇಸತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಅವರು ಮಾತ್ರ ಚರಂಡಿಯನ್ನು ಸ್ವಚ್ಛಗೊಳಿಸುತ್ತೇವೆ ಸದಸ್ಯರ ಬಳಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹಾರಿಕೆಯ ಉತ್ತರ ನೀಡುವ ಮೂಲಕ ಜಾರಿಕೊಳ್ಳಲು ಕಾರಣ ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚರಂಡಿಯಲ್ಲಿ ನೀರು ನಿಂತು ದುರ್ವಾಸನೆ ಬರುತ್ತಿದೆ,ಈ ಗಟಾರಗಳಲ್ಲಿ ಹೆಚ್ಚೆಚ್ಚು ಸೊಳ್ಳೆಗಳು ಉತ್ಪತ್ತಿ ಆಗಿ ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳು ಬರುತ್ತಿವೆ ಇಷ್ಟಾದರೂ ನೋಡಿಯೂ ನೋಡದಂತೆ ಸುಮ್ಮನೆ ಇರುವ ಪಿಡಿಓ ಅವರನ್ನು ಅಮಾನತ್ತು ಮಾಡಿ ಬೇರೆ ಪಿಡಿಓ ಅವರನ್ನು ನೇಮಿಸಿ ನಮ್ಮೂರಿನ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಕರುನಾಡ ಕಂದ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡರು.
ಕಾಟಾಚಾರಕ್ಕೆ ಸ್ವಚ್ಚತಾಗಾರರಾರಿಂದ ಗಟಾರ ಸ್ವಚ್ಛಗೊಳಿಸುವ ಕಾರ್ಯ ನಡೆಸುವ ಮೂಲಕ ಪಿಡಿಓ ಅವರು ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡುವ ಪ್ರಯತ್ನ ಪಡುತ್ತಿದ್ದಾರೆ ಗ್ರಾಮಸ್ಥರು ಫೋನ್ ಗೆ ಸಂಪರ್ಕಿಸಿದರೆ ಮಾತನಾಡುವುದಿಲ್ಲ,ಇಲ್ಲಿ ತುಂಬಿರುವ ಗಲೀಜು ಸಲಿಕೆ,ಗುದ್ದಲಿಯಿಂದ ಆಗುವ ಕೆಲಸ ಅಲ್ಲ ಜೆ.ಸಿ.ಬಿ ಇಂದಲೇ ಈ ಕೆಲಸವನ್ನು ಮುಗಿಸಬೇಕು ಎಂದು ಗ್ರಾಮಸ್ಥರು ಪಿ ಡಿ ಓ ಅವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.