ಪ್ರಕೃತಿ ನಮ್ಮ ಜೀವನದ ಅವಿಭಾಜ್ಯ ಅಂಗ ಪ್ರಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ,ನಮ್ಮ ಜೀವನಕ್ಕೆ ಪ್ರಕೃತಿಯ ಕೊಡುಗೆ ಅಪಾರವಾದದ್ದು ಇಂತಹ ಪ್ರಕೃತಿಯ ಕೊಡುಗೆಯಾದ ಗಿಡಮರಗಳನ್ನು ನಾಶ ಮಾಡಿದರೆ ನಾವುಗಳು ನಾಶವಾದಂತೆ ಇಂತಹ ಗಿಡಮರಗಳ ಸಂರಕ್ಷಣೆಯಲ್ಲಿ ತೊಡಗಿರುವ ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಚಿಂತನಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಕೋಡಿಹಾಳ ಮತ್ತು ಗದುಗಿನ ಜನರಂಗ ರಂಗ ಸಂಪನ್ಮೂಲ ಕೇಂದ್ರ ಕೊಂಚಗೇರಿ ಕಲಾ ತಂಡದ ಕಾರ್ಯದರ್ಶಿ ಹಾಗೂ ಪರಿಸರವಾದಿ ಅಶೋಕ ಬಡಿಗೇರ ಅವರು ಅಭಿಪ್ರಾಯ ಪಟ್ಟರು.
ಸಿಂಧನೂರಿನ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ನಿಂದ ಪುನರ್ಜನ್ಮ ಪಡೆದ ಅಮರ ಶ್ರೀ ಆಲದ ಮರಕ್ಕೆ ಚಿಂತನಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಕೋಡಿಹಾಳ ಮತ್ತು ಗದುಗಿನ ಜನರಂಗ ರಂಗ ಸಂಪನ್ಮೂಲ ಕೇಂದ್ರ ಕೊಂಚಗೇರಿ ಕಲಾ ತಂಡದ ಸದಸ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಪರಿಸರವಾದಿ ಅಶೋಕ ಬಡಿಗೇರ ಮಾತನಾಡಿ ಭೂಮಿಯೊಳಗೆ 35 ಕಿಲೋ ಮೀಟರ್ ಆಳದವರೆಗೂ ನೀರನ್ನು ಕೊಂಡೊಯ್ಯುವಂತಹ ಕಾರ್ಯವನ್ನು ಈ ಆಲದ ಮರ ಮಾಡುತ್ತದೆ ಪುನಃ ಮಳೆ ಬರದೆ ಹೋದಾಗ ಆಳದಲ್ಲಿನ ನೀರನ್ನು ಬೇರು ಸಮೇತ ನೀರುತಂದು ಭೂಮಿಯ ತೇವಾಂಶವನ್ನು ಕೂಡಾ ಕಾಯ್ದುಕೊಳ್ಳುವ ಕಾರ್ಯ ಈ ಆಲದ ಮರ ಮಾಡುತ್ತಿದೆ.ಇಂತಹ ಪ್ರಕೃತಿಯ ಕೊಡುಗೆಯಾದ ಮರಗಳನ್ನು ನಾಶಮಾಡಿದರೆ ನಾವುಗಳು ನಾಶವಾದಂತೆ.ಮುಂದಿನ ಯುವ ಪೀಳಿಗೆಯ ಮಕ್ಕಳಿಗೆ ಏನಾದರೂ ಕೊಡುಗೆ ನೀಡಬೇಕಾದರೆ ಅಮರ ಶ್ರೀ ಆಲದ ಮರದಂತಹ ಗಿಡಮರಗಳನ್ನು ಕೊಡುಗೆಯಾಗಿ ನೀಡಬೇಕಾಗಿದೆ ಇಂತಹ ಗಿಡಮರಗಳ ಸಂರಕ್ಷಣೆಯಲ್ಲಿ ತೊಡಗಿರುವ ಅಮರೇಗೌಡ ಮಲ್ಲಾಪುರ ನೇತೃತ್ವದ ವನಸಿರಿ ಫೌಂಡೇಶನ್ ತಂಡ ಕಾರ್ಯ ತುಂಬಾ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪರಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ,ಸದಸ್ಯ ಮುದುಕಪ್ಪ ಹೊಸಳ್ಳಿ ಕ್ಯಾಂಪ್,ಚಿಂತನಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಕೋಡಿಹಾಳ ಮತ್ತು ಗದುಗಿನ ಜನರಂಗ ರಂಗ ಸಂಪನ್ಮೂಲ ಕೇಂದ್ರ ಕಲಾ ತಂಡ ಕೊಂಚಗೇರಿ ಸಂಚಾಲಕರು ಹಾಗೂ ಕಾರ್ಯದರ್ಶಿಗಳು ಅಶೋಕ ಬಡಿಗೇರ,ಪ್ರಶಾಂತ ತಡಸದ,ಸಬ್ಬಜ್ಜನ್ ಸಾಬ್ ನದಾಪ್,ದೇವಪ್ಪ ಹೂಲಗೂರ,ಭೀಮಪ್ಪ ಹಮ್ಮಿಗ ಹಾಗೂ ವನಸಿರಿ ಫೌಂಡೇಶನ್ ಸದಸ್ಯರಿದ್ದರು.