ಇಂಡಿ:ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ಅಂಬೇಡ್ಕರ ಘಟಕದ ಸರ್ವ ಸದಸ್ಯರು ಈ ಮೂಲಕ ಕೇಳಿಕೊಳ್ಳುವುದೆನೆಂದರೆ ಚಡಚಣ ತಾಲ್ಲೂಕಿನ ಧೂಳಖೇಡದ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್.52 ಅಲ್ಲಿ ಇರುವ ಆರ್.ಟಿ.ಓ ಚೆಕ್ ಪೋಸ್ಟ್ ಅಲ್ಲಿ 8 ಜನ ಆರ್.ಟಿ.ಓ ಗಳು ಹಗಲು ರಾತ್ರಿಯೆನ್ನದೆ ಸರಕು ಸಾಗಾಣಿಕೆ ಭಾರಿ ವಾಹನಗಳನ್ನು ತಡೆದು ಯಾವುದೆ ರೀತಿಯ ತಪಾಸಣೆ ಮಾಡದೆ ವಾಹನಗಳ ಚಾಲಕರಿಂದ 500 ರೂ ಯಿಂದ ಹಿಡಿದು ತಮ್ಮ ಮನ ಬಂದಂತೆ ಅಕ್ರಮವಾಗಿ ಹಣ ತೆಗೆದುಕೊಂಡು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುವುದು ಗೊತ್ತಿದರೂ ಸಹ ಅದನ್ನು ತಡೆಯದೆ ಯಾವುದೆ ತಪಾಸಣೆ ಮಾಡದೆ ಹೆಚ್ಚಿನ ಹಣ ಪಡೆದು ವಾಹನಗಳನ್ನು ಬಿಟ್ಟು ಕಳಿಸುತ್ತಾರೆ.
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಎಲ್ಲಾ ಅಕ್ರಮ ಮತ್ತು ಮಾದಕ ವಸ್ತುಗಳು ಬರಬೇಕಾದರೆ ಈ ಚೆಕ್ ಪೋಸ್ಟ್ ಅಧಿಕಾರಿಗಳ ಅಧಿಕಾರಿಗಳೇ ಕಾರಣ ಇಗ ಇರುವ 8 ಜನ ಆರ್.ಟಿ.ಓ ಗಳು ಮತ್ತು ಈ ಮೊದಲು ಇದ್ದ ಆರ್.ಟಿ.ಓ ಗಳು ಸಾಕಷ್ಟು ಭ್ರಷ್ಟಾಚಾರ ಮಾಡಿದ್ದು ಅಕ್ರಮವಾಗಿ ಆಸ್ತಿ ಸಂಪಾದನೆ ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಈ ಎಲ್ಲಾ ಅಧಿಕಾರಿಗಳ ಅಕ್ರಮ ಆಸ್ತಿ ಬಗ್ಗೆ ಮಾನ್ಯ ಲೋಕಾಯುಕ್ತರು ತನಿಖೆ ಮಾಡಿ ಹಾಗೂ ಈ ಚೆಕಪೊಸ್ಟ ಅಲ್ಲಿ ಮಾಡಿರುವ ಭ್ರಷ್ಟಾಚಾರ ಚಾಲಕರಿಂದ ಹಗಲು ರಾತ್ರಿಯೆನ್ನದೆ ಒಂದು ದಿನಕ್ಕೆ ಲಕ್ಷಾನುಗಟಲೆ ಹಣ ದರೋಡೆ ಮಾಡಿದು ಸಾಕಷ್ಟು ಭಾರಿ ಪತ್ರಿಕೆ ಹಾಗೂ ಮಾಧ್ಯಮದಲ್ಲಿ ಬಂದರೂ ಕೂಡಾ ಯಾವುದೆ ಪ್ರಯೋಜನ ವಾಗಿಲ್ಲ.
ಆದ್ದರಿಂದ ಈ ಎಲ್ಲಾ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಚೆಕ್ ಪೋಸ್ಟ ಅಲ್ಲಿ ಇರುವ ಅಧಿಕಾರಿಗಳನ್ನು ವಜಾ ಮಾಡಬೇಕು ಹಾಗೂ ಇದಕ್ಕೆಲ್ಲಾ ಕಡಿವಾಣ ಹಾಕಬೇಕು ದಿನಾಂಕ:13-02-2024 ದಂದು ರಾಷ್ಟ್ರೀಯ ಹೆದ್ದಾರಿ ತಡೆದು ಚೆಕ್ ಪೋಸ್ಟ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದು ಆರ್.ಪಿ.ಐ.ಅಂಬೇಡ್ಕರ್ ಘಟಕದ ಪದಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಆರ್.ಪಿ.ಐ.ಅಂಬೇಡ್ಕರ್ ಘಟಕ ತಾಲೂಕ ಅಧ್ಯಕ್ಷರಾದ ಚಂದ್ರಶೇಖರ ಮೇಲಿನಮನಿ ಶಿವಾನಂದ ಹರಿಜನ ಪರಸು ಉಕ್ಕಲಿ ಅಶೋಕ್ ನಯ್ಕೊಡಿ ಅರವಿಂದ್ ಕಾಂಬ್ಳೆ ಮೇಘರಾಜ ವಾಲಿಕಾರ ಶಿವರಾಜಕುಮಾರ ವಾಲಿಕಾರ ಇನ್ನಿತರರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.