ಹನೂರು:ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಸಮಾಜ ಕಲ್ಯಾಣ ಇಲಾಖೆ ಹಾಗೂ ಹನೂರು ಪಟ್ಟಣ ಪಂಚಾಯಿತಿ ಮತ್ತು ತಾಲೂಕು ಆಡಳಿತ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಅವರು ಮಾತನಾಡಿ
ಡಾ.ಬಿ.ಆರ್.ಅಂಬೇಡ್ಕರ್ ಅವರ
ಜೀವನದ ಬದುಕು ಎಲ್ಲರಿಗೂ ಪಾಠವಾಗಿ ಸಂವಿಧಾನದ ಅರಿವು ಮುಂದಿನ ಪೀಳಿಗೆಗೆ
ದೇಶಕಟ್ಟಲು ಅನುಕೂಲವಾಗಬೇಕು ಎಂದರು.
ಉದ್ಯೋಗ,ಹಕ್ಕು,ಅಧಿಕಾರ ಪಡೆದುಕೊಳ್ಳುವ ಅವಕಾಶ ಸಂವಿಧಾನದಲ್ಲಿ ಇದೆ ಇದನ್ನು ಸರ್ಕಾರ, ರಾಜಕಾರಣಿ,ಉದ್ಯಮಿಗಳು ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ನನಗೆ ನೀವು ಅಧಿಕಾರ ಅವಕಾಶ ಕೊಟ್ಟಿದ್ದೀರ ಹೀಗಾಗಿ ಸಂವಿಧಾನ ಮೂಲಕ ಜನರಿಗೆ ದೊರಕಬೇಕಾದ ಹಕ್ಕು ಸವಲತ್ತುಗಳನ್ನು ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರಲ್ಲದೆ ಸಾಧಕರ ಹಾದಿಯಲ್ಲಿ ಸಾಗಿದರೆ ಯಶಸ್ಸು ಖಂಡಿತ ಸಾಧ್ಯವಾಗಲಿದೆ ಸಂವಿಧಾನ ಪ್ರಜಾಪ್ರಭುತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಕ್ಕು ಅಧಿಕಾರಿ ಪಡೆಯಲು ಅವಕಾಶ ನೀಡಿದ್ದಾರೆ ಹೀಗಾಗಿ ಸಂವಿಧಾನ ರಕ್ಷಿಸಿಸುವ ಕೆಲಸವಾಗಬೇಕು ಎಂದರು.
ಕಾಮಗೆರೆಯ ಉಪನ್ಯಾಸಕರಾದ ಮಹೇಶ್
ಮಾತನಾಡಿ,ಭಾರತದಲ್ಲೇ ಮೊಟ್ಟ ಮೊದಲಿಗೆ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಮಾಡಿದೆ ಇದು ಉತ್ತಮ ಅರ್ಥಪೂರ್ಣವಾಗಿದೆ.ಸಂವಿಧಾನ ಪೀಠಿಕೆಯಲ್ಲೇ ಹೇಳುವಂತೆ ಭಾರತೀಯರಲ್ಲೆರಿಗೂ ಸಂಬಂಧಿಸಿದ್ದು ಸಕಲ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ.350 ವರ್ಷಗಳ ಕಾಲ ಸ್ವತಂತ್ರವಿಲ್ಲದೆ
ಬ್ರಿಟಿಷರ ಗುಲಾಮರಾಗಿದ್ದೆವು ಇದರಿಂದ ಮುಕ್ತವಾಗಿ ಹೊರ ಬಂದಿದ್ದು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಎಂದು ಬಣ್ಣಿಸಿದರು.
ಕೊಳ್ಳೇಗಾಲ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೇಶವಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗುರುಪ್ರಸಾದ್, ಮುಖ್ಯಾಧಿಕಾರಿ ಮಹೇಶ್ ಕುಮಾರ್,ಬಿಇಒ ಶಿವರಾಜು,ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಹರೀಶ್,ಮಹೇಶ್,ಸೋಮಶೇಖರ್, ಸಂಪತ್,ಸುದೇಶ್,ಮಮ್ತಾಜ್ ಬಾನು,ಮಂಜುಳಾ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ವರದಿ:ಉಸ್ಮಾನ್ ಖಾನ್