ರಬಕವಿ-ಬನಹಟ್ಟಿ:ದಿ ಎಜುಕೇಶನ್ ಸೊಸೈಟಿಯ ಬಾಲಕಿಯರ ಪ್ರೌಢ ಶಾಲೆ,ಶ್ರೀ ಎಂ.ವಿ.ಪಟ್ಟಣ ಸಂಯುಕ್ತ ಪದವಿ ಪೂರ್ವ ಕಾಲೇಜಿನ (ಪ್ರಾಥಮಿಕ) ವಿಭಾಗದಿಂದ ಸಂವಿಧಾನ ಜಾಗೃತಿ ಜಾಥಾವು ರಬಕವಿಯ ನಾಕಾದಿಂದ,ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಸಾಗಿ ಬಾಲಕಿಯಯರ ಪ್ರೌಢಶಾಲೆ ಮುಂದಿನಿಂದ ಸಾಗಿ ನಗರದ ಶ್ರೀ ಶಂಕರಲಿಂಗ ದೇವಸ್ಥಾನದ ಸರ್ಕಲ್ ನಲ್ಲಿ ಮುಕ್ತಾಯಗೊಂಡಿತು. ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ರವರು ಬರೆದ ದೇಶದ ಧರ್ಮ ಗ್ರಂಥ ಸಂವಿಧಾನದಲ್ಲಿ ಉಲ್ಲೇಖಿತ ಘೋಷ ವಾಕ್ಯಗಳು ಮೊಳಗುತ್ತಿದ್ದವು.ಶಾಲೆಯ ಮುಖ್ಯ ಗುರುಗಳಾದ ಪಿ.ಹೆಚ್.ಪ್ರತಾಪ,
ಬಿ.ಎಸ್.ಪಾಟೀಲ್,
ಆರ್.ಬಿ.ಜೋಗಳೆ,
ವಿ.ಪೀ. ಮಾಳಿ,
ಶಿವಶರಣಪ್ಪ, ವಾಯ್.ಬೀ.ವಾಘ್ಮೋರೆ,
ಎಂ.ಎಸ್.ಕೊಣ್ಣೂರ,
ಎಸ್.ಎಸ್.ಜಡಿ,
ವಾಯ್.ಬಿ.ವಾಜಂತ್ರಿ,
ಎಸ್.ಎಂ.ತಳವಾರ ಹಾಗೂ ಶ್ರೀಮತಿ.ಎಸ್.ಜಿ.ಸರಿಕಾರ
ಮತ್ತು ಎಸ್.ಎಸ್.ಬೆಳಗಲಿ ಹಾಗೂ ನಗರಸಭೆ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ:ಆನಂದ.ಮ.ಹೂಗಾರ,ರಬಕವಿ-ಬನಹಟ್ಟಿ