ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಮುಸ್ಲಿಂ ಭಾಂಧವರು ಉಮ್ರಾ ಯಾತ್ರೆಗೆ ಹೋಗುವ ಯಾತ್ರಿಕರಿಗೆ ಪಟ್ಟಣದ ಮಹಾಂತಸ್ವಾಮಿ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರುಗಳಿಂದ ಸನ್ಮಾನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಶ್ರೀ ಸಿದ್ದಣ್ಣ ಮಲಗಲದಿನ್ನಿ,ಕಾಂಗ್ರೆಸ್ ಯುವ ಮುಖಂಡ ಆರ್.ಎಮ್.ರೇವಡಿ,ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ಖಾಸೀಂಸಾಬ ಟೊಣ್ಣುರ್ ಹಾಗೂ ಬಾಬು ಹವಾಲ್ದಾರ ಇನ್ನೂ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.
