ಕಲಬುರಗಿ:ದೇಶದ ಮಾಜಿ ಉಪಪ್ರಧಾನಿ,ಸ್ವಾತಂತ್ರ್ಯ ಹೋರಾಟಗಾರ,ದಲಿತ ನಾಯಕ ಬಾಬು ಜಗಜೀವನರಾಮ ಅವರಿಗೆ ಭಾರತ ರತ್ನ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಬಿಜೆಪಿ ಮುಖಂಡ ರವಿ ಸಿಂಗೆ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ದಲಿತರು ಹಿಂದೂ ಮಡಿಲಲ್ಲಿ ಉಳಿಯಬೇಕೆಂದು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದ ದೇಶದ ತುಳಿತಕ್ಕೊಳಗಾದ ಜನರ ಉನ್ನತಿಗೆ ಮಹಾನ್ ಕೊಡುಗೆ ನೀಡಿ ಇತಿಹಾಸದಲ್ಲಿ ಅನುಕರಣೀಯವಾಗಿರುವ ಜಗಜೀವನರಾಮ ಅವರಿಗೆ ಭಾರತ ರತ್ನ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂಡಿತ ಮದನ ಮೋಹನ ಮಾಳವೀಯರಿಂದ ಪ್ರೇರಿತರಾಗಿದ್ದ ಅವರು 1925 ರಲ್ಲಿ ಹಿಂದೂ ಬನಾರಸ ವಿಶ್ವವಿದ್ಯಾಲಯ ಸೇರಿ 1935 ರಲ್ಲಿ ಹಿಂದೂ ಮಹಾಸಭಾ ಅಧಿವೇಷನದಲ್ಲಿ ಭಾಗವಹಿಸಿ ಅಸ್ಪೃಶ್ಯರಿಗೆ ದೇವಾಲಯಗಳು ಮತ್ತು ಬಾವಿಗಳನ್ನು ತೆರೆಯಲು ಪ್ರಸ್ತಾಪಿಸಿ ಅದರಲ್ಲಿ ಯಶ್ವಸಿಯಾದ ಕೀರ್ತಿ ಜಗಜೀವನರಾಮ ಅವರಿಗೆ ಸಲ್ಲುತ್ತದೆ.ಕೇಂದ್ರ ಕಾರ್ಮಿಕ,ರಕ್ಷಣಾ,ಸಂವಹನ,ಸಾರಿಗೆ ಮತ್ತು ರೈಲ್ವೆ ಮತ್ತು ಕೃಷಿ ಸಚಿವರಾಗಿ ಅಪ್ರತಿಮ ಸೇವೆ ಸಲ್ಲಿಸಿ ದೇಶವನ್ನು ಸ್ವಾವಲಂಭಿಯನ್ನಾಗಿಸಿ ಹಸಿರುಕ್ರಾಂತಿ ಹುಟ್ಟು ಹಾಕಿ ಸುದೀರ್ಘ 30 ವರ್ಷಗಳ ಕಾಲ ಕೇಂದ್ರದ ಕ್ಯಾಬಿನೆಟ್ ಸಚಿವರಾದ ಹೆಗ್ಗಳಿಕೆಗೆ ಹೊಂದಿರುವ ಜಗಜೀವನರಾಮ ಅವರಿಗೆ ಭಾರತ ರತ್ನ ನೀಡುವುದು ಅತ್ಯಂತ ಸೂಕ್ತವಾಗಿದೆ ಎಂದರು.
ಮಾದಿಗ ಚಮ್ಮಾರ ಸಮುದಾಯಕ್ಕೆ ಸೇರಿ ಕೋಟ್ಯಂತರ ದಲಿತರ ನೋವುಗಳಿಗೆ ಧ್ವನಿಯಾಗಿ ತುಳಿತಕ್ಕೊಳಗಾದ ಬಡವರು,ದಲಿತರು ಮತ್ತು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದೇ ಖ್ಯಾತರಾಗಿದ್ದ ಜಗಜೀವನರಾಮ ಅವರ ಅವಿಸ್ಮರಣೀಯ ಸೇವೆ ಪರಿಗಣಿಸಿ ಭಾರತ ರತ್ನ ನೀಡಬೇಕೆಂದು ಅವರು ಮನವಿ ಮಾಡಿಕೊಂಡರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.