ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭದ್ರಾವತಿ ನಗರಸಭೆ:128 ಲಕ್ಷ ರೂ.ಉಳಿತಾಯದ ಚೊಚ್ಚಲ ಬಜೆಟ್ ಮಂಡಿಸಿದ ಅಧ್ಯಕ್ಷೆ ಲತಾ ಚಂದ್ರಶೇಖರ್

ಭದ್ರಾವತಿ:ನಗರಸಭೆಯ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಲತಾ ಚಂದ್ರಶೇಖರ್ ಪಾರದರ್ಶಕ ಹಾಗೂ ತಾಂತ್ರಿಕತೆ ವೃದ್ಧಿಗೆ ಒತ್ತು ನೀಡುವ ಮೂಲಕ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು.
ನಗರಸಭೆ ಸ್ವಂತ ಆದಾಯಗಳಾದ ಸ್ವಯಂ ಘೋಷಿತ ಆಸ್ತಿ ತೆರಿಗೆ,ನೀರಿನ ತೆರಿಗೆ ಮತ್ತು ಇತರೆ ಆದಾಯ ಹಾಗೂ ಸರ್ಕಾರದ ಅನುದಾನಗಳು ಸೇರಿ 2024-25ನೇ ಸಾಲಿಗೆ ಒಟ್ಟು 6199.47 ಲಕ್ಷ ರೂ.ಗಳ ನಿರೀಕ್ಷೆ ಇಟ್ಟುಕೊಂಡು ನಗರದ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಒಟ್ಟು 128 ಲಕ್ಷ ರೂ.ಉಳಿತಾಯ ಬಜೆಟ್ ಮಂಡಿಸಲಾಯಿತು.
ಕಳೆದ ಸಾಲಿನ ವಾಸ್ತವ ಅದಾಯ ಮತ್ತು ವೆಚ್ಚವನ್ನು ಗಮನದಲ್ಲಿರಿಸಿಕೊಂಡು ಈ ಬಾರಿಯ ಆಯವ್ಯಯ ತಯಾರಿಸಲಾಗಿದೆ.
ನಗರಸಭೆಯ ಕಚೇರಿ ಆಡಳಿತವನ್ನು ಪಾರದರ್ಶಕವಾಗಿಸಲು ಹಾಗೂ ತ್ವರಿತ ಸೇವೆ ಒದಗಿಸಲು ಇ-ಆಫೀಸ್ ತಂತ್ರಾಂಶದ ಮೂಲಕ ನಾಗರೀಕ ಸ್ನೇಹಿ ಆಡಳಿತ,ಸರ್ವರಿಗೂ ಸೂರು ಎಂಬ ಪರಿಕಲ್ಪನೆಯಡಿ ವಸತಿರಹಿತ ನಿರಾಶ್ರಿತರಿಗೆ ಆಶ್ರಯ ತಂಗುದಾಣ ಪ್ರಾರಂಭಿಸಿದ್ದು,ಗುಣಮಟ್ಟದ ಜೀವನ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ನಗರದ ಸ್ತ್ರೀಸಶಕ್ತಿಕರಣಗೊಳಿಸುವ ಉದ್ದೇಶದಿಂದ ರಚಿಸಲಾದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಒದಗಿಸುವ ಮೂಲಕ ಸರ್ಕಾರದ ಪ್ರೋತ್ಸಾಹಧನ ನೀಡಿ ಸಬಲೀಕರಣ,ನಗರದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಉತ್ತೇಜಿಸಲು ನಗರಸಭೆಯಿಂದ ಕ್ರೀಡಾ ಪ್ರೋತ್ಸಾಹಧನ,ಕಚೇರಿ ದಾಖಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ದಾಖಲಾತಿ ಕೊಠಡಿ ವಿಸ್ತರಿಸಿ ಸುರಕ್ಷತೆಗೆ ಕ್ರಮವಹಿಸಲಾಗಿದೆ ಎಂದು 17 ಪುಟಗಳ ಆಯವ್ಯಯ ವರದಿ ಓದುವ ಮೂಲಕ 128 ಲಕ್ಷ ರೂ. ಗಳ ಉಳಿತಾಯ ಬಜೆಟ್ ಸಂಪೂರ್ಣ ಅನುಷ್ಠಾನಕ್ಕೆ ಎಲ್ಲಾ ಸದಸ್ಯರು ಅನುಮೋದನೆ ನೀಡಿ ಸಹಕರಿಸುವಂತೆ ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಕೋರಿದರು.
ನಗರಸಭೆ ಸದಸ್ಯರಾದ ಬಿಟಿ.ನಾಗರಾಜ್,ಚನ್ನಪ್ಪ ಹಾಗೂ ಬಸವರಾಜ್ ಆನೇಕೊಪ್ಪ ಮಾತನಾಡಿ, ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ ಅನುದಾನಗಳನ್ನು ಇತರೆ ಯೋಜನೆಗಳಿಗೆ ಬಳಸದೇ ಸಂಬಂಧಪಟ್ಟ ಫಲಾನುಭವಿಗಳಿಗೆ ವಿನಿಯೋಗಿಸುವ ಮೂಲಕ ಯೋಜನೆ ಸದ್ಭಳಕೆಯಾಗಬೇಕೆಂದು ಆಗ್ರಹಿಸಿದರು.
ಹಿರಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಮಾತನಾಡಿ,2010-11ನೇ ಸಾಲಿನಲ್ಲಿ ನಮ್ಮ ಅಧಿಕಾರದ ಅವಧಿಯಲ್ಲಿ ಅಂಬೇಡ್ಕರ್ ವೃತ್ತದಿಂದ ಬಿ ಹೆಚ್ ರಸ್ತೆ,ಚನ್ನಗಿರಿ ರಸ್ತೆಯ ಮೂಲಕ ಎ ಪಿ ಎಂ ಸಿ ವರೆಗಿನ ಏಕ ರಸ್ತೆಗೆ ಡಾ.ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಿ ಉದ್ಘಾಟನೆ ನಡೆಸಿದ್ದೆವು.ನಗರಸಭೆಯಿಂದ ಸಿಮೆಂಟ್ ನಾಮಫಲಕಗಳನ್ನೂ ಹಲವೆಡೆ ಅಳವಡಿಸಿದ್ದೇವೆ. ಅಂಗಡಿ ಮುಗ್ಗಟ್ಟು ಗಳಿಗೆ ಈ ಹಿಂದೆಯೇ ನೋಟಿಸ್ ನೀಡಿ ಡಾ.ರಾಜ್ ಕುಮಾರ್ ರಸ್ತೆ ಎಂದು ಬರೆಸುವಂತೆ ತಿಳಿಸಿದ್ದರೂ ಸಹ ನಿರ್ಲಕ್ಷಿಸಲಾಗಿದೆ.ಕೂಡಲೇ ಸಂಬಂಧಪಟ್ಟ ಅಂಗಡಿಮುಗ್ಗಟ್ಟುಗಳು ನಾಮಫಲಕಗಳಲ್ಲಿ ಡಾ.ರಾಜ್ ಕುಮಾರ್ ರಸ್ತೆ ಎಂದು ಬರೆಸಲು ನೋಟಿಸ್ ಜಾರಿ ಮಾಡಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದರು.ಸದಸ್ಯರುಗಳಾದ ಆರ್ ಮೋಹನ್ ಕುಮಾರ್ ಮತ್ತು ಟಿಪ್ಪು ಸುಲ್ತಾನ್ ಆದಾಯ ಸೋರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳುವ ಕುರಿತು ಸಭೆಯ ಗಮನ ಸೆಳೆದರು.ಸ್ಥಾಯೀ ಸಮಿತಿ ಅಧ್ಯಕ್ಷ ಕಾಂತರಾಜ್ ಧ್ವನಿಗೂಡಿಸಿದರು.
ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್,ಪೌರಾಯುಕ್ತ ಪ್ರಕಾಶ್ ಎಂ ಚೆನ್ನಪ್ಪನವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮಾಜಿ ಅಧ್ಯಕ್ಷರುಗಳಾದ ಶೃತಿ ವಸಂತಕುಮಾರ್,ಅನುಸುಧಾ ಮೋಹನ್ ಪಳನಿ, ಗೀತಾ ರಾಜ್ ಕುಮಾರ್,ಸದಸ್ಯರಾದ ಮಣಿ,ಜಾರ್ಜ್, ಆರ್ ಮೋಹನ್ ಕುಮಾರ್,ಮಂಜುನಾಥ್( ಟೀಕು), ಶಶಿಕಲಾ ನಾರಾಯಣಪ್ಪ,ಅನುಪಮ ಚನ್ನೇಶ್, ಕೆ.ಸುದೀಪ್ ಕುಮಾರ್,ನಾಗರತ್ನ,ರೂಪಾವತಿ,ಸವಿತ, ಉದಯಕುಮಾರ್,ರೇಖಾ ಪ್ರಕಾಶ್,ಪ್ರೇಮ ಬದರಿನಾರಾಯಣ್,ಕೋಟೇಶ್ವರ ರಾವ್,ಪಲ್ಲವಿ ಎಸ್.ಮಂಜುಳ ಸುಬ್ಬಣ್ಣ,ಅನಿತಮಲ್ಲೇಶ್ ಸೇರಿದಂತೆ ಹಲವರು ಹಾಜರಿದ್ದರು.ಪೌರಾಯುಕ್ತ ಪೌರಾಯುಕ್ತ ಪ್ರಕಾಶ್ ಎಂ ಚೆನ್ನಪ್ಪನವರ್ ಸ್ವಾಗತಿಸಿದರು. ಕಂದಾಯಾಧಿಕಾರಿ ಎಂ ಎಸ್ ರಾಜ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು ಹಾಗೂ ಸಭೆಗೆ ಅಗತ್ಯ ಮಾಹಿತಿ ನೀಡಿದರು.

ವರದಿ:ಕೆ ಆರ್ ಶಂಕರ್,ಭದ್ರಾವತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ