ಸಿರವಾರ:ಪಟ್ಟಣ ಪಂಚಾಯತ್ ಪೂರ್ವಭಾವಿ ಸಭೆಯಲ್ಲಿ ಬೇಡಿಕೆಗಳ 2024-25 ನೇ ಮುಂಗಡ ಪತ್ರ ತಯಾರಿಕೆಗೆ ಸಾರ್ವಜನಿಕರು ಪಟ್ಟಣ ಪಂಚಾಯತ ಸದಸ್ಯರುಗಳ ಕುಡಿಯುವ ನೀರಿನ ವ್ಯವಸ್ಥೆ,ಕೊಳವೆ ಬಾವಿ,ವೈಯಕ್ತಿಕ ಶೌಚಾಲಯಗಳು,ವೈದ್ಯಕೀಯ ಸೌಲಭ್ಯ,ಪಟ್ಟಣ ಪಂಚಾಯತಿಯಲ್ಲಿ ಮೀಟಿಂಗ್ ಮಾಡುವ ಹಾಲ್,ಪ್ರತಿ ಸಭೆಗೆ ಮಹಿಳೆಯರನ್ನು ಕರೆತರುವುದು,ಧೂಳು ನಿಯಂತ್ರಣಕ್ಕೆ ಶ್ರಮಿಸುವುದು, ನೀರಿನ ಟ್ಯಾಂಕ್ ಗಳನ್ನು ನಿರ್ಮಿಸುವುದು,ಡಿವೈಡರ್ ನಡುವೆ ಸಸಿಗಳನ್ನು ನೆಡುವುದು ಈ ಎಲ್ಲಾ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ಮುಂದುಡುತ್ತೇನೆಂದು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಾದ ತಿಮ್ಮಪ್ಪ ಜಗ್ಲಿ ಅವರು ಹೇಳಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರು,ಸಿಬ್ಬಂದಿಗಳು ಪೌರ ಕಾರ್ಮಿಕರು, ಸಾರ್ವಜನಿಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.